ಯುದ್ಧಪೀಡಿತ ಇಸ್ರೇಲ್ ನೆಲದಲ್ಲಿ ಅಮೆರಿಕನ್ ಪ್ರೆಸಿಡೆಂಟ್ ಬೈಡೆನ್!

ಹಮಾಸ್ & ಇಸ್ರೇಲ್ ನಡುವೆ ಯುದ್ಧದ ಜ್ವಾಲೆ ಧಗಧಗಿಸಿ, ಸಾವಿರಾರು ಜನರ ಜೀವ ಬಲಿ ಪಡೆದಿದೆ. ಹಾಗೇ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದು, ಎಲ್ಲೆಲ್ಲೂ ನರಳಾಟ ಶುರುವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಿಢೀರ್ ಇಸ್ರೇಲ್‌ಗೆ ಭೇಟಿ ಕೊಟ್ಟು, ಜಗತ್ತಿನ ಗಮನ ಸೆಳೆದಿದ್ದಾರೆ. ಹಾಗಾದ್ರೆ ಜೋ ಬೈಡನ್ ಈಗ ಇಸ್ರೇಲ್‌ಗೆ ಬಂದಿದ್ದು ಏಕೆ? ಯುದ್ಧ ಇನ್ನಷ್ಟು ಭೀಕರ ಸ್ವರೂಪ ಪಡೆಯುತ್ತಾ?

ಹೌದು, ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ ಇಸ್ರೇಲ್ ಸೇನೆಯಿಂದ ಮರುದಾಳಿ ಶುರುವಾಗಿದೆ. ನೋಡ ನೋಡುತ್ತಲೇ ಗಾಜಾದಲ್ಲಿ 3500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 12,500 ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, 500 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ಅರಬ್ ದೇಶಗಳ ಜೊತೆ ಅಮೆರಿಕ ಅಧ್ಯಕ್ಷ ಬೈಡನ್ ನಿಗದಿ ಮಾಡಿದ್ದ ಮಹತ್ವದ ಸಭೆ ರದ್ದಾಗಿದೆ. ಇಡೀ ಜಗತ್ತಿಗೆ ಇಸ್ರೇಲ್ & ಹಮಾಸ್ ಯುದ್ಧ ಗ್ಯಾಂಗ್ರಿನ್ ರೀತಿ ಹಬ್ಬುವ ಭೀತಿ ಮಧ್ಯೆ ದಿಢೀರ್ ಬೈಡನ್ ಇಸ್ರೇಲ್‌ಗೆ ಬಂದು ಇಳಿದಿದ್ದಾರೆ.

Discover why American President Joe Biden arrived in Israel

ಇಸ್ರೇಲ್ ರಾಜಧಾನಿಗೆ ಬಂದ ಅಮೆರಿಕ ಅಧ್ಯಕ್ಷ

ಟೆಲ್ ಅವೀವ್ ಇಸ್ರೇಲ್ ರಾಜಧಾನಿ, ಇಲ್ಲಿಗೆ ಇಂದು ಕೆಲವೇ ಸಮಯದ ಹಿಂದಷ್ಟೇ ಜೋ ಬೈಡನ್ ಬಂದು ಇಳಿದರು. ವಿಶೇಷ ವಿಮಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗ ಎಂಟ್ರಿ ಕೊಟ್ಟಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಇಡೀ ಜಗತ್ತು ಈಗ ಬೈಡನ್ ಮತ್ತು ನೆತನ್ಯಾಹು ಚರ್ಚೆ ಬಗ್ಗೆಯೇ ಗಮನ ಕೇಂದ್ರೀಕರಿಸಿದೆ. ಹಾಗೇ ಇವರಿಬ್ಬರ ನಿರ್ಧಾರದ ಮೇಲೆಯೇ ಹಮಾಸ್ & ಇಸ್ರೇಲ್ ಯುದ್ಧದ ಭವಿಷ್ಯ ನಿರ್ಧಾರವಾಗಲಿದೆ.

ಅಮೆರಿಕ ಅಧ್ಯಕ್ಷರಿಗೂ ಜೀವ ಭಯ?

ಹಮಾಸ್ ಬಂಡುಕೋರರು ಯಾವ ಸಮಯದಲ್ಲಿ ಬೇಕಾದ್ರೂ ಇಸ್ರೇಲ್ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಅಲರ್ಟ್ ಆಗಿರುವ ಅಮೆರಿಕದ ಭದ್ರತಾ ಪಡೆಗಳು, ಇದೀಗ ಇಸ್ರೇಲ್ ರಾಜಧಾನಿಗೆ ಭಾರಿ ಪ್ರಮಾಣದ ಭದ್ರತೆ ಒದಗಿಸಿವೆ. ಇಸ್ರೇಲ್‌ನ ಸೇನೆಯೂ ಅಲರ್ಟ್ ಆಗಿದ್ದು ಅಮೆರಿಕ ಅಧ್ಯಕ್ಷರಿಗೆ ಏನೂ ಆಗದಂತೆ ಹದ್ದಿನ ಕಣ್ಣಿಟ್ಟಿದೆ. ಟೆಲ್ ಅವೀವ್ ಮೇಲೆ ಯಾವುದೇ ರೀತಿಯ ಸಂಭಾವ್ಯ ದಾಳಿ ನಡೆದರೂ ತಡೆಯುವ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Discover why American President Joe Biden arrived in Israel

ಸಾಮಾನ್ಯ ಜನರ ಪರಿಸ್ಥಿತಿ ಏನು?

ಗಾಜಾಪಟ್ಟಿ ಉತ್ತರ ಭಾಗ ಛಿದ್ರ ಛಿದ್ರವಾಗಿ ಹೋಗಿದೆ. ಹೀಗಾಗಿ ದಕ್ಷಿಣ ಭಾಗ ಮಾತ್ರ ಒಂದಷ್ಟು ನೆಲೆ ನೀಡಿದೆ. ಅಲ್ಲದೆ ಗಾಜಾಪಟ್ಟಿ ಜನಕ್ಕೆ ಜೀವ ಉಳಿಸಿಕೊಳ್ಳಲು ಈಗ ಇರುವ ಏಕೈಕ ಮಾರ್ಗ ದಕ್ಷಿಣ ಮಾತ್ರ. ಅದರಲ್ಲೂ ಈಜಿಪ್ಟ್ ಜೊತೆಗೆ ಗಡಿ ಇರುವ ಗಾಜಾದ ರಫಾ ಕೇಂದ್ರ ಸಂಜೀವಿನಿ ಎನ್ನಬಹುದು. ಇಲ್ಲಿಂದ ಮಾತ್ರ ಗಾಜಾಪಟ್ಟಿ ಜನ ಹೊರ ಹೋಗಲು ಸಾಧ್ಯ. ಇದನ್ನ ಬಿಟ್ಟರೆ ಗಾಜಾಪಟ್ಟಿ ಉತ್ತರ ಭಾಗದಲ್ಲಿ ಇರುವ ಇನ್ನೆರಡು ಹೊರ ಹೊಗುವ ದಾರಿಗಳನ್ನ ಇಸ್ರೇಲ್ ಸೇನೆ ಇದೀಗ ಮುಚ್ಚಿ ಹಾಕಿದೆ. ಹೀಗಾಗಿ ಬೈಡನ್ ಭೇಟಿ ವೇಳೆ ಈ ಎಲ್ಲಾ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.

ಒಟ್ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಕಿರಿಕ್ ಈಗ ಜಗತ್ತಿಗೆ ಕಂಟಕ ತಂದೊಡ್ಡಿದೆ. ಭವಿಷ್ಯದಲ್ಲಿ ಈ ಯುದ್ಧ ದೊಡ್ಡ ಗಂಡಾಂತರ ತರುವ ಸೂಚನೆ ನೀಡಿದ್ದು ಅಮೆರಿಕ ಕೂಡ ಅಲರ್ಟ್ ಆದಂತೆ ಕಾಣುತ್ತಿದೆ. ಅದ್ರಲ್ಲೂ ಇಸ್ರೇಲ್ ಸೇನೆ ನಿನ್ನೆ ಗಾಜಾದ ಆಸ್ಪತ್ರೆ ಮೇಲೆ ನಡೆಸಿದ ದಾಳಿಯು ಭಯ ಹುಟ್ಟಿಸಿದೆ. ಇದು ಮುಂದೆ ಅಮೆರಿಕ & ಅರಬ್ ದೇಶಗಳ ನಡುವೆ ಬಿರುಕು ಮೂಡಿಸುವ ಮುನ್ಸೂಚನೆ ನೀಡಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಬೈಡನ್ ಯಾವ ರೀತಿ ನಿಲುವು ತೆಗೆದುಕೊಳ್ತಾರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+