ಉತ್ತರ ಕೊರಿಯಾ ವಿರುದ್ಧ ಯುದ್ಧ ಸಾರುತ್ತಾ ದೊಡ್ಡಣ್ಣ ಅಮೆರಿಕ?

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಒಂದಲ್ಲ ಒಂದು ಕಿತಾಪತಿ ಮಾಡಿ ಜಗತ್ತಿನ ನಿದ್ದೆ ಕೆಡಿಸುತ್ತಾನೆ. ಅದರಲ್ಲೂ ತನ್ನ ಪರಮಾಣು ಅಸ್ತ್ರಗಳ ಮೂಲಕ ಶತ್ರುಗಳಿಗೆ ಆತಂಕ ಹುಟ್ಟಿಸುತ್ತಿದ್ದ ಈತ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಅಮೆರಿಕದ ನಾಯಕರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾನೆ. ಹಾಗಾದ್ರೆ ಕಿಮ್ ಈ ಬಾರಿ ಮಾಡಿರುವ ಕಿತಾಪತಿ ಏನು ಗೊತ್ತಾ?

ಉತ್ತರ ಕೊರಿಯಾ ಸರ್ಕಾರಕ್ಕೆ ಹಾಗೂ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪಾಲಿಗೆ ಇದೇ ಅಮೆರಿಕ ಆಜನ್ಮ ವೈರಿ. ಅದರಲ್ಲೂ ಕಿಮ್ ಕಥೆ ಮುಗಿಸಲು ಹಲವು ಶತ್ರು ದೇಶಗಳು ಈಗ ಹೊಂಚು ಹಾಕುತ್ತಿವೆ ಎಂಬ ಆರೋಪವನ್ನೂ ಉತ್ತರ ಕೊರಿಯಾ ಮಾಡುತ್ತಿದೆ. ಹೀಗಿದ್ದಾಗ ತನ್ನ ರಕ್ಷಣೆಗೆ ಅಂತಾ ಇಷ್ಟು ದಿನ ಪರಮಾಣು ಅಸ್ತ್ರಗಳನ್ನು ಉತ್ತರ ಕೊರಿಯಾ ಪರೀಕ್ಷೆಗೆ ಒಳಪಡಿಸುತ್ತಿತ್ತು. ಇಷ್ಟು ಮಾತ್ರವಲ್ಲ ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಉತ್ತಮ ಸಂಬಂಧ ಹೊಂದಿದ್ದು, ಅಕಸ್ಮಾತ್ ಅಮೆರಿಕ ತನ್ನ ಮೇಲೆ ದಾಳಿ ಮಾಡಿದರೆ ರಕ್ಷಣೆಗೆ ಬರಲಿ ಎಂಬ ಲೆಕ್ಕಾಚಾರ ಇದೆ. ಹೀಗಿದ್ದಾಗಲೆ ಮತ್ತೊಂದು ಸ್ಫೋಟಕ ಮಾಹಿತಿ ರಿವೀಲ್ ಆಗಿದೆ.

Discover Why America, Japan & South Korea Angry On North Korean Administration

ರಷ್ಯಾಗೆ ಗುಟ್ಟಾಗಿ ಶಸ್ತ್ರಾಸ್ತ್ರ ಪೂರೈಕೆ?

ವಿಶ್ವದ ಭೂಪಟ ನೋಡಿದರೆ ನಮಗೆ ಉತ್ತರ ಕೊರಿಯಾ ಒಂದು ರೊಟ್ಟಿಯ ತುಣುಕಿನಂತೆ ಕಾಣುತ್ತದೆ. ಆದರೆ ಈ ದೇಶ ಪರಮಾಣು ಅಸ್ತ್ರಗಳ ದೊಡ್ಡ ಸಂಗ್ರಹವನ್ನೇ ಇಟ್ಟುಕೊಂಡು ಬೆದರಿಕೆ ಹಾಕುತ್ತಿದೆ. ಇಷ್ಟು ಮಾತ್ರವಲ್ಲ ರಷ್ಯಾ ಜೊತೆ ಒಂದಷ್ಟು ಕಿಲೋ ಮೀಟರ್‌ನಷ್ಟು ಉದ್ದದ ಗಡಿಯನ್ನೂ ಉತ್ತರ ಕೊರಿಯಾ ಹಂಚಿಕೊಂಡಿದೆ. ಇದೇ ಗಡಿ ಭಾಗದಿಂದ, ರಷ್ಯಾ ಸೇನೆಗೆ ಕಿಮ್ ಗ್ಯಾಂಗ್ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದ್ರಲ್ಲಿ ಗುಟ್ಟಾಗಿ ನೂರಾರು ಕಂಟೇನರ್ ಮೂಲಕ ಈ ರೀತಿಯ ಶಸ್ತ್ರಾಸ್ತ್ರ ಪೂರೈಕೆ ವ್ಯವಹಾರ ನಡೆದಿದೆ ಎಂಬುದಾಗಿ ಅಮೆರಿಕ ಆರೋಪ ಮಾಡಿದೆ. ಇದೇ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ, ಜಪಾನ್ ಕೂಡ ರೊಚ್ಚಿಗೆದ್ದಿವೆ.

ಉಕ್ರೇನ್ ವಿರುದ್ಧ ಪರೋಕ್ಷ ಯುದ್ಧ?

ಜಂಟಿ ಹೇಳಿಕೆ ನೀಡಿರುವ ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ ದೇಶಗಳು ಕಿಮ್ ಬಗ್ಗೆ ಆಕ್ರೋಶ ಹೊರಹಾಕಿವೆ. ಅಲ್ಲದೆ ಉಕ್ರೇನ್ ಜನರ ಪರವಾಗಿ ಹಾಗೂ ಉಕ್ರೇನ್ ರಕ್ಷಣೆಗಾಗಿ ನಾವು ಸದಾ ಬೆಂಬಲ ನೀಡುತ್ತಿದ್ದೇವೆ. ಆದರೆ ಉ.ಕೊರಿಯಾ ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಮೂಲಕ ಉಕ್ರೇನ್ ವಿರುದ್ಧ ಪರೋಕ್ಷ ಯುದ್ಧ ಮಾಡಿದೆ ಎಂಬ ಆರೋಪವನ್ನ ಕೂಡ ಜಪಾನ್, ಅಮೆರಿಕ, ದ.ಕೊರಿಯಾ ಮಾಡಿವೆ. ಇದು ಸಂಚಲನ ಸೃಷ್ಟಿಸಿದ್ದು, ಈ ಸಮಯದಲ್ಲೇ ಉತ್ತರ ಕೊರಿಯಾ ವಿರುದ್ಧ ಯುದ್ಧ ಸಾರುತ್ತವಾ? ಎಂಬ ಡೌಟ್ ಹುಟ್ಟಿದೆ.

ಯಾರು ನಂಬಿಕೆಗೆ ಅರ್ಹರು?

ರಷ್ಯಾ ಅಧ್ಯಕ್ಷ ಪುಟಿನ್ ಮತ್ತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದೋಸ್ತಿಯ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಉತ್ತರ ಕೊರಿಯಾಗೆ ಏನು ಬೇಕೋ ಅದನ್ನು ರಷ್ಯಾ ಕೊಡುತ್ತಿದೆ, ಹಾಗೇ ರಷ್ಯಾಗೆ ಏನು ಬೇಕೋ ಅದನ್ನ ಕಿಮ್ ಜಾಂಗ್ ಉನ್ ಸಪ್ಲೈ ಮಾಡ್ತಿದ್ದಾನೆ. ಹೀಗಿದ್ದರೂ ಉ.ಕೊರಿಯಾ ಸರ್ವಾಧಿಕಾರಿ ಆಗಲಿ ಅಥವಾ ಉ.ಕೊರಿಯಾ ಸರ್ಕಾರ ಆಗಲಿ ತಾವು ಹೀಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದೇವೆ ಎಂಬುದನ್ನ ಒಪ್ಪಿಕೊಂಡಿಲ್ಲ. ಹೀಗೆ ಗೊಂದಲ ಹೆಚ್ಚಾಗಿ, ಯಾರನ್ನ ನಂಬುವುದು ಎಂಬಂತಾಗಿದೆ.

Discover Why America, Japan & South Korea Angry On North Korean Administration

ಅಷ್ಟಕ್ಕೂ ಕೆಲವು ದಿನಗಳ ಹಿಂದೆ ಅಮೆರಿಕ ಮಾಡಿದ್ದ ಆರೋಪದಂತೆ 1 ಸಾವಿರ ಕಂಟೇನರ್ ಶಸ್ತ್ರಾಸ್ತ್ರವನ್ನು ರಷ್ಯಾಗೆ ಉತ್ತರ ಕೊರಿಯಾ ಕಳುಹಿಸಿಕೊಟ್ಟಿದೆ ಅಂತಾ ಹೇಳಲಾಗಿತ್ತು. ಉತ್ತರ ಕೊರಿಯಾ ಗಡಿ ಭಾಗ ರಷ್ಯಾ ಜೊತೆ ಹೊಂದಿಕೊಂಡಿದೆ. ಹೀಗೆ ಅಲ್ಲಿಂದಲೇ ಉತ್ತರ ಕೊರಿಯಾ 1 ಸಾವಿರ ಕಂಟೇನರ್ ಶಸ್ತ್ರಾಸ್ತ್ರಗಳನ್ನ ರಷ್ಯಾ ಸೇನೆಗೆ ಕಳುಹಿಸಿ ಕೊಟ್ಟಿರಬಹುದು ಎನ್ನಲಾಗಿದೆ. ಇದನ್ನು ಉಕ್ರೇನ್ ವಿರುದ್ಧ ರಷ್ಯಾ ಬಳಸಲಿದೆ ಎಂದು ಅಮೆರಿಕ ಆರೋಪಿಸಿತ್ತು. ಈ ಕಾರಣಕ್ಕೆ ಈಗ ಜಪಾನ್ ಮತ್ತು ದಕ್ಷಿಣ ಕೊರಿಯಾ ಕೂಡ ಅಮೆರಿಕ ಜೊತೆಗೆ ಧನಿಗೂಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+