Israel & Gaza: ಗಾಜಾ ವಿಚಾರಕ್ಕೆ ಡೊನಾಲ್ಡ್ ಟ್ರಂಪ್ ಎಂಟ್ರಿ ಗ್ಯಾರಂಟಿ?
ಗಾಜಾ & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಅಮೆರಿಕಗೆ ತಲೆನೋವು ತಂದಿದೆ, ಈ ಯುದ್ಧದ ವಿಚಾರದಲ್ಲಿ ಅಮೆರಿಕ ಯಾವ ನಿರ್ಧಾರ ಕೈಗೊಳ್ಳುತ್ತದೆ? ಅಂತಾ ಇಡೀ ಜಗತ್ತು ಇದೀಗ ಚರ್ಚೆ ಮಾಡುತ್ತಿದೆ. ಅತ್ತ ರಷ್ಯಾ & ಉಕ್ರೇನ್ ನಡುವೆ ವಾರ್ ನಡೆಯುತ್ತಿರುವ ಈ ಸಮಯದಲ್ಲೇ ಗಾಜಾ & ಇಸ್ರೇಲ್ ನಡುವೆ ಕೂಡ ಭಾರಿ ದೊಡ್ಡ ಕದನ ಏರ್ಪಟ್ಟಿದೆ. ಹೀಗೆ ಎರಡೂ ಯುದ್ಧಗಳು ಅಮೆರಿಕಗೆ ಭಾರಿ ತಲೆನೋವು ತಂದಿಟ್ಟಿದೆ.
ಗಾಜಾ ಪಟ್ಟಿಯಲ್ಲಿ ಇರುವ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಗಾಜಾ ಪಟ್ಟಿಯಿಂದ ಇಸ್ರೇಲ್ ಒಳಗೆ ನುಗ್ಗಿ, ನೂರಾರು ಇಸ್ರೇಲ್ ನಾಗರಿಕರ ಅಪಹರಣ ಮಾಡಿ ಒತ್ತೆಯಾಳುಗಳ ರೂಪದಲ್ಲಿ ಇಟ್ಟುಕೊಂಡ ಆರೋಪ ಕೂಡ ಮಾಡಲಾಗಿದೆ. ಹೀಗಿದ್ದಾಗ ಕಿಚ್ಚು ಜೋರಾಗಿ ಕಳೆದ ಒಂದೂವರೆ ವರ್ಷ ಗಾಜಾ & ಇಸ್ರೇಲ್ ನಡುವೆ ಭರ್ಜರಿ ವಾರ್ ನಡೆದಿದೆ. ಹೀಗಿದ್ದಾಗ ಅಮೆರಿಕದ ನಡೆ ಕುರಿತು ಇದೀಗ ಭಾರಿ ಕುತೂಹಲ ಮೂಡಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರ ಏನು?
ಡೊನಾಲ್ಡ್ ಟ್ರಂಪ್ ಯಾವಾಗ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆದರೋ, ಅದೇ ಕ್ಷಣದಿಂದ ಅಮೆರಿಕದಲ್ಲಿ ಹೊಸ ನೀತಿ & ನಿರೂಪಣೆ ಶುರುವಾಗಿದೆ. ಅದರಲ್ಲೂ ಅಮೆರಿಕ ಈಗ ಯುದ್ಧ ವಿಚಾರದಲ್ಲಿ ತನ್ನದೇ ಹೊಸ ನಿಲುವು ಹೊಂದಿದೆ. ಹೀಗಿದ್ದಾಗ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಪರದಾಡುತ್ತಿರುವ ಅಮೆರಿಕ ಇದೀಗ ಗಾಜಾ ವಿಚಾರದಲ್ಲಿ ಯಾವ ನಿಲುವನ್ನು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಹೀಗಾಗಿ ಗಾಜಾ & ಇಸ್ರೇಲ್ ನಡುವಿನ ಯುದ್ಧ ಕುತೂಹಲ ಘಟ್ಟ ತಲುಪಿದೆ.












Click it and Unblock the Notifications