ಇರಾನ್ ನೆಲಕ್ಕೆ ನುಗ್ಗಲಿದೆಯಾ ರಷ್ಯಾ ಸೇನೆ? ಇಸ್ರೇಲ್‌ಗೆ ಪುಟಿನ್ ಹುಡುಗರಿಂದ ಶಾಕ್? Israel And Iran
ಇರಾನ್ & ಇಸ್ರೇಲ್ ನಡುವೆ ಘನಘೋರ ಯುದ್ಧ ನಡೆಯುತ್ತಿದ್ದು, ಇಬ್ಬರೂ ತಮ್ಮ ತಮ್ಮ ಬಳಿ ಇರುವ ಕಿಲೋ ಮೀಟರ್ ಉದ್ದಗಲದ ಭೂಮಿಯನ್ನ ಕೆಲವೇ ಕ್ಷಣಗಳಲ್ಲಿ ಉಡಾಯಿಸುವ ಅಸ್ತ್ರ ಬಳಸುತ್ತಿದ್ದಾರೆ. ಇಸ್ರೇಲ್ ಸೇನೆ ಇರಾನ್ ಮೇಲೆ ಭೀಕರ ದಾಳಿ ನಡೆಸುತ್ತಿರುವ ವಿಡಿಯೋ & ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತಿವೆ. ಇದೇ ವೇಳೆ, ಮತ್ತೊಂದು ಭರ್ಜರಿ ಸಂಚಲನ ಸೃಷ್ಟಿ ಮಾಡುವ ಸುದ್ದಿ ಹಬ್ಬಿದೆ. ಹಾಗಾದ್ರೆ ಇರಾನ್ ನೆಲಕ್ಕೆ ನುಗ್ಗಲಿದೆಯಾ ರಷ್ಯಾ ಸೇನೆ? ಇಸ್ರೇಲ್‌ಗೆ ಪುಟಿನ್ ಹುಡುಗರಿಂದ ಶಾಕ್?
ಹೌದು, ಒಂದು ಲೆಕ್ಕಾಚಾರದ ಪ್ರಕಾರ ಈಗ ದಿಢೀರ್ ಇರಾನ್ & ಇಸ್ರೇಲ್ ನಡುವೆ ಭೀಕರ ಪರಮಾಣು ಯುದ್ಧವೇ ನಡೆದು ಹೋಗುವ ಅಪಾಯ ಕಾಡುತ್ತಿದೆ. ಈಗಾಗಲೇ ದೊಡ್ಡ ದೊಡ್ಡ ಗಾತ್ರದ ಕ್ಷಿಪಣಿಗಳನ್ನು ಛೂ ಬಿಟ್ಟು, ಒಬ್ಬರು ಮತ್ತೊಬ್ಬರ ನೆಲವನ್ನು ಧ್ವಂಸ ಮಾಡ್ತಿದ್ದು ಆತಂಕ ಹೆಚ್ಚಿಸಿದೆ. ಇದೇ ಸಮಯದಲ್ಲಿ ಅತ್ತ ಇರಾನ್ ಕೂಡ ಪರಮಾಣು ಬಾಂಬ್ ರಾಶಿ ರೆಡಿ ಮಾಡಿದ್ದು, ಇನ್ನೊಂದು ಕಡೆ ಇಸ್ರೇಲ್ ಕೂಡ ಅದೇ ರೀತಿ ನ್ಯೂಕ್ಲಿಯರ್ ದಾಳಿ ಮಾಡಿ ಇಡೀ ಇರಾನ್ ನೆಲವನ್ನು ಉಡಾಯಿಸಲು ಸಜ್ಜಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿರುವಾಗ ಇರಾನ್ ನೆಲಕ್ಕೆ ನುಗ್ಗಲಿದೆಯಾ ರಷ್ಯಾ ಸೇನೆ? ಎಂಬ ಚರ್ಚೆಯೂ ಶುರುವಾಗಿದೆ.

ಇರಾನ್ ನೆಲಕ್ಕೆ ನುಗ್ಗಲಿದೆಯಾ ರಷ್ಯಾ ಸೇನೆ?
ಅಂದಹಾಗೆ ಇರಾನ್ ಜೊತೆಗೆ ರಷ್ಯಾ ಉತ್ತಮ ಸಂಬಂಧ ಹೊಂದಿದ್ದು, ಇಬ್ಬರ ನಡುವೆಯೂ ಇದೀಗ ಭಾರಿ ಅತ್ಯುತ್ತಮ ಸ್ನೇಹ & ವ್ಯಾಪಾರ ಸಂಬಂಧ ಸಾಗಿದೆ. ಇಂತಹ ಸಮಯದಲ್ಲೇ ರಷ್ಯಾ ದೇಶ ಕಷ್ಟದಲ್ಲಿ ಇರುವ ತನ್ನ ಗೆಳೆಯ ಇರಾನ್ ಬೆನ್ನಿಗೆ ನಿಲ್ಲುತ್ತಾ? ಅನ್ನೋ ಡೌಟ್ ಕೂಡ ಕಾಡುತ್ತಿದೆ. ಯಾಕಂದ್ರೆ ಈ ಸಮಯದಲ್ಲಿ, ಇರಾನ್‌ಗೆ ದೊಡ್ಡ ಮಟ್ಟದಲ್ಲಿ ಸಹಾಯ ಬೇಕಿದೆ. ಹೀಗಾಗಿ ರಷ್ಯಾ ಸೇನೆ ನೇರವಾಗಿ ಇರಾನ್ ನೆಲಕ್ಕೆ ಹೋಗಿ ಇಸ್ರೇಲ್ & ಅಮೆರಿಕದ ವಿರುದ್ಧ ಹೋರಾಟ ನಡೆಸುತ್ತಾ? ಎಂಬ ಚರ್ಚೆ ಜೋರಾಗಿದೆ.












Click it and Unblock the Notifications