ಸೋತು ಹೋದ ಸರ್ವಾಧಿಕಾರಿ.. ಯಾರನ್ನ ಕೊಲೆ ಮಾಡ್ತಾನೋ!
ಮೆಂಟಲ್ ಸರ್ವಾಧಿಕಾರಿ, ಉತ್ತರ ಕೊರಿಯಾ ಪ್ರಜೆಗಳ ಪಾಲಿನ ಯಮ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಸೋತು ಹೋಗಿದ್ದಾನೆ. ಕಿಮ್ ಪಟಾಲಂ ಮಾಡಿಕೊಂಡ ಎಡವಟ್ಟಿಗೆ ಇದೀಗ, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಉತ್ತರ ಕೊರಿಯಾ ಮಾನ ಹರಾಜು ಆಗಿದೆ. ಹೀಗೆ ಕಿಮ್ ಸೋತು ಸುಣ್ಣವಾಗಿರುವ ಹೊತ್ತಲ್ಲೇ ಯಾರ ಜೀವ ಹೋಗುತ್ತೋ? ಅಂತಾ ಭಯ ಆವರಿಸಿದೆ.
ಅಮೆರಿಕದ ಬದ್ಧ ವಿರೋಧಿ & ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳ ಶತ್ರು ಉತ್ತರ ಕೊರಿಯಾ ರೊಚ್ಚಿಗೆದ್ದಿದೆ. ಇಷ್ಟುದಿನ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೇವಲ ಮಿಸೈಲ್ ಅಂದ್ರೆ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಪ್ರಯೋಗ ಮಾಡುತ್ತಿದ್ದ. ಆದರೆ, ಕಿಮ್ ಜಾಂಗ್ ಉನ್ ಕಣ್ಣು ಈಗ ಉಪಗ್ರಹಗಳ ಮೇಲೆ ಬಿದ್ದಿದೆ. ಹೀಗಾಗಿಯೇ ಹೊಸ ಹೊಸ ಉಪಗ್ರಹ ಉಡಾವಣೆ ಮಾಡಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ಮೇಲೆ ಕಣ್ಗಾವಲು ಇಡಲು ಮುಂದಾಗಿದ್ದ. ಆದರೆ ಈ ಕೆಲಸದಲ್ಲಿ ಸೋತು ಸುಣ್ಣವಾಗಿದ್ದಾನೆ ಕಿಮ್!

ಸರ್ವಾಧಿಕಾರಿ ಬುಡಕ್ಕೆ ಬೆಂಕಿ ಬಿತ್ತು!
ಉ.ಕೊರಿಯಾ 2024 ಜೂನ್ 3ರ ಒಳಗೆ ಉಪಗ್ರಹ ಉಡಾವಣೆ ಮಾಡುವ ಯೋಜನೆ ಹೊಂದಿತ್ತು ಈಗಾಗಲೇ ಒಮ್ಮೆ ಉತ್ತರ ಕೊರಿಯಾ 'ಗೂಢಚಾರ' ಉಪಗ್ರಹ ಉಡಾವಣೆ ಮಾಡಿತ್ತು. ಇದೀಗ ಮತ್ತೊಂದು ಉಪಗ್ರಹ ಉಡಾವಣೆ ಮಾಡಿ ಸೋತು ಹೋಗಿದೆ. ಈ ಹಿಂದೆ ಕೂಡ ಉ.ಕೊರಿಯಾ ಉಪಗ್ರಹ ಉಡಾವಣೆ ವೇಳೆ ಸೋತು ಸುಣ್ಣವಾಗಿತ್ತು. ಈಗ ಕೂಡ 2ನೇ ಮಿಲಿಟರಿ ಗೂಢಚಾರ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಕಳುಹಿಸುವಾಗ, ರಾಕೆಟ್ ಮಧ್ಯದಲ್ಲೇ ಢಮಾರ್ ಅಂದಿದೆ. ಈ ಘಟನೆ ಈಗ ಉತ್ತರ ಕೊರಿಯಾ ವಿಜ್ಞಾನಿಗಳಿಗೆ ಮತ್ತು ಜನರಿಗೆ ಭಯ ಮೂಡಿಸಿದೆ! ಯಾಕೆ ಗೊತ್ತಾ? ಮುಂದೆ ಓದಿ.
ಯಾರನ್ನ ಕೊಲೆ ಮಾಡುತ್ತಾನೋ!
ಉತ್ತರ ಕೊರಿಯಾ ಎಷ್ಟು ಡೇಂಜರಸ್ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಇದೇ ಕಾರಣಕ್ಕೆ ಜಗತ್ತಿನ ನೂರಾರು ದೇಶಗಳು ಉತ್ತರ ಕೊರಿಯಾಗೆ ತಮ್ಮ ಪ್ರಜೆಗಳು ಹೋಗುವಂತಿಲ್ಲ ಎಂಬ ಆದೇಶ ನೀಡಿವೆ. ಅಲ್ಲದೆ ಉತ್ತರ ಕೊರಿಯಾ ದೇಶವನ್ನ ಕೂಡ ಬ್ಲಾಕ್ ಲಿಸ್ಟ್‌ಗೆ ಹಾಕಿವೆ. ಈ ರೀತಿ ಭಯಾನಕ ವಾತಾವರಣ ಇರುವ ದೇಶದಲ್ಲಿ, ಉಪಗ್ರಹ ಉಡಾವಣೆ ಸೋತು ಹೋದ ಕಾರಣಕ್ಕೆ ಅಲ್ಲಿನ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿಜ್ಞಾನಿಗಳ ಜೀವ ತೆಗೆಯುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಕೂಡ ಇಂತಹದ್ದೇ ಕೃತ್ಯ ಎಸಗಿದ್ದ ಈ ನೀಚ, ಇದೀಗ ಕೋಪದಲ್ಲಿ ಯಾರ ಉಸಿರು ನಿಲ್ಲಿಸುತ್ತಾನೋ? ಎಂಬ ಆತಂಕ ಕಾಡುತ್ತಿದೆ.












Click it and Unblock the Notifications