ಗಾಜಾಪಟ್ಟಿ ಪ್ರದೇಶದಿಂದ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದು ಎಷ್ಟು ಜನ?

ಹಮಾಸ್ ಉಗ್ರರು ಮಾಡಿದ ತಪ್ಪಿಗೆ, ಗಾಜಾಪಟ್ಟಿ ಜನರು ನರಕದ ಪರಿಸ್ಥಿತಿ ಎದುರಿಸುತ್ತಾ ಒದ್ದಾಡುತ್ತಿದ್ದಾರೆ. 9000 ಕ್ಕೂ ಹೆಚ್ಚು ಜನರು ಗಾಜಾಪಟ್ಟಿ ಭಾಗದಲ್ಲಿ ಈವರೆಗೂ ಉಸಿರು ಚೆಲ್ಲಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಯಾವಾಗ ಬೇಕಾದ್ರೂ ಇಸ್ರೇಲ್ ಸೇನೆ ಬಾಂಬ್, ಮಿಸೈಲ್ ದಾಳಿ ನಡೆಸಬಹುದು ಎಂಬ ಭಯ ಕಾಡುತ್ತಿದೆ. ಇದೇ ಕಾರಣ ಉತ್ತರ ಗಾಜಾದಿಂದ ಓಡಿ ಹೋಗಿರುವ ಸಾಮಾನ್ಯ ಜನರ ಸಂಖ್ಯೆ ಎಷ್ಟು ಗೊತ್ತಾ?

ಇಸ್ರೇಲ್ ಸೇನೆಗೆ ಈಗ ಗೊತ್ತಿರುವುದು ಒಂದೇ, ಅದು ತನ್ನ ಶತ್ರು ಹಮಾಸ್ ಉಗ್ರರ ಪಡೆಗೆ ಬುದ್ಧಿ ಕಲಿಸುವುದು. ಇದನ್ನು ಬಿಟ್ಟು ಬೇರೆ ಯಾವುದರ ಬಗ್ಗೆ ಕೂಡ ಇಸ್ರೇಲ್ ಸೇನೆಯು ಯೋಚನೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಮನಸ್ಸಿಗೆ ಬಂದಂಗೆ ಉತ್ತರ ಗಾಜಾಪಟ್ಟಿ ಮೇಲೆ ಅಟ್ಯಾಕ್ ಮಾಡುತ್ತಿವೆ ಇಸ್ರೇಲ್ ಪಡೆಗಳು. ವಾಯುಪಡೆ, ನೌಕಾಪಡೆ, ಭೂಸೇನೆಗಳು ಈಗ ಒಟ್ಟಾಗಿ ದಾಳಿ ಮಾಡುತ್ತಿವೆ. ಪರಿಸ್ಥಿತಿ ಹೀಗಿದ್ದಾಗ ಸುಮಾರು 3000 ಕ್ಕೂ ಹೆಚ್ಚು ಮಕ್ಕಳು ಯುದ್ಧಕ್ಕೆ ಬಲಿಯಾದ ಆರೋಪ ಕೇಳಿಬಂದ ಹೊತ್ತಲ್ಲಿ, ಗಾಜಾಪಟ್ಟಿ ಬಿಟ್ಟು ಹೋಗಿರುವ ಸಾಮಾನ್ಯ ಜನರ ಸಂಖ್ಯೆ ಕೇಳಿದರೆ ಎದೆ ನಡುಗುತ್ತದೆ.

Discover How Many People Left North Gaza After Violence Eruption

ಬರೋಬ್ಬರಿ 8 ಲಕ್ಷ ಜನರು ಎಸ್ಕೇಪ್!

ಹೌದು, ಗಾಜಾಪಟ್ಟಿ ಉತ್ತರ ಭಾಗವನ್ನೇ ಟಾರ್ಗೆಟ್ ಮಾಡಿ ಇಸ್ರೇಲ್‌ ಸೇನೆ ಹಮಾಸ್ ಉಗ್ರರ ವಿರುದ್ಧ ಜೋರಾದ ಸಂಘರ್ಷ ನಡೆಸುತ್ತಿದೆ. ಅದರಲ್ಲೂ ಗಾಜಾಪಟ್ಟಿ ಉತ್ತರ ಭಾಗದಲ್ಲಿನ ನೆಲದಲ್ಲಿ ಸುರಂಗ ನಿರ್ಮಿಸಿ ಹಮಾಸ್ ಉಗ್ರರು ಯುದ್ಧ ಮುಂದುವರಿಸಿದ್ದಾರೆ. ಹೀಗಿದ್ದಾಗ ಗಾಜಾದ ಸಾಮಾನ್ಯ ನಿವಾಸಿಗಳು ಜೀವ ಭಯದಲ್ಲಿ, ತಾವು ಹುಟ್ಟಿ ಬೆಳೆದ ಜಾಗವ ಬಿಟ್ಟು ಓಡಿ ಹೋಗುತ್ತಿದ್ದಾರೆ. ಇದೇ ರೀತಿ ಒಟ್ಟಾರೆ 8 ಲಕ್ಷ ಪ್ಯಾಲೆಸ್ತೀನ್ ಅಂದರೆ ಗಾಜಾ ಜನರು ಎದ್ದುಬಿದ್ದು ಓಡಿದ್ದಾರೆ ಎನ್ನಲಾಗಿದೆ.

ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?

ಇಷ್ಟೆಲ್ಲ ಘಟನೆಗಳು ಸಂಭವಿಸುತ್ತಿರುವ ಸಮಯದಲ್ಲೇ ಕದನ ವಿರಾಮವನ್ನ ಘೋಷಿಸಬೇಕು ಎಂಬ ಆಗ್ರಹಕ್ಕೆ ಇಸ್ರೇಲ್ ಪ್ರಧಾನಿ ನೀಡಿದ ಉತ್ತರ ಸಂಚಲನ ಸೃಷ್ಟಿಸಿದೆ. ಗಾಜಾಪಟ್ಟಿಯ ಮೇಲೆ ದಾಳಿ ನಿಲ್ಲಿಸಿ ಕದನ ವಿರಾಮ ಘೋಷಿಸಿ ಎಂಬ ಮನವಿಗೆ ಬೆಂಜಮಿನ್ ನೆತನ್ಯಾಹು ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಹಮಾಸ್ ಉಗ್ರರನ್ನ ಸಂಪೂರ್ಣವಾಗಿ ನಾಶ ಮಾಡುವುದಾಗಿ ಮತ್ತೊಮ್ಮೆ ಗುಡುಗಿದ್ದಾರೆ ಇಸ್ರೇಲ್ ಪಿಎಂ.

Discover How Many People Left North Gaza After Violence Eruption

ಭೀಕರ ಯುದ್ಧ ಶುರುವಾಗಿದ್ದು ಹೇಗೆ?

ಅಂದಹಾಗೆ ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್‌ ಮೇಲೆ 5000ಕ್ಕೂ ಹೆಚ್ಚು ರಾಕೆಟ್‌ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಯುದ್ಧ ಶುರುವಾದ ನಂತರ ಗಾಜಾ ನಗರದ ಸಾವಿರಾರು ಕಟ್ಟಡಗಳು ಪುಡಿ ಪುಡಿಯಾಗಿದ್ದು, ಲಕ್ಷಾಂತರ ಜನರು ಊರು ಬಿಟ್ಟು ಓಡಿ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+