ಸರ್ವಾಧಿಕಾರಿಗೆ ಜೀವ ಭಯ: ರಷ್ಯಾಗೆ ಹೋಗೋದು ಹೇಗೆ?

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಮೀಟಿಂಗ್ ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ರಷ್ಯಾಗೆ ಪ್ರಯಾಣ ಬೆಳೆಸುವುದು ಗ್ಯಾರಂಟಿ. ಆದ್ರೆ ಮೊದಲೇ ಜೀವಭಯದಲ್ಲಿ ನರಳುತ್ತಿರುವ ಕಿಮ್ ಜಾಂಗ್ ಉನ್ ರಷ್ಯಾಗೆ ಹೋಗೋದು ಹೇಗೆ? ವಿಮಾನ ಪ್ರಯಾಣ ಕೂಡ ಸರ್ವಾಧಿಕಾರಿಗೆ ಭಯ ತರಿಸಿದೆ. ಹೀಗಾಗಿ ಬೇರೆಯದ್ದೇ ಮಾರ್ಗ ಹುಡುಕಿದ್ದಾನೆ ಕಿಮ್.

ಉತ್ತರ ಕೊರಿಯಾಗೆ ನಾನೇ ಬಾಸ್.. ನಾನೇ ಕಿಂಗ್ ಅಂತಾ ಮರೆಯುತ್ತಿದ್ದಾನೆ ಈ ಕಿಮ್. ಹೀಗಾಗಿ ತಾನು ತಂದಿದ್ದೇ ರೂಲ್ಸ್, ತಾನು ಹೇಳಿದ್ದೆ ಫೈನಲ್ ಅನ್ನುವಂತೆ ಕಿಮ್ ಜಾಂಗ್ ಉನ್ ವರ್ತಿಸುತ್ತಾನೆ. ಹೀಗೆ ಎಲ್ಲರ ಎದೆಯಲ್ಲಿ ನಡುಕ ತರಿಸಿರುವ ಕಿಮ್ ಜಾಂಗ್ ಉನ್‌ಗೆ ಜೀವ ಭಯ ಕಾಡುತ್ತಲೇ ಇದೆ. ಅದ್ರಲ್ಲೂ ಅಮೆರಿಕ & ನ್ಯಾಟೋ ಸೇರಿ ಜಗತ್ತಿನ ಸಾಕಷ್ಟು ದೇಶಗಳನ್ನ ಎದುರು ಹಾಕಿಕೊಂಡಿದ್ದಾನೆ. ಹೀಗಾಗಿ ಕಿಮ್ ಹೊರಗೆ ಬಂದರೆ ಕಥೆ ಕ್ಲೋಸ್ ಅನ್ನೋ ಭಯ ಕಾಡುತ್ತಿದೆ. ಇದೇ ಕಾರಣಕ್ಕೆ ರಷ್ಯಾಗೆ ಹೋಗಲು ಕಿಮ್ ರಹಸ್ಯ ಮಾರ್ಗ ಬಳಸುತ್ತಿದ್ದಾನೆ.

Discover how Kim Jong Un can travel to Russia to meet the Putin

ಸರ್ವಾಧಿಕಾರಿ ರಷ್ಯಾ ಪ್ರಯಾಣ ಹೇಗೆ?

ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಕಿಮ್ ಜಾಂಗ್ ಉನ್ ವಿಮಾನದ ಮೂಲಕ ರಷ್ಯಾಗೆ ಪ್ರಯಾಣ ಬೆಳೆಸುವುದು ಅಸಾಧ್ಯ. ಏಕೆಂದರೆ ತನ್ನನ್ನು ಹತ್ಯೆ ಮಾಡುತ್ತಾರೆ ಎಂಬ ಭಯ ಆತನನ್ನ ಕಾಡುತ್ತಿದೆ. ಹೀಗಾಗಿ ಕಿಮ್ ಜಾಂಗ್ ಉನ್ ತನ್ನ ದೇಶದ ಹಳೆಯ ಟ್ರೈನ್ ಹತ್ತಿ, 2019ರಲ್ಲಿ ರಷ್ಯಾಗೆ ವಿಸಿಟ್ ಕೊಟ್ಟಂತೆ ಈಗ ಕೂಡ ರೈಲು ಏರಬಹುದು. ಏಕೆಂದರೆ ಕಿಮ್ ಜಾಂಗ್ ಉನ್ ಅಧಿಕಾರ ವಹಿಸಿಕೊಂಡ ನಂತರ ಭೇಟಿ ನೀಡಿದ್ದು ಕೇವಲ ಚೀನಾ ಹಾಗೂ ರಷ್ಯಾಗೆ. ಅದನ್ನ ಬಿಟ್ಟರೆ ಅಕ್ಕಪಕ್ಕದ ದೇಶಗಳಿಗೆ ಒಂದೆರಡು ಬಾರಿ ಹೋಗಿ ಬಂದಿದ್ದಾನೆ. ಇದೇ ಕಾರಣಕ್ಕೆ ಇದೀಗ ರಷ್ಯಾಗೆ ಟ್ರೈನ್ ಮೂಲಕ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಟ್ರೈನ್ ಪ್ರಯಾಣ ಸೇಫ್ ಆಗಿರುತ್ತಾ?

ಇಂಥ ಪ್ರಶ್ನೆ ಕಾಡುವುದು ಸಹಜ, ಏಕೆಂದರೆ ವಿಮಾನ ಪ್ರಯಾಣವನ್ನೇ ಡೇಂಜರ್ ಅಂತಾ ಕೆರೆಯುವಾಗ ರೈಲು ಪ್ರಯಾಣ ಸಹಜವಾಗಿ ಭೀತಿ ಮೂಡಿಸುತ್ತೆ. ಆದ್ರೆ ಕಿಮ್ ಪಾಲಿಗೆ ಈ ರೈಲು ಪ್ರಯಾಣ ಆಪ್ತರಕ್ಷಕ. ಚೀನಾ ಮತ್ತು ರಷ್ಯಾ ನಡುವೆ ಓಡಾಡಲು ಜಮಾನದಲ್ಲೇ ರೈಲು ಮಾರ್ಗ ರೂಪಿಸಿತ್ತು ಉತ್ತರ ಕೊರಿಯಾ. ಹೀಗಾಗಿ ರೈಲು ಮೂಲಕ ಪ್ರಯಾಣವನ್ನ ಮಾಡಿದರೆ ಸೇಫ್ ಅನ್ನೋದು ಕಿಮ್ ಜಾಂಗ್ ಉನ್ ಲೆಕ್ಕಾಚಾರ. ಈಗ ಕೂಡ ರಷ್ಯಾ ಜತೆ ಮಾತುಕತೆಗೆ ಹಾಗೂ ಪುಟಿನ್ ಭೇಟಿಗೆ ಕಿಮ್ ರೈಲು ಏರಿ ಬರುವುದು ಬಹುತೇಕ ಪಕ್ಕಾ.

Discover how Kim Jong Un can travel to Russia to meet the Putin

ಕಿಮ್ ರಷ್ಯಾಗೆ ಹೊರಟಿದ್ದು ಯಾಕೆ?

ರಷ್ಯಾ ಜತೆ ಕಿಮ್ ಶಸ್ತ್ರಾಸ್ತ್ರ ಪೂರೈಕೆಗೆ ಚರ್ಚೆ ನಡೆಸಲಿದ್ದಾನೆ ಎನ್ನಲಾಗಿದೆ. ಉತ್ತರ ಕೊರಿಯಾ ಗಡಿ ಸಮೀಪ ಇರುವ ವ್ಲಾಡಿವೋಸ್ಟೋಕ್ ಪ್ರದೇಶದಲ್ಲಿ ಪುಟಿನ್ ಜೊತೆಗೆ ಕಿಮ್ ಜಾಂಗ್ ಉನ್ ಚರ್ಚೆ ನಡೆಸುತ್ತಾನಂತೆ. ಈ ಮೂಲಕ ಧಗಧಗಿಸುತ್ತಿರುವ ಉಕ್ರೇನ್ & ರಷ್ಯಾ ಯುದ್ಧದ ಬೆಂಕಿ ಈಗ ಜಗತ್ತನ್ನೇ ಸುಡುವ ಸೂಚನೆ ನೀಡಿದೆ. ಅದರಲ್ಲೂ ಉತ್ತರ ಕೊರಿಯಾ ನಡೆ ಬಗ್ಗೆ ಅಮೆರಿಕ ರೊಚ್ಚಿಗೆದ್ದಿದೆ. ಇಷ್ಟಾದರೂ ಕೇರ್ ಮಾಡದೆ ರಷ್ಯಾ ಜತೆ ಕೈಜೋಡಿಸಿ, ಉಕ್ರೇನ್ ವಿರುದ್ಧ ತೊಡೆತಟ್ಟಲು ಕಿಮ್ ಮುಂದಾಗಿದ್ದಾನೆ.

ಒಟ್ನಲ್ಲಿ ಕಿಮ್ ಜಾಂಗ್ ಉನ್ ಸದಾ ಸುದ್ದಿಯಲ್ಲಿರುವ ಹಾಗೂ ಸದಾ ಪ್ರಪಂಚದ ಗಮನ ಸೆಳೆಯುವ ವಿವಾದಾತ್ಮಕ ನಾಯಕ. ಈಗ ಕೂಡ ಇಂತಹದ್ದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾನೆ ಕಿಮ್. ಆದರೆ ಕಿಮ್ ರಷ್ಯಾಗೆ ಭೇಟಿ ನೀಡುವ ವಿಚಾರ ಇನ್ನೂ ಫೈನಲ್ ಆಗಿಲ್ಲ. ಹೀಗಾಗಿ ಅಧಿಕೃತ ಭೇಟಿ ತನಕ ಕಾಯಬೇಕು. ಏಕೆಂದರೆ ಮೊದಲೇ ಜೀವಭಯದಲ್ಲಿ ಸರ್ವಾಧಿಕಾರಿ ನಡುಗಿ ಹೋಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಈ ಪ್ಲ್ಯಾನ್ ಬದಲಾಗುವ ಸಾಧ್ಯತೆ ಇದೆ. ಆದರೆ ರಷ್ಯಾ ಮಾತ್ರ ಉತ್ತರ ಕೊರಿಯಾ ಸರ್ವಾಧಿಕಾರಿ ಭೇಟಿಗೆ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+