ಇಸ್ರೇಲ್ ದೇಶವನ್ನು ಕ್ಯಾನ್ಸರ್ ಗಡ್ಡೆಗೆ ಹೋಲಿಸಿದ ಇರಾನ್ ಕಮಾಂಡರ್!

ಹಮಾಸ್ ವಿರುದ್ಧ ಬಡಿದಾಡಿ ಬಡಿದಾಡಿ ಇಸ್ರೇಲ್ ಸುಸ್ತಾಗಿ ಹೋಗುತ್ತಿದೆ. ಆದರೆ ಇಸ್ರೇಲ್ ವಿರುದ್ಧ ಈ ಸಮಯಕ್ಕೆ ಶತ್ರುಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಪೈಕಿ ಇರಾನ್ ಸೇನೆ, ಇಸ್ರೇಲ್ ವಿರುದ್ಧ ರೊಚ್ಚಿಗೆದ್ದು ತೊಡೆತಟ್ಟಿ ನಿಂತಿದೆ. ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ ರಾಕೆಟ್ ದಾಳಿ ನಡೆಸಿದ ಮೊದಲ ದಿನವೇ ಉರಿಯುವ ಬೆಂಕಿಗೆ ಇರಾನ್ ಸೇನೆಯ ಅಧಿಕಾರಿಗಳು ತುಪ್ಪ ಸುರಿದಿದ್ದರು. ಈಗ ಇಸ್ರೇಲ್‌ನ ಕ್ಯಾನ್ಸರ್‌ಗೆ ಹೋಲಿಸಿದೆ ಇರಾನ್!

ಹೌದು, ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಭಯಾನಕ ರೂಪ ಪಡೆಯುತ್ತಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಹತ್ತಾರು ಲಕ್ಷ ಜನ ಗಾಜಾಪಟ್ಟಿ ಬಿಟ್ಟಿದ್ದು, ಬೇರೆ ದೇಶಗಳಲ್ಲಿ ಆಶ್ರಯ ಪಡೆಯಲು ಮುಂದಾಗಿದ್ದಾರೆ. ಮತ್ತೊಂದ್ಕಡೆ ಇಸ್ರೇಲ್‌ನ ಸೇನೆ ಗಾಜಾಪಟ್ಟಿ ಮೇಲೆ ಭೂದಾಳಿ ಆರಂಭಿಸಲು ತನ್ನ ಸಾವಿರಾರು ಟ್ಯಾಂಕರ್ ಮೂಲಕ ಈಗ ಮುನ್ನುಗ್ಗುತ್ತಿದೆ. ಇದೇ ಸಮಯದಲ್ಲಿ ಇರಾನ್ ಸೇನಾ ಕಮಾಂಡರ್, ಇಸ್ರೇಲ್‌ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ.

Discover how Iran warned Israel over present situation at Gaza

ಇರಾನ್ ಕೊಟ್ಟ ವಾರ್ನಿಂಗ್ ಏನು?

ಅಷ್ಟಕ್ಕೂ ಗಾಜಾ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ರೆ ಇಸ್ರೇಲ್‌ ಮತ್ತೊಂದು ಆಘಾತ ಎದುರಿಸುತ್ತೆ ಎಂದು ಇರಾನ್‌ನ ಎಲೈಟ್‌ ರೆವಲೂಷನರಿ ಗಾರ್ಡ್ಸ್‌ ಡೆಪ್ಯುಟಿ ಕಮಾಂಡರ್‌ ಈಗ ವಾರ್ನಿಂಗ್ ಕೊಟ್ಟಿದ್ದಾನೆ. ಈ ಕುರಿತು ಇರಾನ್‌ನ ಮಾಧ್ಯಮಗಳು ವರದಿ ಮಾಡಿದ್ದು ಇದೇ ವೇಳೆ ಇಸ್ರೇಲ್ ದೇಶವನ್ನು ಕ್ಯಾನ್ಸರ್ ಗಡ್ಡೆಗೆ ಹೋಲಿಸಿದ್ದಾರಂತೆ ಇರಾನ್‌ನ ಕಮಾಂಡರ್.

ಅಂದಹಾಗೆ ಜಗತ್ತಿನ ಭೂಪಟದಿಂದ ಝಿಯಾನಿಸ್ಟ್‌ ಆಡಳಿತ ಅಂದ್ರೆ ಇಸ್ರೇಲ್ ಎಂಬ ಕ್ಯಾನ್ಸರ್‌ ಗಡ್ಡೆ ನಿರ್ಮೂಲನೆ ಆಗುವವರೆಗೆ ಈ ಭೀಕರ ಕಾರ್ಯಾಚರಣೆ ಮುಂದುವರಿಯಲಿದೆ, ಅಂತಾ ಹೇಳಿದ್ದಾನೆ ಇರಾನ್ ಸೇನೆ ಕಮಾಂಡರ್. ಹೀಗೆ ಎಲೈಟ್‌ ರೆವಲೂಷನರಿ ಗಾರ್ಡ್ಸ್‌ನ ಡೆಪ್ಯುಟಿ ಕಮಾಂಡರ್‌ ಅಲಿ ಫದಾವಿ ನೀಡಿರುವ ಹೇಳಿಕೆ ಇದೀಗ ಸಂಚಲನ ಸೃಷ್ಟಿ ಮಾಡಿದೆ.

ಇರಾನ್‌ಗೆ ಹಮಾಸ್ ಜೊತೆ ಸಂಪರ್ಕ?

1979ರಲ್ಲಿ ಸಂಭವಿಸಿದ ಘಟನೆ ನಂತರ ಪ್ಯಾಲೆಸ್ತೀನ್‌ ವಿಷಯದಲ್ಲಿ ಇರಾನ್‌ ಸದಾ ಸಪೋರ್ಟ್ ಕೊಡುತ್ತಿದೆ. ಹಮಾಸ್‌ ಬೆಂಬಲಕ್ಕೆ ತೆಹರಾನ್‌ ನೇರವಾಗಿ ನಿಲ್ಲುತ್ತಿದೆ. ಗಾಜಾಪಟ್ಟಿಯ ಮೇಲೆ ನಿಯಂತ್ರಣ ಹೊಂದಿರುವ ಹಮಾಸ್‌ಗೆ ಹಣಕಾಸು & ಶಸ್ತ್ರಾಸ್ತ್ರ ಪೂರೈಕೆನ ಇರಾನ್ ಮಾಡುತ್ತಿದೆ ಎಂಬ ಆರೋಪ ಕೂಡ ಇದೆ. ಹೀಗೆ ಇಷ್ಟೆಲ್ಲಾ ಆರೋಪದ ನಡುವೆ ಈಗ ಇಸ್ರೇಲ್ ಮತ್ತು ಹಮಾಸ್ ಜಗಳ ನಡೆಯುವಾಗ ಇರಾನ್ ಕಮಾಂಡರ್ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ.

Discover how Iran warned Israel over present situation at Gaza

ಕಮಾಂಡರ್ ಬಿಡಿ ಇರಾನ್‌ನ ಮುಖ್ಯಸ್ಥ ಖಮೆನೀ ಕೂಡ ಇಸ್ರೇಲ್ ವಿರುದ್ಧ ಗುಡುಗಿದ್ದು, ಪ್ಯಾಲೆಸ್ತೀನ್‌ ಜನರ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ದಬ್ಬಾಳಿಕೆ ಹೀಗೆಯೇ ಮುಂದುವರಿದರೆ ಮುಸ್ಲಿಮರನ್ನ ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೂ ಮೊದಲೇ ಗಾಜಾ ಮೇಲೆ ಮಾಡುತ್ತಿರುವ ಬಾಂಬ್ ದಾಳಿ ನಿಲ್ಲಿಸಬೇಕು ಎಂದು ಇಸ್ರೇಲ್‌ಗೆ ಖಮೆನೀ ವಾರ್ನಿಂಗ್ ಕೂಡ ಕೊಟ್ಟಾಗಿದೆ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.

ಅಮೆರಿಕದ ದೊಡ್ಡ ಶತ್ರು ಇರಾನ್!

ಇಲ್ಲಿ ಇನ್ನೊಂದು ಬೆಳವಣಿಗೆ ಪ್ರಮುಖವಾಗಿ ಮುನ್ನೆಲೆಗೆ ಬರುತ್ತದೆ. ಜಗತ್ತಿನಲ್ಲಿ ಅಮೆರಿಕ ವಿರುದ್ಧ ನಿಂತು ಗುಡುಗುತ್ತಿರುವ ಕೆಲವೇ ದೇಶಗಳ ಪೈಕಿ ಇರಾನ್ ಕೂಡ ಒಂದು. ಹೀಗಾಗಿ ಇರಾನ್ & ಅಮೆರಿಕ ನಡುವೆ ಆಗಾಗ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಮೊನ್ನೆ, ಮೊನ್ನೆ ಇರಾನ್ ಸೇನೆಗೆ ಸೇರಿದ್ದ, ಅಮೆರಿಕ ವಶಕ್ಕೆ ಪಡೆದು ಸಂಗ್ರಹಿಸಿದ್ದ ಭಾರಿ ಪ್ರಮಾಣದ ಅಸ್ತ್ರ ಉಕ್ರೇನ್‌ಗೆ ಹೋಗಿತ್ತು. ಯಾಕೆಂದರೆ ಅಮೆರಿಕ ಬಳಿ ಹೋಗುತ್ತಿದ್ದ ಇರಾನ್ ಸೇನೆಗೆ ಸೇರಿದ ಮದ್ದು & ಗುಂಡುಗಳ ಹಡಗನ್ನು ಅಮೆರಿಕ ತನ್ನ ವಶಕ್ಕೆ ಪಡೆದುಕೊಂಡಿತ್ತು.

ಇರಾನ್‌ಗೆ ಸೇರಿದ ಹಡಗಿನಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಅಮೆರಿಕ ಕೈಗೆ ಸಿಕ್ಕಿದ್ದವು. ರಷ್ಯಾ ವಿರುದ್ಧ ಹೋರಾಡಲು ಇರಾನ್ ಅಸ್ತ್ರವನ್ನ ಅಮೆರಿಕ ಸೇನೆ ಉಕ್ರೇನ್‌ಗೆ ಕೊಟ್ಟಿತ್ತು. ಈ ಬೆಳವಣಿಗೆ ನಡೆದು ಕೆಲವೇ ದಿನದಲ್ಲಿ ಇಸ್ರೇಲ್ ವಿರುದ್ಧವೇ ಹಮಾಸ್ ಬಂಡುಕೋರರು ಗುಡುಗಿದ್ದಾರೆ. ಹಾಗೇ ಇಸ್ರೇಲ್ ಬಗ್ಗೆ ಇರಾನ್ ಕೂಡ ಬೇಸರ ಹೊರಹಾಕಿದೆ. ಅಮೆರಿಕದ ಕೈಯಲ್ಲಿ ಸಿಲುಕಿದ್ದ ತನ್ನ ಮಂದು & ಗುಂಡು ಕಳೆದುಕೊಂಡಿರುವ ಕೋಪ ಕೂಡ ಇದೀಗ ಇರಾನ್‌ನ ರೊಚ್ಚಿಗೆಬ್ಬಿಸಿದೆ ಎಂಬ ಆರೋಪ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+