Ukraine War: ಎಫ್‌-16 ಯುದ್ಧ ವಿಮಾನ ಉಕ್ರೇನ್‌ಗೆ ಜಾಕ್‌ಪಾಟ್ ಇದ್ದಂತೆ!

ಐಂಡ್‌ಹೋವನ್‌: ರಷ್ಯಾ & ಉಕ್ರೇನ್ ಯುದ್ಧಕ್ಕೆ ಇದೀಗ ಒಂದು ದೊಡ್ಡ ತಿರುವು ಸಿಕ್ಕಿದೆ. ಉಕ್ರೇನ್ ಸೇನೆ ಇಷ್ಟುದಿನ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಮಯ ಬಂದಿದೆ. ಅಮೆರಿಕ ನಿರ್ಮಿತ ಎಫ್‌-16 ಯುದ್ಧ ವಿಮಾನಗಳನ್ನು ಉಕ್ರೇನ್‌ಗೆ ಪೂರೈಸಲು ಅಂತಿಮ ಸಿದ್ಧತೆಗಳು ಸಾಗಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ನೆದರ್ಲೆಂಡ್ಸ್‌ ಭೇಟಿಗೆ ಮಹತ್ವದ ತಿರುವು ಸಿಕ್ಕಿದೆ.

ಕೆಲ ದಿನಗಳ ಹಿಂದಷ್ಟೇ ಎಫ್‌-16 ಯುದ್ಧ ವಿಮಾನಗಳನ್ನು ಉಕ್ರೇನ್‌ ಸೇನೆಗೆ ಕೊಡೋದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಎಫ್‌-16 ಯುದ್ಧ ವಿಮಾನ ಪೂರೈಕೆ ಮಾಡಲು, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ ಸಿದ್ಧವಾಗಿವೆ. ಹೀಗೆ ಅಮೆರಿಕ ಅನುಮತಿ ನೀಡಿದ ಕೇವಲ 2 ದಿನಗಳ ಬಳಿಕ ದಿಢೀರ್ ಉಕ್ರೇನ್ ಅಧ್ಯಕ್ಷರು ನೆದರ್ಲೆಂಡ್ಸ್‌ಗೆ ಭೇಟಿ ನೀಡಿದ್ದರು. ಇದೀಗ ಮಹತ್ವದ ಮಾತುಕತೆ ನಡೆಸಿರುವ ಎರಡೂ ದೇಶಗಳು, ಎಫ್‌-16 ವಿಮಾನ ಪೂರೈಕೆಗಾಗಿ ಒಪ್ಪಂದಕ್ಕೆ ಬಂದಿವೆ. ಇನ್ನೇನು ಕೆಲ ದಿನಗಳಲ್ಲಿ ಉಕ್ರೇನ್ ಪೈಲಟ್‌ಗಳಿಗೆ ತರಬೇತಿಯನ್ನು ನೀಡಿ, ಎಫ್‌-16 ಅನ್ನ ಪೂರೈಕೆ ಮಾಡುವ ಸಾಧ್ಯತೆ ಇದೆ.

how-f-16-jets-will-be-delivered-to-ukraine

ರಷ್ಯಾ ವಿರುದ್ಧ ಎಫ್‌-16 ಬ್ರಹ್ಮಾಸ್ತ್ರ?

ಉಕ್ರೇನ್ ವಾಯು ರಕ್ಷಣೆಗಾಗಿ ಎಫ್‌-16 ಯುದ್ಧ ವಿಮಾನಗಳನ್ನು ಕೊಡಿ ಅಂತಾ ಝೆಲೆನ್‌ಸ್ಕಿ ಪದೇ ಪದೆ ಬೇಡಿಕೆ ಸಲ್ಲಿಸುತ್ತಿದ್ರು. ಯುದ್ಧ ಆರಂಭವಾದ ದಿನದಿಂದಲೂ ಈ ಡಿಮ್ಯಾಂಡ್ ಇತ್ತು. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಬೇಡಿಕೆಗೆ ಅಸ್ತು ಎನ್ನಲು ಬಹಳ ತಡ ಮಾಡಿದ್ದರು. ಆದರೆ ಕಳೆದ ಶುಕ್ರವಾರ ಅಂತಿಮವಾಗಿ ಅಮೆರಿಕ ಗ್ರೀನ್ ಸಿಗ್ನಲ್ ನೀಡಿ ಯುದ್ಧ ವಿಮಾನ ಪೂರೈಕೆಗೆ ಮುಂದಾಗಿತ್ತು. ಇನ್ನು ಡಚ್‌ ಪ್ರಧಾನಿ ಮಾರ್ಕ್‌ ರುಟ್ಟೆ ಜೊತೆ ಝೆಲೆನ್‌ಸ್ಕಿ ಐಂಡ್‌ಹೋವನ್‌ ನಗರದ ವಾಯು ನೆಲೆಯಲ್ಲಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಝೆಲೆನ್‌ಸ್ಕಿ ಸ್ವೀಡನ್‌ಗೆ ಭೇಟಿ ಕೊಟ್ಟಿದ್ದರು. ಈಗ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಇನ್ನೇನು ಕೆಲವೇ ದಿನದಲ್ಲಿ ಎಫ್‌-16 ಉಕ್ರೇನ್ ಸೇನೆ ಸೇರಲಿದೆ.

ಪರಮಾಣು ಯುದ್ಧ ಭೀತಿ ಶುರು?

ಎಫ್-16 ಯುದ್ಧ ವಿಮಾನಗಳನ್ನ ಯುರೋಪ್‌ನಲ್ಲಿನ ನ್ಯಾಟೋ ಮಿತ್ರರ ಮೂಲಕ ಉಕ್ರೇನ್‌ಗೆ ತಲುಪಿಸಲು ಅಮೆರಿಕ ಮುಂದಾಗಿದೆ. ಡೆನ್ಮಾರ್ಕ್ & ನೆದರ್ಲ್ಯಾಂಡ್ ಜೊತೆಗೆ ಸೇರಿ ಉಕ್ರೇನ್‌ಗೆ ಎಫ್-16 ವಿಮಾನ ಕಳುಹಿಸಲು ಅಮೆರಿಕ ರೆಡಿಯಾಗಿದೆ. ಅಧಿಕೃತವಾಗಿ ಈ ಕುರಿತು ಅಮೆರಿಕ ಪತ್ರ ಬರೆದಿದ್ದು, ಸಂಚಲನ ಸೃಷ್ಟಿಯಾಗಿತ್ತು. ಹೀಗಾಗಿ ರಷ್ಯಾ ಈಗಾಗಲೇ ದಾಳಿ ಮತ್ತಷ್ಟು ಭೀಕರಗೊಳಿಸಿದ್ದು, ಶನಿವಾರ ನಡೆಸಿದ ದಾಳಿಯಲ್ಲಿ 7 ಉಕ್ರೇನ್ ಜನರು ಬಲಿಯಾಗಿದ್ದರು. ಈಗ ಯುದ್ಧ ಮತ್ತಷ್ಟು ಭೀಕರವಾಗುವ ಆತಂಕ ಎದುರಾಗಿದೆ.

how-f-16-jets-will-be-delivered-to-ukraine

ನ್ಯಾಟೋ & ಅಮೆರಿಕದ ಭಾರಿ ನೆರವು

ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಅದೆಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ. ಈಗಾಗಲೇ ಅಮೆರಿಕ 3 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಮುಂದೆಯೂ ಈ ರೀತಿ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಎಫ್-16 ಯುದ್ಧ ವಿಮಾನಗಳು ಉಕ್ರೇನ್‌ಗೆ ಹೋಗುತ್ತಿವೆ.

ರಷ್ಯಾ & ಅಮೆರಿಕ ನಡುವಿನ ತಿಕ್ಕಾಟ ಉಕ್ರೇನ್‌ಗೆ ಪರೋಕ್ಷವಾಗಿ ಹೊಡೆತ ನೀಡುತ್ತಿದೆ. ಈ ಬೆಳವಣಿಗೆ ನಡುವೆ ಅಮೆರಿಕ ತನ್ನ ಬಳಿ ಇರುವ ಬ್ರಹ್ಮಾಸ್ತ್ರ ನೀಡಲು ಸಿದ್ಧವಾಗಿದೆ. ಇದು ಉಕ್ರೇನ್‌ಗೆ ಸಹಾಯ ಮಾಡಿದರೂ ರಷ್ಯಾ ಮತ್ತಷ್ಟು ಸಿಟ್ಟಿಗೇಳುವುದು ಗ್ಯಾರಂಟಿ. ಹಾಗೇ ತನ್ನಲ್ಲಿರುವ ಭೀಕರ ಅಸ್ತ್ರಗಳನ್ನು ರಷ್ಯಾ ಬಳಸುವುದು ಪಕ್ಕಾ. ಇದೇ ಕಾರಣಕ್ಕೆ ಉಕ್ರೇನ್ ಸೇನೆ ಅಲರ್ಟ್ ಆಗಿದ್ದು, ರಷ್ಯಾದ ಸಂಭಾವ್ಯ ದಾಳಿ ಎದುರಿಸಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+