ಇರಾನ್ ಅಸ್ತ್ರಗಳನ್ನು ಉಕ್ರೇನ್‌ಗೆ ಕೊಡುತ್ತಿದ್ದಾನೆ ದೊಡ್ಡಣ್ಣ ಅಮೆರಿಕ

ಉಕ್ರೇನ್ ಪರವಾಗಿ ನಿಂತಿರುವ ಅಮೆರಿಕ ತನ್ನ ಕೈಲಾದ ಎಲ್ಲಾ ಸಹಾಯ ಮಾಡುತ್ತಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಆದ್ರೆ ಇದೇ ಸಂದರ್ಭದಲ್ಲಿ ಅಮೆರಿಕದ ಒಳಗೆ ಕಿಚ್ಚು ಹೊತ್ತಿದ್ದು, ಉಕ್ರೇನ್‌ಗೆ ನೀಡುತ್ತಿರುವ ನೆರವು ನಿಲ್ಲಿಸಿ ಎಂಬ ಕೂಗು ಕೇಳಿಬಂದಿದೆ. ಹೀಗಾಗಿ ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ನೆರವು ನಿಂತು ಹೋಗುವ ಭಯ ಆವರಿಸಿದೆ. ಆದರೆ ಇದೇ ಸಂದರ್ಭದಲ್ಲಿ ಅಮೆರಿಕ ಭಯಂಕರ ನಿರ್ಧಾರ ಒಂದನ್ನು ಪ್ರಕಟಿಸಿದೆ.

ಇನ್ನು ಕೆಲವು ತಿಂಗಳು ಮುಗಿದರೆ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬರೋಬ್ಬರಿ 2 ವರ್ಷವೇ ತುಂಬಿ ಹೋಗಲಿದೆ. ಹೀಗೆ ಒಂದೆರಡು ವಾರದಲ್ಲಿ ಮುಗಿಯಲಿದೆ ಯುದ್ಧ ಎಂದು ಜಗತ್ತೇ ಭಾವಿಸಿದ್ದಾಗ, ರಷ್ಯಾ & ಉಕ್ರೇನ್ ವಾರ್ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದೆ. ಈ ಸಮಯದಲ್ಲೇ ರಷ್ಯಾ ಇದೇ ಯುದ್ಧವನ್ನು ಹಿಡಿದು ಪಾಶ್ಚಿಮಾತ್ಯ ರಾಷ್ಟ್ರಗಳ ಜೀವವನ್ನೇ ಹಿಂಡುತ್ತಿದೆ. ಎಲ್ಲವೂ ಅಯೋಮಯವಾದ ಸಮಯಕ್ಕೆ ಉಕ್ರೇನ್ ಈಗ ಅಮೆರಿಕದ ಮೇಲೆ ಸಾಕಷ್ಟು ಅವಲಂಬಿಸಿದೆ, ಹೀಗಾಗಿ ಅಮೆರಿಕ ಕೂಡ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡುತ್ತಿದೆ. ಈಗಲೂ ಅದೇ ರೀತಿ ಕ್ರಮಕ್ಕೆ ಮುಂದಾಗಿದ್ದಾನೆ ದೊಡ್ಡಣ್ಣ.

america-is-sending-1-1-million-ammunition

ಇರಾನ್ ಗುಂಡುಗಳು ಉಕ್ರೇನ್ ಪಾಲು!

ಅರೆ ಇದು ಹೇಗೆ ಸಾಧ್ಯ? ಅನ್ನಬೇಡಿ. ಯಾಕಂದ್ರೆ ಅಮೆರಿಕ ಮತ್ತು ಇರಾನ್ ಮಧ್ಯೆ ಭಾರಿ ದ್ವೇಷ ಮನೆಮಾಡಿದೆ. ಹಾಗೇ ಉಕ್ರೇನ್ ವಿರುದ್ಧ ಇರಾನ್ ನಿಂತಿದೆ. ಇಷ್ಟಾದ್ರೂ ಇರಾನ್‌ಗೆ ಸೇರಿದ ಬುಲೆಟ್‌ಗಳು ಉಕ್ರೇನ್‌ಗೆ ಹೋಗುತ್ತಿರುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅಸಲಿ ಕಹಾನಿ ಬೇರೆಯೇ ಇದ್ದು, ಇರಾನ್ ಸೇನೆಯಿಂದ ವಶಕ್ಕೆ ಪಡೆದಿದ್ದ ಭಾರಿ ಪ್ರಮಾಣದ ಗುಂಡುಗಳನ್ನು ಇದೀಗ ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ನೀಡುತ್ತಿದೆ ಅಮೆರಿಕ. ಹೀಗಾಗಿ ಇರಾನ್ ಕೂಡ ಅಮೆರಿಕದ ನಡೆಯಿಂದ ರೊಚ್ಚಿಗೆದ್ದಿದೆ.

ಎಷ್ಟು ಪ್ರಮಾಣದಲ್ಲಿ ಗುಂಡು ಕೊಟ್ಟಿದೆ?

ಇದೀಗ ಓಡಾಡುತ್ತಿರುವ ಮಾಹಿತಿ ಪ್ರಕಾರ, ಸುಮಾರು 11 ಲಕ್ಷ ಗುಂಡುಗಳನ್ನು ಅಮೆರಿಕ ಈಗ ಉಕ್ರೇನ್‌ಗೆ ಕೊಟ್ಟು ಕಳುಹಿಸಿದೆ. 7.62 ಎಂಎಂ ಗಾತ್ರದ ಗುಂಡುಗಳು ಇವಾಗಿದ್ದು, ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‌ಗೆ ಸಹಾಯ ಮಾಡಲಿವೆ. ಈ ಕಾರಣಕ್ಕೆ ಅಮೆರಿಕ ಕಿಲಾಡಿ ಬುದ್ಧಿ ಉಪಯೋಗಿಸಿ ಇಂಥ ಕೆಲಸಕ್ಕೆ ಮುಂದಾಗಿದೆ. 2022ರ ಡಿಸೆಂಬರ್ ತಿಂಗಳ ಸಮಯದಲ್ಲಿ ಇರಾನ್ ಸೇನೆಗೆ ಸೇರಿದ್ದ ಈ ಗುಂಡುಗಳನ್ನು ಅಮೆರಿಕ ಸೀಜ್ ಮಾಡಿತ್ತು. ಅಲ್ಲದೆ 2023ರ ಜುಲೈ 20ರಂದು ಈ ಗುಂಡುಗಳ ಮಾಲೀಕತ್ವ ತಮಗೆ ಸೇರಿದ್ದು ಎಂಬ ನಿರ್ಧಾರಕ್ಕೆ ಅಮೆರಿಕ ಬಂದಿತ್ತು.

america-is-sending-1-1-million-ammunition

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

ಒಟ್ನಲ್ಲಿ ಶತ್ರು ಕೈಯಿಂದ ಕಿತ್ತುಕೊಂಡಿದ್ದ ಗುಂಡುಗಳನ್ನು ಮಿತ್ರನಿಗೆ ಕೊಡೋಕೆ ಅಮೆರಿಕ ಮುಂದಾಗಿದೆ. ಆದರೆ ಈ ಬಗ್ಗೆ ಇರಾನ್ ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡವಾಗಿದೆ. ಮುಂದೆ ಎಲ್ಲವೂ ಕೈಮೀರಿ ಹೋಗುವ ಸಾಧ್ಯತೆ ಇದೆ. ಹೀಗಾಗಿಯೇ ಅಮೆರಿಕ ಅಳೆದು ತೂಗಿ ಈ ನಿರ್ಧಾರಕ್ಕೆ ಬಂದಿದೆ. ಉಕ್ರೇನ್ ಕೂಡ ಕೈಯಲ್ಲಿ ಅಸ್ತ್ರಗಳೇ ಇಲ್ಲದೆ ಪರದಾಡುತ್ತಿತ್ತು, ಈಗ ಅಮೆರಿಕ ಹತ್ತಾರು ಲಕ್ಷ ಗುಂಡುಗಳನ್ನು ಕೊಡುತ್ತಿರುವುದು ಖುಷಿ ಕೊಟ್ಟಿದೆ.

ಹೀಗೆ ಅಮೆರಿಕ ಕಳುಹಿಸುತ್ತಿರುವ ಗುಂಡುಗಳು ರಷ್ಯಾ ವಿರುದ್ಧದ ಹೋರಾಟಕ್ಕೇ ಆಗಿದ್ದರೂ ಅದೆಷ್ಟು ಜೀವಗಳನ್ನ ತೆಗೆಯುತ್ತವೋ ಗೊತ್ತಿಲ್ಲ. ಇದೇ ಕಾರಣಕ್ಕೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಬೇಕು ಎಂಬ ಕೂಗು ಪದೇ ಪದೆ ಕೇಳಿಬರುತ್ತಿದೆ. ಆದರೆ ಅದನ್ನ ದೊಡ್ಡವರು ಕಿವಿ ಮೇಲೆ ಹಾಕಿಕೊಂಡಂತೆ ಕಾಣ್ತಿಲ್ಲ. ಇತ್ತ ರಷ್ಯಾ ಮತ್ತು ಉಕ್ರೇನ್ ನಾಯಕರು ಕೂಡ ಹಠ ಬಿಟ್ಟು ಸಂಧಾನ ನಡೆಸುತ್ತಿಲ್ಲ. ಇವರ ಪ್ರತಿಷ್ಠೆ ಕದನಕ್ಕೆ ಲಕ್ಷಾಂತರ ಅಮಾಯಕರ ಜೀವ ಹೋಗುತ್ತಿರುವುದು ಮಾತ್ರ ದುರಂತವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+