ಕೊರೊನಾಗಿಂತಲೂ ಡೇಂಜರ್ ಈ ಡಿಂಗಾ ಡಿಂಗಾ ವೈರಸ್: ಏನಿದು ಹೊಸ ಖಾಯಿಲೆ,ಇದರ ಲಕ್ಷಣವೇನು?
ಇಡೀ ದೇಶವನ್ನೇ ಕೊರೋನಾ ಮಹಾಮಾರಿ ಬಿಟ್ಟುಬಿಡದೇ ಕಾಡಿತ್ತು. ಕೆಲ ವರ್ಷಗಳ ಕಾಲ ಕೊರೋನಾದಿಂದ ಜನತೆ ರೋಸಿ ಹೋಗಿದ್ರು, ಈ ಮಾರಕ ವೈರಸ್‌ಗೆ ಲಕ್ಷಾಂತರ ಜನರು ಬಲಿಯಾದರು. ಇದೀಗ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಹೊಸ ಖಾಯಿಲೆಯೊಂದು ವೇಗವಾಗಿ ಹರಡುತ್ತಿದೆ. ಇದು ಡಿಂಗಾ ಡಿಂಗಾ ಖಾಯಿಲೆ. ಹೆಸರು ವಿಚಿತ್ರವಾದರೂ ಕೋವಿಡ್ ರೀತಿಯಲ್ಲೇ ಡೇಂಜರಸ್ ಖಾಯಿಲೆ ಇದೆ.
ಡಿಂಗಾ ಡಿಂಗಾ ಎಂಬ ಹೆಸರಿನ ಈ ಖಾಯಿಲೆ ಸದ್ಯ ಉಗಾಂಡದಲ್ಲಿ ಕಂಡು ಬಂದಿದ್ದು, ಈ ಕಾಯಿಲೆ ಪ್ರಮುಖವಾಗಿ ಇದು ಮಹಿಳೆಯರು, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ದೇಶವೇ 2024ಕ್ಕೆ ಗುಡ್ ಬೈ ಹೇಳಿ 2025ಕ್ಕೆ ವೆಲ್‌ಕಮ್ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಹೊಸ ವರ್ಷದ ಸಂಭ್ರಮದ ನಡುವೆ ಡಿಂಗಾ ಡಿಂಗಾ ವೈರಸ್ ಜನರಲ್ಲಿ ದೊಡ್ಡ ಆತಂಕವನ್ನು ಮೂಡಿಸಿದೆ. ಆಫ್ರಿಕನ್ ದೇಶವಾದ ಉಗಾಂಡಾದಲ್ಲಿ 'ಡಿಂಗಾ ಡಿಂಗಾ' ಎಂಬ ವೈರಸ್ ಪತ್ತೆಯಾಗಿದೆ. ಬಂಡಿಬುಗ್ಯೋ ಜಿಲ್ಲೆಯಲ್ಲಿ 300 ಮಂದಿಗೆ ವಿಚಿತ್ರ ಕಾಯಿಲೆ ಬಂದಿದ್ದು, ಪತ್ತೆಯಾಗಿರುವ ಈ ವೈರಸ್‌ನಿಂದ ಭಾರೀ ಸಂಚಲನ ಸೃಷ್ಟಿಯಾಗಿದೆ.

ಉಗಾಂಡಾದಲ್ಲಿ ಈ ಕಾಯಿಲೆ ಪ್ರಮುಖವಾಗಿ ಮಹಿಳೆಯರು, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸ್ಥಳೀಯವಾಗಿ ಈ ಕಾಯಿಲೆಗೆ 'ಡಿಂಗಾ ಡಿಂಗಾ' ಎಂದು ಹೆಸರಿಸಲಾಗಿದೆ. ಈ ಹೆಸರು ಕೇಳಲು ಎಷ್ಟು ತಮಾಷೆಯಾಗಿದ್ದರೂ ತುಂಬಾ ಡೇಂಜರ್ ಆಗಿದೆಯಂತೆ ಹೆಚ್ಚಾಗಿ ಮಹಿಳೆಯರಲ್ಲಿ, ಹದಿಹರೆಯದ ಹುಡುಗಿಯರಲ್ಲಿ ಈ ಮಾರಕ ವೈರಸ್ ಕಂಡುಬರುತ್ತಿದೆಯಂತೆ. ಈ ಸೋಂಕಿನ ಬಗ್ಗೆ ವಿಶ್ವಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ. ಡಿಂಗಾ ಡಿಂಗಾ ವೈರಸ್ ಬಗ್ಗೆ ಇಡೀ ಜಗತ್ತಿಗೆ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ.
ಇನ್ನೂ ಕೊರೋನಾದ ಬಳಿಕ ಈ ಸಾಂಕ್ರಾಮಿಕ ರೋಗ ಮನುಷ್ಯರಿಂದ ಬಂತಾ ಅಥವಾ ಪ್ರಾಣಿ-ಪಕ್ಷಿಗಳಿಂದ ಬಂತಾ ಅಂತಾ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಈ ರೋಗಕ್ಕೆ ಔಷಧಿ ಕಂಡುಹಿಡಿಯುವ ಪ್ರಯತ್ನ ಸಹ ನಡೆಯುತ್ತಿದೆಯಂತೆ. ಉಗಾಂಡಾದಲ್ಲಿ ಕೊರೊನಾ ರೀತಿಯೇ ಈ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿದೆ. ಈ ರೋಗದ ಲಕ್ಷಣಗಳು ವಿಭಿನ್ನವಾಗಿದ್ದು, ಈ ಸಾಂಕ್ರಾಮಿಕ ರೋಗದ ಕುರಿತು ವಿಜ್ಞಾನಿಗಳು ಈ ರೋಗಕ್ಕೆ Disease X ಅಂತಾ ಕರೆಯುತ್ತಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಆಂಟಿ-ಬಯೋಟಿಕ್‌ಗಳನ್ನ ಕೊಡಲಾಗುತ್ತಿದೆ.
ಡಿಂಗಾ ಡಿಂಗಾ ಖಾಯಿಲೆಯ ಲಕ್ಷಣಗಳೇನು?
ಡಿಂಗಾ ಡಿಂಗಾ ಎಂಬುದು ವಿಚಿತ್ರ ಖಾಯಿಲೆಯಾಗಿದೆ. ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಈ ಜ್ವರದಿಂದಾಗಿ ವಿಪರೀತವಾಗಿ ಕೈಕಾಲು, ದೇಹವೇ ನಡುಗಲು ಆರಂಭವಾಗುತ್ತದೆ. ಡ್ಯಾನ್ಸ್ ರೀತಿ ಶೇಕ್ ಆಗಲಿದೆ. ಡಿಂಗಾ ಡಿಂಗಾ ಕಾಣಿಸಿಕೊಂಡವರಲ್ಲಿ ತೀವ್ರ ವೀಕ್ನೆಸ್, ನಿಶಕ್ತಿ, ರೋಗ ನಿರೋಧ ಶಕ್ತಿ ಕುಂದುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಇನ್ನೂ ಈ ಖಾಯಿಲೆ ಬಂದ ಕೆಲ ಪ್ರಕರಣಗಳಲ್ಲಿ ಪಾರ್ಶ್ವವಾಯು ಸಂಭವಿಸಿದೆ ಎಂದು ವರದಿಯಾಗಿದೆ.
ಕೆಲ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಡಿಂಗಾ ಡಿಂಗಾ ಖಾಯಿಲೆ ಕಾಣಿಸಿಕೊಂಡ ವ್ಯಕ್ತಿಗಳಿಗೆ ನಡೆದಾಡಲು ಸಾಧ್ಯವಾಗುವುದಿಲ್ಲ. ತಕ್ಕ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖವಾಗಲಿದೆ. ಆದರೆ ವಿಪರೀತವಾದರೆ ಇದರಿಂಗ ಅಗುವ ಪಾರ್ಶ್ವವಾಯು ಸೇರಿದಂತೆ ಇತರ ಸಮಸ್ಯೆಗಳು ಜೀವನ ಪರ್ಯಂತ ಸಂಕಷ್ಟಕ್ಕೆ ಒಳಗಾಗುವ ಸಾಧ್ಯವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಈ ರೋಗ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಇದರ ಬಗ್ಗೆ ಪ್ರತಿಯೊಬ್ಬರೂ ಸಹ ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.












Click it and Unblock the Notifications