Indians: ಅಮೆರಿಕದಿಂದ ಯುದ್ಧ ವಿಮಾನ ಬಳಸಿ ಭಾರತೀಯರ ಗಡಿಪಾರು ಶುರು!
ಅಮೆರಿಕದಲ್ಲಿ ಹಿಂದೆಂದೂ ಕೇಳದ ಕಠಿಣ ಆಡಳಿತ ಶುರುವಾಗಿದ್ದು. ಅಕ್ರಮ ವಲಸಿಗರಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಭಾರತೀಯ ವಲಸಿಗರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದ್ದಾರೆ. ಅಮೆರಿಕದಲ್ಲಿ ಅಂದಾಜು 18,000 ಸಾವಿರಕ್ಕೂ ಹೆಚ್ಚು ಅಕ್ರಮವಾಗಿ ಭಾರತೀಯರು ನೆಲೆಸಿದ್ದಾರೆ ಎಂದು ಹೇಳಲಾಗಿತ್ತು. ಇವರ ಬಳಿ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಇವರನ್ನು ಅಕ್ರಮ ವಲಸಿಗರು ಎಂದು ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಈ ರೀತಿ ನೆಲೆಸಿರುವವರನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಸಿದ್ಧವಾಗಿದೆ ಎನ್ನುವಾಗಲೇ ಅಮೆರಿಕ ಭಾರತಕ್ಕೆ ದೊಡ್ಡ ಶಾಕ್ ಕೊಟ್ಟಿದೆ. ಅಲ್ಲದೆ ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುವುದಕ್ಕೆ ಯುದ್ಧ ವಿಮಾನ ಹಾಗೂ ಮಿಲಿಟರಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅವರು ತೆಗೆದುಕೊಳ್ಳುತ್ತಿರುವ ಕಠಿಣ ನಿಯಮಗಳು ವಿಶ್ವದ ಹಲವು ರಾಷ್ಟ್ರಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುವ ಆತಂಕ ಎದುರಾಗಿದೆ. ಅದರಲ್ಲೂ ವಲಸೆ ನೀತಿಯನ್ನು ಕಠಿಣ ಮಾಡಲಾಗಿದ್ದು. ಭಾರತೀಯರಿಗೂ ಸಂಕಷ್ಟ ಎದುರಾಗಿದೆ. ಭಾರತ ಮಾತುಕತೆ ಪ್ರಾರಂಭಿಸುವುದಕ್ಕೂ ಮುಂಚೆಯೇ ಅಮೆರಿಕದಿಂದ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಭಾರತೀಯರನ್ನು ಕರೆಸಿಕೊಳ್ಳುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆ ಈಚೆಗೆ ಹೇಳಿತ್ತು. ಆದರೆ ಭಾರತದ ಪ್ರಸ್ತಾವನೆಗೆ ಅಮೆರಿಕ ಸಮಯವನ್ನೇ ಕೊಟ್ಟಿಲ್ಲ.

ಅಮೆರಿಕ ಭಾರತೀಯ ವಲಸಿಗರನ್ನು ತನ್ನ ದೇಶಕ್ಕೆ ಕಳುಹಿಸಲು ಶುರು ಮಾಡಿಕೊಂಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಅಲ್ಲದೆ ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ಕಳುಹಿಸಲು ಅಮೆರಿಕದ ಮಿಲಿಟರಿ ಹಾಗೂ ವಾಹನಗಳನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ.
ಈಗಾಗಲೇ ಯುಎಸ್ ಹಾಗೂ ಮೆಕ್ಸಿಕೋ ಗಡಿಗೆ ಹೆಚ್ಚುವರಿ ಮಿಲಿಟರಿ ಪಡೆಗಳನ್ನು ಕಳುಹಿಸಲಾಗಿದೆ. ಅಲ್ಲದೆ ಅಮೆರಿಕದಲ್ಲಿರುವ ವಲಸಿಗರನ್ನು ಗಡೀಪಾರು ಮಾಡಲು ಮಿಲಿಟರಿ ವಿಮಾನಗಳನ್ನು ಬಳಸಲಾಗುತ್ತಿದೆ. ವಸತಿ ವ್ಯವಸ್ಥೆಗೆ ಮಿಲಿಟರಿ ನೆಲೆಗಳನ್ನು ಬಳಸಲು ಅಮೆರಿಕ ಮುಂದಾಗಿದೆ.
ಭಾರತಕ್ಕೆ ಅಕ್ರಮ ವಲಸಿಗರು: ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ. ಸಿ -17 ವಿಮಾನದ ಮೂಲಕ ಭಾರತಕ್ಕೆ ವಲಸಿಗರನ್ನು ಕಳುಹಿಸಲಾಗುತ್ತಿದೆ. ಆದರೆ, ಕನಿಷ್ಠ 24 ಗಂಟೆ ಕಳೆದರೂ ವಿಮಾನಗಳು ಹಿಂದಿರುಗಿಲ್ಲ ಎಂದೂ ಹೇಳಲಾಗಿದ್ದು. ಈ ವಲಸಿಗರನ್ನು ಬೇರೆ ಎಲ್ಲದರೂ ಬಿಡಲಾಗಿದೆಯೇ ಎನ್ನುವ ಅನುಮಾನವೂ ಶುರುವಾಗಿದೆ. ಇನ್ನು ಅಮೆರಿಕ ಇದೇ ಮೊದಲ ಬಾರಿ ದೊಡ್ಡ ಮಟ್ಟದ ಗಡಿಪಾರು ಯೋಜನೆಯನ್ನು ಹಾಕಿಕೊಂಡಿದೆ. ಪ್ರಾರಂಭದ ಹಂತದಲ್ಲಿ ಅಂದಾಜು 5,000 ಸಾವಿರ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಿದ್ದು. ಇದಕ್ಕಾಗಿ ಅಮೆರಿಕದ ಮಿಲಿಟರಿಯ ಪೆಂಟಗನ್ ವಿಮಾನವನ್ನು ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ವಿವಿಧ ದೇಶಗಳಿಗೆ ವಲಸಿಗರನ್ನು ಕಳುಹಿಸುವುದನ್ನು ಶುರು ಮಾಡಲಾಗಿದೆ.
ಭಾರತೀಯ ವಲಸಿಗರನ್ನು ಕಳುಹಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಹೇಳಲಾಗುತ್ತಿದೆಯಾದರೂ. 24 ಗಂಟೆಯಾದರೂ ವಿಮಾನಗಳು ಹಿಂದಿರುಗದೆ ಇರುವುದು ಅನುಮಾನಕ್ಕೂ ಕಾರಣವಾಗಿದೆ. ಭಾರತ ಈ ಸಂಬಂಧ ಇಲ್ಲಿಯ ವರೆಗೂ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications