ಕಾಮಿಕ್ ಪಾತ್ರಧಾರಿ Archie Andrews ಕಥೆ ಅಂತ್ಯ
ಅಮೆರಿಕ, ಜು.11: ಅಮೆರಿಕದ ಪ್ರಸಿದ್ದ ಕಾಮಿಕ್ ಪುಸ್ತಕ ಪ್ರಕಾಶನ ಸಂಸ್ಥೆ Archie Comics ಪ್ರಕಟಿಸುವ ಪುಸ್ತಕದಲ್ಲಿ ಇನ್ನು ಮುಂದೆ Archie Andrews ಕುರಿತ ಕಥೆಗಳು ಪ್ರಕಟಗೊಳ್ಳುವುದಿಲ್ಲ.
ಜುಲೈ 16 ಸಂಚಿಕೆಯಲ್ಲಿ Archie Andrews ತನ್ನ ಸ್ನೇಹಿತನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡುವ ಕಥೆಯನ್ನು ಸೃಷ್ಟಿಸಿ Archie Comics ಸಂಸ್ಥೆ Archie Andrews ಕುರಿತ ಕಥೆಗಳ ಸರಣಿಗೆ ಮುಕ್ತಾಯ ಹಾಡಿದೆ.

ಕಳೆದ ಐದು ವರ್ಷಗಳಿಂದ ಪ್ರಕಟಗೊಳ್ಳುತ್ತಿದ್ದ Archie Andrews ಕುರಿತ ಕಥೆಗಳಿಗೆ ಜುಲೈ ತಿಂಗಳಿನಲ್ಲಿ ಮುಕ್ತಾಯ ಹಾಡಲಿದ್ದೇವೆ ಎಂದು Archie Comics ಪ್ರಕಾಶಕ ಜಾನ್ ಗೋಲ್ಡ್‌ವೇಟ್ ಏಪ್ರಿಲ್‌ನಲ್ಲಿ ತಿಳಿಸಿದ್ದರು.
ಇಲ್ಲಿಯವರೆಗೆ 37 ಸಂಚಿಕೆಯಲ್ಲಿ Archie Andrews ಸಂಬಂಧಿಸಿದಂತೆ ವಿವಿಧ ಕಥೆಗಳು ಪ್ರಕಟಗೊಂಡಿದ್ದು, Archie Andrews ಕಥೆಗಳು ವಿಶ್ವದೆಲ್ಲೆಡೆ ಅಪಾರ ಜನಮನ್ನಣೆಗಳಿಸಿತ್ತು.












Click it and Unblock the Notifications