26,000 ಜನರ ಸಾವು, ಲಕ್ಷ ಲಕ್ಷ ಜನರು ಬೀದಿಪಾಲು: ಇನ್ನೂ ಕಡಿಮೆ ಆಗಿಲ್ಲವಾ ರಕ್ತದಾಹ?
ಹಮಾಸ್ ಉಗ್ರರು ಮಾಡಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನ ಪರದಾಡುತ್ತಿದ್ದು, ಜೀವನವೇ ಸಾಕಾಗಿ ಹೋಗಿದೆ. ಅಕ್ಟೋಬರ್ 7ರ ಶನಿವಾರ, ಹಮಾಸ್ ಉಗ್ರರು ಇಸ್ರೇಲ್‌ನ ವಿರುದ್ಧ 5000 ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಿಸಿತ್ತು. ಈ ಘಟನೆಯು ನಡೆದು ಭರ್ಜರಿ 4 ತಿಂಗಳು ತುಂಬುತ್ತಿದ್ದರೂ ಯುದ್ಧ ಮಾತ್ರ ನಿಂತಿಲ್ಲ.
ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ಬಗ್ಗೆ ಈಗ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಅದರಲ್ಲೂ ಯುದ್ಧ ನಿಲ್ಲಿಸಬೇಕು ಅಂತಾ ಭಾರಿ ಒತ್ತಡ ನಿರ್ಮಾಣವಾಗಿದೆ. ಇಷ್ಟೆಲ್ಲಾ ಆದ್ರು ಕೂಡ ಇಸ್ರೇಲ್ ಮಾತ್ರ ಯುದ್ಧವನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಈವರೆಗೂ ಗಾಜಾಪಟ್ಟಿಯಲ್ಲಿ ಸುಮಾರು 26,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಹಾಗೇ ಲಕ್ಷ ಲಕ್ಷ ಜನರ ಬದುಕೀಗ ಬೀದಿಗೆ ಬಿದ್ದಿದೆ. ಈ ಸಮಯದಲ್ಲೇ ಇಂದು ಕೂಡ ಇಸ್ರೇಲ್ ಸೇನೆ ಕಡೆಯಿಂದ ಭೀಕರವಾದ ದಾಳಿ ನಡೆದು, ಸಾಮಾನ್ಯರು ಬಲಿಯಾಗಿರುವ ಆರೋಪ ಕೇಳಿಬಂದಿದೆ.

ಅನ್ನ, ನೀರಿಗೆ ಜನರ ಪರದಾಟ
ಹಮಾಸ್ ಉಗ್ರರು VS ಇಸ್ರೇಲ್ ನಡುವೆ ರಣರಂಗ ರಕ್ತಪಾತವಾಗಿದ್ದು, ಈಗ ಗಾಜಾಪಟ್ಟಿಯಲ್ಲಿ ಎಲ್ಲೆಲ್ಲೂ ಶವ ಕಾಣುತ್ತಿವೆ. ಸಾವಿರಾರು ಜನರು ಬಲಿಯಾಗಿ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ರೂ ಯುದ್ಧ ದಾಹ ಕಡಿಮೆಯಾಗಿಲ್ಲ. ಪರಿಸ್ಥಿತಿ ಹೀಗಿದ್ದಾಗ ಇಸ್ರೇಲ್ ಸೇನೆ ಮತ್ತಷ್ಟು ರಣ ಭೀಕರ ದಾಳಿ ಮುಂದುವರಿಸಿದೆ. ಈ ಮೂಲಕ ಗಾಜಾಪಟ್ಟಿ ಇದೀಗ ನರಕದಂತೆ ಕಾಣುತ್ತಿದೆ. ಅದರಲ್ಲೂ ತುತ್ತು ಅನ್ನ & ಹನಿ ನೀರಿಗೆ ಕೂಡ ಅಲ್ಲಿನ ಸಾಮಾನ್ಯ ಜನರು ಪ್ರತಿನಿತ್ಯವೂ, ಪ್ರತಿ ಕ್ಷಣವೂ ಪರದಾಡುತ್ತಿದ್ದಾರೆ. ಹೀಗಾಗಿ ಆಕ್ರೋಶ ಕೂಡ ಜೋರಾಗುತ್ತಿದೆ.
ವಿಶ್ವಸಂಸ್ಥೆ ಕೂಡ ಫ್ಲಾಪ್ ಆಯ್ತಾ?
ಇಸ್ರೇಲ್ ಹಾಗೂ ಹಮಾಸ್ ನಡುವೆ ತಿಕ್ಕಾಟ ಇಂದು ನಿನ್ನೆಯದಲ್ಲ, ಹಲವು ದಶಕಗಳಿಂದ ಈ ಫೈಟಿಂಗ್ ನಡೆಯುತ್ತಲೇ ಇದೆ. ಆದರೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಇಬ್ಬರ ಮಧ್ಯೆ ಆಕ್ರೋಶ ಭುಗಿಲೆದ್ದು, ಹಿಂಸೆ ಶುರುವಾಗಿತ್ತು. ಜಾಗತಿಕವಾಗಿ ಮತ್ತೊಂದು ಮಹಾಯುದ್ಧ ಶುರುವಾಗುವ ಮುನ್ಸೂಚನೆ ಸಿಗುತ್ತಿದೆ. ಹೀಗಿದ್ದಾಗ ಇಸ್ರೇಲ್ ಸೇನೆ ಸೈಲೆಂಟ್ ಮಾಡಲು ವಿಶ್ವಸಂಸ್ಥೆ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡಿ ವಿಫಲವಾಗಿದೆ. ಇದೀಗ ಗಾಜಾಪಟ್ಟಿ ಒಂದರಲ್ಲೇ ಸಾವಿನ ಸಂಖ್ಯೆ 26,000ದ ಗಡಿ ದಾಟಿದೆ. ಹೀಗಾಗಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದ್ಕಡೆ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ಭೀಕರ ಕಾಳಗ ನಡೆಸುತ್ತಾ, ಗಾಜಾ ನಗರದ ಮೇಲೆ ಹಕ್ಕು ಸಾಧಿಸುತ್ತಿದೆ. ಆದರೆ ಇನ್ನೊಂದೆಡೆ ಇಸ್ರೇಲ್ ಪರ ನಿಂತಿರುವ ಜಗತ್ತಿನ ದೊಡ್ಡಣ್ಣ ಎಂಬ ಖ್ಯಾತಿ ಪಡೆದ ಅಮೆರಿಕ ಮಾತ್ರ ಈ ಬಗ್ಗೆ ಸ್ಪಷ್ಟ ನಿಲುವನ್ನೂ ತೋರಿಸುತ್ತಿಲ್ಲ. ಒಂದ್ಕಡೆ ಇಸ್ರೇಲ್ ಸೇನೆಗೆ ಸಹಾಯ ಮಾಡುತ್ತಿದ್ದರೂ, ಮತ್ತೊಂದ್ಕಡೆ ಇಸ್ರೇಲ್ ಸೇನೆಯ ಯುದ್ಧದ ಬಗ್ಗೆ ವಿರೋಧಿಸುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಗೊಂದಲದ ಗೂಡಾಗಿದೆ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೊ ಗೊತ್ತಿಲ್ಲ.












Click it and Unblock the Notifications