US Venezuela Strike: 1989ರ ಪನಾಮ ಆಕ್ರಮಣ, ಅಧ್ಯಕ್ಷರ ಬಂಧನದ ಇತಿಹಾಸ ನೆನಪಿಸಿದ ಯುಎಸ್
ವಾಷಿಂಗ್ಟನ್: ಅಮೆರಿಕಾ ದೇಶ ವೆನೆಜುವೆಲಾ ಮೇಲೆ ದೊಡ್ಡಮಟ್ಟದ ರಣಭೀಕರ ದಾಳಿ ನಡೆಸಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾ ಪಡೆಗಳು ಸೆರೆ ಹಿಡಿದು ಅವರನ್ನು ಪತ್ನಿ ಸಮೇತ ದೇಶದಿಂದ ಹೊರ ಹಾಕಿವೆ. ಇಂದಿನ ಈ ಜಾಗತಿಕ ಮಟ್ಟದ ಬೆಳವಣಿಗೆಯು ಈ ಹಿಂದಿನ 1989 ರಲ್ಲಿ ಪನಾಮ ಮೇಲೆ ದಾಳಿ ನಡೆಸಿ ಅಂದಿನ ಅಧ್ಯಕ್ಷರನ್ನು ವಶಕ್ಕೆ ಪಡೆದ ಇತಿಹಾಸವನ್ನು ನೆನಪಿಸಿದೆ. ಅಂದಿನ ಆಕ್ರಮದಲ್ಲಿ ಏನೆಲ್ಲ ಆಯಿತು ಎಂಬ ವಿವರ ಇಲ್ಲಿದೆ.
ಇಂದು 2026ರಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಸೆರೆ ಹಿಡಿದಂತೆ 1989 ರಲ್ಲಿ ಅಂದು ಅಮೆರಿಕವು ಪನಾಮದ ಅಧ್ಯಕ್ಷ ಸವಾಧಿಕಾರಿ ಮ್ಯಾನುಯೆಲ್ ನೊರಿಗಾ ಅವರನ್ನು ಸೆರೆ ಹಿಡಿದಿತ್ತು. ಅಲ್ಲಿಂದ ಅವರನ್ನು ತಮ್ಮ ದೇಶಕ್ಕೆ ಕರೆದೊಯ್ಯಲಾಗಿತ್ತು. ಅಂತದ್ದೆ ದಾಳಿ ಘಟನೆ, ಜಾಗತಿಕ ಬೆಳವಣಿಗೆ ಇಂದು ಮತ್ತೆ ಮರುಕಳಿಸಿದ್ದನ್ನು ಇದೀಗ ಸ್ಮರಿಸಬಹುದು.

ವಿದೇಶಗಳ ಮೇಲಿನ ಯುಎಸ್ ದಾಳಿ ಅಲ್ಲಿನ ಆಡಳಿತಗಾರನನ್ನು ಸೆರೆಹಿಡಿದು ಕಾನೂನು ಕ್ರಮ ಎದುರಿಸಲು ವಿದೇಶಕ್ಕೆ ಸಾಗಿಸಿದ ಕೆಲವೇ ನಿದರ್ಶನಗಳಲ್ಲಿ ಇವು ಸೇರಿವೆ. 1989 ರಲ್ಲಿ ಡಿಸೆಂಬರ್ ನಲ್ಲಿ ಆಪರೇಷನ್ ಜಸ್ಟ್ ಕಾಸ್ ಪನಾಮ ಹೆಸರಿನಲ್ಲಿ ದೊಡ್ಡ ದಾಳಿಯನ್ನು ಯುಎಸ್ ನಡೆಸಿತ್ತು. ಪನಾಮದ ಜನರಲ್ ಮ್ಯಾನುಯೆಲ್ ಆಂಟೋನಿಯೊ ನೊರಿಗಾ ಅವರನ್ನು ಪದಚ್ಯುತಗೊಳಿಸಲು ಅಂದು ಆಕ್ರಮಣ ನಡೆಸಿದ್ದಾಗೆ ಯುಎಸ್ ಹೇಳಿಕೊಂಡಿತ್ತು.
ಯುಎಸ್‌ಗೆ ಪನಾಮ ಅಧ್ಯಕ್ಷ ಶರಣು
ನೊರಿಗಾ ಮೇಲೆ ಮಾದಕವಸ್ತು ಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ದರೋಡೆಕೋರರ ಆರೋಪ ಇತ್ತು. ಆತನ ವಿರುದ್ಧ ಅಮೆರಿಕ ನ್ಯಾಯಾಲಯಗಳಲ್ಲಿ ದೋಷಾರೋಪಣೆ ಸಲ್ಲಿಸಲಾಗಿತ್ತು. 10 ದಿನಗಳ ಕಾಲ ಆಶ್ರಯ ಪಡೆದ ನಂತರ 1990 ಜನವರಿ 3 ರಂದು ಯುಎಸ್‌ಗೆ ಪನಾಮ ಅಧ್ಯಕ್ಷ ಶರಣಾದರು. ಮಾರನೇ ದಿನವೇ ಅವರನ್ನು ವಿಮಾನದಲ್ಲಿ ಅಮೆರಿಕಾಗೆ ಕರೆದೊಯ್ಯಲಾಯಿತು. ಅಲ್ಲಿಂದ ಎರಡು ವರ್ಷಗಳ ಸುದೀರ್ಘ ವಿಚಾರಣೆ ನಡೆದು 1992 ರಲ್ಲಿ ನೊರಿಗಾ ಅವರನ್ನು ಅಪರಾಧಿ (ದೋಷಿ) ಎಂದು ಯುಎಸ್ ನ್ಯಾಯಾಲಯ ಘೋಷಿಸಿತು. 40 ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಲಾಯಿತು. ಬಳಿಕ ಒಂದಷ್ಟು ಕಾರಣದಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಲಾಯಿತು. ಯುಎಸ್‌ನಲ್ಲಿ ಸೇವೆ ಸಲ್ಲಿಸಿದ ಬಳಿಕ ನೊರಿಗಾರನ್ನು ಫ್ರಾನ್ಸ್‌ಗೆ ಹಸ್ತಾಂತರಿಸಿದ ನಂತರ 2017 ರಲ್ಲಿ ಅವರು ನಿಧನರಾದರು.
ನೊರಿಗಾ ಅಧಿಕಾರಕ್ಕೆ ಬಂದು ಮಾಡಿದ್ದೇನು?
ಪನಾಮದ ಪ್ರಬಲ ವ್ಯಕ್ತಿ ಒಮರ್ ಟೊರಿಜೋಸ್ ಅವರು 1981ರಲ್ಲಿ ನಿಧನರಾದರು. ಅವರ ನಂತರ ಅಲ್ಲಿ ನೊರಿಗಾ ಅಧಿಕಾರ ಹುದ್ದೆ ಅಲಂಕರಿಸಿದರು. ಮಿಲಿಟರಿ ಮುಖ್ಯಸ್ಥ ಮತ್ತು ಪನಾಮದ ವಾಸ್ತವಿಕ ನಾಯಕರಿಂದ ವ್ಯಾಪಕ ಭ್ರಷ್ಟಾಚಾರ ಶುರುವಾಯಿತು. ದಮನ ಮತ್ತು ಹಿಂಸಾಚಾರಗಳು ಆರಂಭವಾದವು. ಇದಕ್ಕು ಮೊದಲು ಸಿಐಎ ಗಾಗಿ ಕೆಲಸ ಮಾಡಿದ್ದ ನೊರಿಗಾ ನಂತರ ಡಬಲ್ ಏಜೆಂಟ್ ಆಗಿ ಬದಲಾದರು. ಯುಎಸ್ ನಿಂದ ಕ್ಯೂಬಾ ಮತ್ತು ಈಸ್ಟರ್ನ್ ಬ್ಲಾಕ್ ದೇಶಗಳಿಗೆ ಮಾದಕವಸ್ತು ಕಳ್ಳಸಾಗಣೆ ಮಾಡಿದರು. ಈ ಆ ಮಾರಾಟದಿಂದಲೇ ಅಧಿಕ ಲಾಭ ಗಳಿಸಿದ್ದರು.
ಇದೆಲ್ಲ ಬೆಳವಣಿಗೆ ಆಗುತ್ತಿದ್ದಂತೆ 1980ರಲ್ಲಿ ನೊರಿಗಾ ಚುನಾವಣೆಗಳನ್ನು ರದ್ದುಗೊಳಿಸಲಾಯಿತು. ಅಷ್ಟೇ ಅಲ್ಲದೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿ, ಭಿನ್ನಾಭಿಪ್ರಾಯ ಹತ್ತಿಕ್ಕುವ ಹೊತ್ತಿಗೆ ಅಮೆರಿಕಾದೊಂದಿಗಿನ ಸಂಬಂಧ ಹಳಸಿತು. ಡಿಸೆಂಬರ್ 1989 ರಲ್ಲಿ ಪನಾಮದ ಪಡೆಗಳಿಂದ ಯುಎಸ್ ಮೆರೈನ್ ಹತ್ಯೆ ಆಯಿತು. ಅಂದಿನ ಯುಎಸ್ ಅಧ್ಯಕ್ಷ ಜಾರ್ಜ್ ಬುಷ್ ದಾಳಿಗೆ ಆದೇಶಿಸಿದರು. ಅಂದು ಸಹ ಬೃಹತ್ ಮಟ್ಟದ ಯಶಸ್ವಿ ದಾಳಿ ಪನಾಮದ ಮೇಲೆ ನಡೆದು ನೂರಾರು ಸೈನಿಕರು ಮತ್ತು ನಾಗರಿಕರನ್ನು ಕೊಲ್ಲಲಾಯಿತು. ಅಂದಿನ ಪನಾಮದ ರೀತಿಯಲ್ಲಿಯೇ ಇಂದಿನ ವೆನೆಜುವೆಲಾ ದೇಶದ ಮೇಲೆ ಯುಎಸ್ ಆಕ್ರಮಣ ನಡೆಸಿದೆ. ಈ ಮೂಲಕ ಯುಎಸ್ ತನ್ನ ಸೈನಿಕ ಬಲಾಢ್ಯತೆಯ ಇತಿಹಾಸವು ಇಂದು ಮತ್ತೆ ನೆನಪಾಗುವಂತೆ ಮಾಡಿದೆ.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications