Cyclone Mocha: ಬಾಂಗ್ಲಾದೇಶ-ಮ್ಯಾನ್ಮಾರ್‌ನಲ್ಲಿ ವಿನಾಶದ ದೃಶ್ಯ! ಟೆಲಿಕಾಂ ಟವರ್ ಬೀಳುವ ಲೈವ್ ವಿಡಿಯೋ

ಮೋಚಾ ಚಂಡಮಾರುತ ಎಲ್ಲಡೆ ಕೆಟ್ಟ ಪರಿಣಾಮವನ್ನು ಬೀರಿದೆ. ಭಾರತದ ಹಲವೆಡೆ ಬಲವಾದ ಗಾಳಿಯಿಂದ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಆದರೆ ಮೋಚಾ ಚಂಡಮಾರುತ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ದ ಹಲವು ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ. ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸಿದ್ದು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಬಂಗಾಳಕೊಲ್ಲಿಯಲ್ಲಿ ತೀವ್ರವಾದ ಮೋಚಾ ಚಂಡಮಾರುತ ಭಾರತದ ಹಲವಾರು ಪ್ರದೇಶಗಳ ಮೇಲೆಯೂ ಪ್ರಭಾವ ಉಂಟು ಮಾಡಿ ಸದ್ಯ ದುರ್ಬಲಗೊಂಡಿದೆ. ಇದರಿಂದಾಗಿ ಭಾನುವಾರ ಬಾಂಗ್ಲಾದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇನ್ನು ಭಾರತದ ಪಶ್ಚಿಮ ಬಂಗಾಳದ ಮೇಲೆಯೂ ಪರಿಣಾಮ ಬೀರಿದೆ. ಕಳೆದ ದಿನ ಮ್ಯಾನ್ಮಾರ್‌ನ ಸಿಟ್ವೆಯಿಂದ ಉತ್ತರಕ್ಕೆ 40 ಕಿಮೀ ಮತ್ತು ಕಾಕ್ಸ್ ಬಜಾರ್‌ನ ಆಗ್ನೇಯಕ್ಕೆ 145 ಕಿಮೀ ದೂರದಲ್ಲಿತ್ತು. ಇದು ಮ್ಯಾನ್ಮಾರ್‌ನಲ್ಲಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದೆ.

Cyclone Mocha: Scene of destruction in Bangladesh-Myanmar! Live video of telecom tower falling

ಟೆಲಿಕಾಂ ಟವರ್ ಕುಸಿತದ ಲೈವ್ ವಿಡಿಯೋ

ಮ್ಯಾನ್ಮಾರ್‌ನಲ್ಲಿ ಚಂಡಮಾರುತದಿಂದ ಉಂಟಾದ ಹಾನಿಯನ್ನು ಮೂರು ಜನರು ಸಾವನ್ನಪ್ಪಿದ್ದಾರೆ ಎಂಬ ಅಂಶದಿಂದ ಅಳೆಯಬಹುದು. ಮೊಬೈಲ್/ಟೆಲಿಕಾಂ ಟವರ್ 50 ಮೀಟರ್‌ಗಿಂತ ಹೆಚ್ಚು ಎತ್ತರಕ್ಕೆ ಬೀಳುವ ಲೈವ್ ವೀಡಿಯೊವನ್ನು BBC ಹಂಚಿಕೊಂಡಿದೆ.


ಸ್ಟೀಲ್ ಟವರ್ ಪೇಪರ್ ಕಟ್ಟಡದಂತೆ ಕುಸಿದ VIDEO

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮ್ಯಾನ್ಮಾರ್‌ನ ಸಿಟ್ವೆಯಲ್ಲಿ ಟವರ್ ಪೇಪರ್ ಕಟ್ಟಡದಂತೆ ಕುಸಿದು ಬಿದ್ದಿರುವುದನ್ನು ಕಾಣಬಹುದು. 100 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೀಸುವ ಗಾಳಿಯ ರಭಸಕ್ಕೆ ಇಡೀ ಸ್ಟೀಲ್ ಟವರ್ ನೆಲಸಮವಾಗುತ್ತದೆ.


ನಿರಾಶ್ರಿತರ ಶಿಬಿರ ನಾಶ

ಮಳೆ, ಗಾಳಿಯ ನಡುವೆ ಸುತ್ತಲಿನ ಮರಗಳು ಸಹ ನಿಲ್ಲಲು ಕಷ್ಟಪಡುತ್ತಿರುವಂತೆ ವಿಡಿಯೋದಲ್ಲಿ ಕಾಣಬಹುದು. BBC ವರದಿಯ ಪ್ರಕಾರ, ಮ್ಯಾನ್ಮಾರ್‌ನ Kyaukpuy ನಗರದಲ್ಲಿ ನಿರಾಶ್ರಿತರ ಶಿಬಿರಗಳು ನಾಶವಾಗಿವೆ. ಈ ವಿನಾಶದ ದೃಶ್ಯಗಳು ಮನಕಲಕುವಂತಿದೆ. ರೋಹಿಂಗ್ಯಾ ನಿರಾಶ್ರಿತರ ಶಿಬಿರದ ಮೇಲ್ಛಾವಣಿಗಳು ಬಲವಾದ ಗಾಳಿಗೆ ಹಾರಿ ಹೋಗಿವೆ. ಹಲವೆಡೆ ಜನರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯ ಕಂಡು ಬಂದಿದೆ.

ವಿದ್ಯುತ್-ನೀರು-ಫೋನ್ ಸಂಪರ್ಕ ಕಡಿತ

ಮ್ಯಾನ್ಮಾರ್‌ನ ಅನೇಕ ಪ್ರದೇಶಗಳಲ್ಲಿ ವಾಹನಗಳಲ್ಲಿ ಜನರು ಸಿಕ್ಕಿಬಿದ್ದಿರುವುದನ್ನು ಕಾಣಬಹುದು. ರಸ್ತೆಯಲ್ಲಿ ಸಿಲುಕಿರುವ ವಾಹನಗಳಿಗೆ ಹಾನಿಯಾಗಿರುವ ಸುದ್ದಿಯೂ ಇದೆ. ಅಂತರಾಷ್ಟ್ರೀಯ ವರದಿಗಳಲ್ಲಿ ವಿದ್ಯುತ್, ನೀರು, ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಕಡಿತದ ವರದಿಗಳೂ ಇವೆ.

ಚಂಡಮಾರುತದಿಂದ ಹಾನಿಯ ನಿಖರವಾದ ಮೌಲ್ಯಮಾಪನವಿಲ್ಲ. ಮ್ಯಾನ್ಮಾರ್ ನ ಬೀದಿಗಳಲ್ಲಿ ಜಲಾವೃತವಾಗಿರುವ ಚಿತ್ರಗಳೂ ಕಣ್ಮುಂದೆ ಬಂದಿವೆ. ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳು ಉರುಳಿದೆ. ಮನೆಗಳ ಛಾವಣಿ ಹಾರಿ ಹೋಗಿರುವ ದೃಶ್ಯಗಳು ವೈರಲ್ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+