Donald Trump: ಟ್ರಂಪ್ ಎಂಟ್ರಿಗೆ ಮೊದಲೇ ‘ಕ್ರಿಪ್ಟೋ ಕರೆನ್ಸಿ’ ಮಾರುಕಟ್ಟೆಯಲ್ಲಿ ಹಬ್ಬ ಶುರು!
ಡೊನಾಲ್ಡ್ ಟ್ರಂಪ್ ಅವರ ಸುದ್ದಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಯಾಕಂದ್ರೆ ಇಡೀ ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕದ ನೂತನ ಅಧ್ಯಕ್ಷರಾಗಿ, ಡೊನಾಲ್ಡ್ ಟ್ರಂಪ್ ನಾಳೆ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಹೀಗೆ ಡೊನಾಲ್ಡ್ ಟ್ರಂಪ್ ಅವರ ಎಂಟ್ರಿಗೆ ಕಾದು ಕುಳಿತಿದ್ದಾರೆ ನೂರಾರು ಕೋಟಿ ಜನ. ಅದರಲ್ಲೂ 'ಕ್ರಿಪ್ಟೋ ಕರೆನ್ಸಿ' ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಶುರುವಾಗಿದೆ!
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾತು ಕೊಟ್ಟಿದ್ದಂತೆ 'ಕ್ರಿಪ್ಟೋ ಕರೆನ್ಸಿ' ಮಾರುಕಟ್ಟೆ ಬೆಂಬಲಿಸಲು ನಿರ್ಧರಿಸಿದ್ದಾರೆ. ಇದು 'ಕ್ರಿಪ್ಟೋ ಕರೆನ್ಸಿ' ಮೇಲೆ ಹಣ ಹೂಡಿಕೆ ಮಾಡಿದ್ದವರಿಗೆ & ಹಣ ಹೂಡಿಕೆ ಮಾಡುವವರಿಗೆ ಹಬ್ಬದ ವಾತಾವರಣ ಸೃಷ್ಟಿಸಿ ಸಂಚಲನ ಸೃಷ್ಟಿ ಮಾಡುತ್ತಿದೆ.

ಈಗಾಗಲೇ ಲಕ್ಷಾಂತರ ಕೋಟಿ ರೂಪಾಯಿ ಲಾಭ ಮಾಡಿ, ಫುಲ್ ಎಂಜಾಯ್ ಮಾಡುತ್ತಿದ್ದಾರೆ ಹೂಡಿಕೆದಾರರು. ಹಾಗೇ ಇನ್ನೂ ಕೆಲವರು, ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸುವ ದಿನ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬ ಗ್ಯಾರಂಟಿ ಎಂಬ ಮಾತುಗಳು ತಜ್ಞರಿಂದ ಕೇಳಿ ಬರುತ್ತಿವೆ.
ಷೇರು ಮಾರುಕಟ್ಟೆ ಮೇಲೆ ಪ್ರಭಾವ?
ಸಹಜವಾಗಿ ಅಮೆರಿಕ ಇಡೀ ಜಗತ್ತಿನ ವ್ಯವಹಾರದ ಮೇಲೆ ತನ್ನ ಪ್ರಭಾವ ಹೊಂದಿರುತ್ತದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಹಿನ್ನೆಲೆ ಜಾಗತಿಕ ಷೇರು ಮಾರುಕಟ್ಟೆ ಮೇಲೆ ಕೂಡ ಹಲವು ರೀತಿಯ ಪ್ರಭಾವ ಉಂಟಾಗುವ ನಿರೀಕ್ಷೆ ಇದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ, ಹೀಗಾಗಿ ಭಾರತವು ಸೇರಿದಂತೆ ಜಗತ್ತಿನಾದ್ಯಂತ ಹೂಡಿಕೆದಾರರು ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕಾಯುತ್ತಿದ್ದಾರೆ.
ಜಗತ್ತಿನಾದ್ಯಂತ ಟ್ರಂಪ್ ಸುದ್ದಿಯೇ ಟ್ರೆಂಡ್!
ಅಮೆರಿಕದ ನೂತನ ಅಧ್ಯಕ್ಷರಾಗಿ, ಅಧಿಕಾರ ಸ್ವೀಕರಿಸುತ್ತಿರುವ ಟ್ರಂಪ್ ಅವರಿಗೆ ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು & ಗಣ್ಯರು ಶುಭ ಕೋರಿದ್ದಾರೆ. ಇದರ ಜೊತೆಗೆ ಟ್ರಂಪ್ ಅವರ ಎಂಟ್ರಿ ನಂತರ ದೊಡ್ಡ ಮಟ್ಟಿಗೆ ಬದಲಾವಣೆ ಆಗುವ ನಿರೀಕ್ಷೆ ಕೂಡ ಇದೆ. ಹೀಗಾಗಿ ಇಡೀ ಜಗತ್ತಿನ ಗಮನ ಇದೀಗ ಅಮೆರಿಕದ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿಯೇ, ಜಗತ್ತಿನಾದ್ಯಂತ ಟ್ರಂಪ್ ಅವರ ಸುದ್ದಿಯೇ ಟ್ರೆಂಡ್ ಆಗಿದೆ!












Click it and Unblock the Notifications