New Year 2024: ಪ್ರಪಂಚದಾದ್ಯಂತ ಹೊಸ ವರ್ಷ ಭಾರತಕ್ಕೂ ಮೊದಲೇ ಬರಮಾಡಿಕೊಂಡ ದೇಶಗಳಿವು.....
ಪ್ರಪಂಚದಾದ್ಯಂತ ಜನರು 2024 ಅನ್ನು ತುಂಬಾ ಅದ್ಧೂರಿಯಾಗಿ ಸ್ವಾಗತಿಸಿದರು. ಅನೇಕ ದೇಶಗಳಲ್ಲಿ ಹೊಸ ವರ್ಷ ಪ್ರಾರಂಭವಾಗಿದೆ. ಕಳೆದ ದಿನ ರಾತ್ರಿಯಿಂದಲೇ ಬಹುತೇಕ ದೇಶಗಳು ಹೊಸ ವರ್ಷದ ಆಚರಣೆ ಮಾಡಿವೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ 2024 ಅನ್ನು ಬಲಮಾಡಿಕೊಳ್ಳಲಾಯಿತು.
ಭಾರತದಲ್ಲಿಯೂ ಈ ಬಾರಿ ಜನರ ಅತ್ಯಂತ ಉತ್ಸಾಹದಿಂದ ಹೊಸ ವರ್ಷವನ್ನು ಸ್ವಾಗತಿಸಿದರು. 2024ರ ಹೊಸ ವರ್ಷವನ್ನು ಯಾವೆಲ್ಲಾ ದೇಶಗಳು ಪ್ರವೇಶಿಸಿವೆ. ಅದರ ಒಂದು ನೋಟವನ್ನು ತಿಳಿಯೋಣ.

ಕಿರಿಬಾಟಿ
ಕಿರಿಬಾಟಿ ಎಂಬುದು ಪೆಸಿಫಿಕ್ ಮಹಾಸಾಗರದಲ್ಲಿರುವ ಒಂದು ಸಣ್ಣ ದ್ವೀಪ. ಇದು 2024ರ ಹೊಸ ವರ್ಷವನ್ನು ಆಚರಿದ ಮೊದಲ ದೇಶವಾಗಿದೆ. ಕ್ರಿಸ್‌ಮಸ್ ದ್ವೀಪ ಎಂದೂ ಕರೆಯಲ್ಪಡುವ ದೇಶದ ಅತಿದೊಡ್ಡ ಈ ದ್ವೀಪವು 2024 ಅನ್ನು ಅದ್ದೂರಿಯಾಗಿ ಪ್ರವೇಶಿಸಿತು. ಭಾರತೀಯ ಕಾಲಮಾನದ ಪ್ರಕಾರ, ಸಂಜೆ 5:30 ಕ್ಕೆ ಕಿರಿಬಾಟಿ ದ್ವೀಪದಲ್ಲಿ ದಿನಾಂಕ ಜನವರಿ 1, 2024 ಆಗಿತ್ತು. ಕಿರಿಬಾಟಿ ಮಧ್ಯ ಪೆಸಿಫಿಕ್‌ನಲ್ಲಿರುವ 33 ದ್ವೀಪಗಳ ಸಮೂಹವಾಗಿದೆ. 35 ಲಕ್ಷ ಚದರ ಕಿಲೋಮೀಟರ್ ಪ್ರದೇಶವು ಇದರ ವ್ಯಾಪ್ತಿಗೆ ಬರುತ್ತದೆ.
ಆಕ್ಲೆಂಡ್, ನ್ಯೂಜಿಲೆಂಡ್
ಕಿರಿಬಾಟಿಯ ನಂತರ, ಆಕ್ಲೆಂಡ್, ನ್ಯೂಜಿಲೆಂಡ್ ಕೂಡ 11:00 (GMT) ಕ್ಕೆ ಆಕ್ಲೆಂಡ್ ಸ್ಕೈ ಟವರ್‌ನಿಂದ ಪಟಾಕಿ ಮತ್ತು ನಗರದ ಹಾರ್ಬರ್ ಸೇತುವೆಯ ಮೇಲೆ ಬೆಳಕಿನ ಪ್ರದರ್ಶನದೊಂದಿಗೆ 2024 ವರ್ಷವನ್ನು ಸ್ವಾಗತಿಸಿತು.
#WATCH | New Zealand's Auckland welcomes the new year 2024 with fireworks
— ANI (@ANI) December 31, 2023
(Source: Reuters) pic.twitter.com/faBWL0b7Eh
ಸಿಡ್ನಿ ಹಾರ್ಬರ್ ಸೇತುವೆಯ ಮೇಲೆ ಬಲವಾದ ಪಟಾಕಿ
ಆಸ್ಟ್ರೇಲಿಯಾದಲ್ಲೂ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ನ್ಯೂಜಿಲೆಂಡ್ ನಂತರ ಆಸ್ಟ್ರೇಲಿಯಾದಲ್ಲೂ ಹೊಸ ವರ್ಷದ ಆಚರಣೆಗಳು ಭಾರತೀಯ ಕಾಲಮಾನದ ಪ್ರಕಾರ 6:30 ಕ್ಕೆ ನಡೆದವು. ಈ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಯಿತು.
ನ್ಯೂಜಿಲೆಂಡ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ 2 ಗಂಟೆಗಳ ನಂತರ ನೆರೆಯ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಹೊಸ ವರ್ಷವನ್ನು ಸ್ವಾಗತಿಸಲು ಸಿಡ್ನಿಯ ವಿಶ್ವವಿಖ್ಯಾತ ಸಿಡ್ನಿ ಹಾರ್ಬರ್ ಸೇತುವೆಯ ಮೇಲೆ ಆಖರ್ಷಕ ಪಟಾಕಿಗಳನ್ನು ಸಿಡಿಸಲಾಯಿತು. ಹಾರ್ಬರ್ ಸೇತುವೆಯ ಮೇಲಿನ ಪಟಾಕಿಗಳನ್ನು ಪ್ರಪಂಚದಾದ್ಯಂತ ಸುಮಾರು 425 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಭಾರತದಲ್ಲಿ ಕೌಂಟ್‌ಡೌನ್ ಪ್ರಾರಂಭ
ಭಾರತ ಮತ್ತು ಚೀನಾದಲ್ಲೂ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಇಲ್ಲೂ 12 ಗಂಟೆಗಾಗಿ ಕಾತರದಿಂದ ಕಾಯುತ್ತಿದ್ದ ಜನ ಹೊಸ ವರ್ಷವನ್ನು ಬರಮಾಡಿಕೊಂಡರು. ಭಾರತದಲ್ಲಿ ಹೊಸ ವರ್ಷ ಆಚರಣೆಗೆ ಸಂಬಂಧಿಸಿದಂತೆ ರಾಜಧಾನಿ ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ರಾಜಧಾನಿ ದೆಹಲಿಯ ಹಲವೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.












Click it and Unblock the Notifications