Iran-US War: ಇರಾನ್ - ಅಮೆರಿಕ ಯುದ್ಧ ಮುಕ್ತಾಯಕ್ಕೆ ಕ್ಷಣಗಣನೆ: ಡೊನಾಲ್ಡ್‌ ಟ್ರಂಪ್ ಹೇಳಿದ್ದೇನು - ಇರಾನ್ ವಾದವೇನು

Iran-US War: ಅಮೆರಿಕ, ಇಸ್ರೇಲ್ Vs ಇರಾನ್‌ನ ನಡುವೆ ನಡೆಯುತ್ತಿರುವ ಸುದೀರ್ಘ ಅವಧಿಯ ಯುದ್ಧವು ಇನ್ನೇನು ಮುಕ್ತಾಯವಾಗುವ ಹಂತಕ್ಕೆ ಬಂದಿರುವಂತಿದೆ. ಇರಾನ್‌ನೊಂದಿಗಿನ ಯುದ್ಧ ಮುಕ್ತಾಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಮಹತ್ವದ ಅಪ್ಡೇಟ್ಸ್‌ ಕೊಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಇರಾನ್ ದೇಶವು ಯುದ್ಧದಲ್ಲಿ ಸಂಪೂರ್ಣವಾಗಿ ಹೈರಾಣಾಗಿದೆ ಎಂದು ಹೇಳುತ್ತಿದ್ದರೂ ಸಹ ಇರಾನ್‌ ದೇಶವು ಇನ್ನೂ ಅಮೆರಿಕ ಹಾಗೂ ಇಸ್ರೇಲ್ ದೇಶಗಳಿಗೆ ತಿರುಗೇಟು ನೀಡುವುದನ್ನು ಮುಂದುವರಿಸಿದೆ. ಇದೀಗ ಅಮೆರಿಕ ಇರಾನ್‌ಗೆ ಮತ್ತೊಂದು ಪ್ರಸ್ತಾಪವನ್ನು ಕಳುಹಿಸಿದೆ. ಇದರಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಕೆಲವೊಂದು ನಿರ್ದಿಷ್ಟ ಷರತ್ತುಗಳು ಸೇರಿಸಲಾಗಿದೆ. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಅಮೆರಿಕ ಇರಾನ್‌ಗೆ 48 ಗಂಟೆಗಳ ಕಾಲಾವಕಾಶವನ್ನೂ ಕೊಟ್ಟಿದೆ. ಆದರೆ, ಇದು ಯುದ್ಧ ಮುಕ್ತಾಯಕ್ಕೆ ದಾರಿ ಆಗಲಿದೆಯೇ ಅಥವಾ ಯುದ್ಧ ಮತ್ತೆ ತೀವ್ರವಾಗಲಿದೆಯೇ ಎನ್ನುವ ಚರ್ಚೆಗೆ ಕಾರಣವಾಗಿದೆ.

Iran-US War

ಶಾಂತಿ ಮಾತುಕತೆ ಪ್ರಾರಂಭ ಮಾಡಿದಾಗಿನಿಂದಲೂ ಇರಾನ್ ತನ್ನ ಷರತ್ತುಗಳಿಂದ ಹಿಂದೆ ಸರಿದಿಲ್ಲ. ಅಮೆರಿಕದ ಹಿಂದಿನ ಪ್ರಸ್ತಾಪಗಳನ್ನು ಸ್ವೀಕರಿಸಲು ಇರಾನ್ ನಿರಾಕರಿಸಿದೆ. ಹೀಗಾಗಿ ಹೊಸ ಷರತ್ತುಗಳ ಬಗ್ಗೆ ಚರ್ಚೆ ನಡೆದಿದೆ. ಅಮೆರಿಕದ ಷರತ್ತುಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಅಮೆರಿಕದ 14 ಷರತ್ತುಗಳನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ ಹಾಗೂ ನ್ಯಾಯ ಸಮ್ಮತವಾದ ಷರತ್ತುಗಳನ್ನು ಮಾತ್ರ ನಾವು ಒಪ್ಪಿಕೊಳ್ಳಿದ್ದೇವೆ ಎಂದು ಇರಾನ್ ಹೇಳಿದೆ.

Iran-US War: ಬಾಂಬ್ ದಾಳಿ ಮಾಡುವುದಾಗಿ ಎಚ್ಚರಿಕೆ

ಇನ್ನು ಅಮೆರಿಕ ವಿಧಿಸಿರುವ ಷರತ್ತುಗಳನ್ನು ಒಂದೊಮ್ಮೆ ಇರಾನ್ ಒಪ್ಪಿಕೊಳ್ಳದಿದ್ದರೆ, ಇರಾನ್‌ನ ಮೇಲೆ ಭೀಕರ ಬಾಂಬ್ ದಾಳಿ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಹೆಚ್ಚಿನ ಬಾಂಬ್ ದಾಳಿಗಳನ್ನು ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಬೆದರಿಕೆಯನ್ನೂ ಹಾಕಿದ್ದಾರೆ.

ಟ್ರೂತ್ ಸೋಶಿಯಲ್ ಮೀಡಿಯಾದಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ಇರಾನ್ ಒಪ್ಪಂದವನ್ನು ಒಪ್ಪಿಕೊಳ್ಳುವುದ ಆಧಾರದ ಮೇಲೆ ಈ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಲಿದೆಯೇ ಎನ್ನುವುದು ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ. ಅಂತಿಮವಾಗಿ "ಅವರು ಒಂದೊಮ್ಮೆ ಒಪ್ಪದಿದ್ದರೆ ಬಾಂಬ್ ದಾಳಿ ಪ್ರಾರಂಭವಾಗಲಿತ್ತದೆ" ಎಂದು ಡೊನಾಲ್ಡ್‌ ಟ್ರಂಪ್ ಎಚ್ಚರಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವೆ ಇನ್ನೂ ವಿಶ್ವಾಸದ ಕೊರತೆ ಇದೆ ಎಂದು ಪಾಕಿಸ್ತಾನಿ ಅಧಿಕಾರಿ ಹೇಳಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಯಲ್ಲಿ ಇನ್ನೂ ಅಸ್ಪಷ್ಟತೆ ಇದೆ. ಯಾವುದನ್ನೂ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ.

ಅಮೆರಿಕ ದಿಗ್ಬಂಧನವನ್ನು ಕೊನೆಗೊಳಿಸಿದ ಕೂಡಲೇ ಮಾತುಕತೆ ಮುಕ್ತವಾಗಿ ನಡೆಯುವ ಸಾಧ್ಯತೆ. ಅಲ್ಲದೆ ಎರಡೂ ಕಡೆಯಿಂದ ದಿಗ್ಬಂಧನ ಇರುವವರೆಗೆ, ಮಾತುಕತೆಗಳು ಕಷ್ಟಕರವಾಗಿರುತ್ತವೆ. ಅದಕ್ಕಾಗಿಯೇ ಮುಂದಿನ ಮಾತುಕತೆಗಳಿಗಾಗಿ ಕನಿಷ್ಠ 30 ರಿಂದ 60 ದಿನಗಳವರೆಗೆ ದಿಗ್ಬಂಧನವನ್ನು ಕೊನೆಗೊಳಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+