ಉಪಗ್ರಹ ಉಡಾವಣೆ: ದೊಡ್ಡೋರೆಲ್ಲ ಇಸ್ರೋ ಬಳಿ ಬರೋದು ಯಾಕೆ?

ಚೆನ್ನೈ, ಡಿಸೆಂಬರ್, 14: ಬ್ರಿಟನ್ ಉಪಗ್ರಹಗಳನ್ನು ಉಡವಣೆ ಮಾಡಿ ಸೈ ಎನಿಸಿಕೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ [ಇಸ್ರೋ] ಇದೀಗ ಹೊಸದೊಂದು ಸಾಹಸ ಮಾಡಲಿದೆ. ಡಿಸೆಂಬರ್ 16 ರಂದು ಸಿಂಗಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

ಮಂಗಳಯಾನದ ಯಶಸ್ಸಿನ ನಂತರ ಇಸ್ರೋ ಸಹಾಯ ಪಡೆಯಲು ಅಭಿವೃದ್ಧಿ ಹೊಂದಿದ ಕಡಿಮೆ ಬೆಲೆಗೆ ಉಪಗ್ರಹ ಉಡಾವಣೆ ಮಾಡಬಲ್ಲ ಇಸ್ರೋದ ಸೇವೆ ಪಡೆಯಲು ವಿಶ್ವದ ಅನೇಕ ರಾಷ್ಟ್ರಗಳು ಮುಗಿ ಬೀಳುತ್ತಿವೆ. ಇದೀಗ, ಸಿಂಗಾಪುರ ದೇಶ ತನ್ನ ಉಪಗ್ರಹಗಳ ಉಡಾವಣೆಗೆ ಇಸ್ರೋದ ನೆರವು ಪಡೆಯುತ್ತಿದೆ.[ಮಂಗಳನ ಅಂಗಳದ ಮೇಲೆ ರಷ್ಯಾ ಮಂಗಗಳ ಸಂಸಾರ]

isro

ಸಿಂಗಾಪುರದ 6 ಉಪಗ್ರಹಗಳನ್ನು ಪಿಎಸ್ಎಲ್'ವಿ ರಾಕೆಟ್ ನೆರವಿನಲ್ಲಿ ಉಡಾವಣೆ ಮಾಡಲಾಗುವುದು. 625 ಕಿಲೋ ತೂಕದ ಸಿಂಗಾಪುರದ 6 ಉಪಗ್ರಹಗಳನ್ನು ಶ್ರೀಹರಿಕೋಟಾದಲ್ಲಿ ಡಿಸೆಂಬರ್ 16 ರಂದಿ ಸಂಜೆ 6 ಗಂಟೆಗೆ ಭಾರತದ ರಾಕೆಟ್ ಆಗಸದತ್ತ ಹೊತ್ತೊಯ್ಯಲಿದೆ.[ಮಂಗಳನ ಮಣ್ಣಲ್ಲಿ ಗೌತಮ ಬುದ್ಧ!]

ಉಪಗ್ರಹ ಉಡಾವಣೆಗೆ ಭಾರತದ ದುಂಬಾಲು ಯಾಕೆ?
ಬ್ರಿಟನ್, ಸಿಂಗಪುರದಂಥ ರಾಷ್ಟ್ರಗಳೇ ಉಪಗ್ರಹ ಉಡಾವಣೆಗೆ ಭಾರತದ ದುಂಬಾಲು ಬೀಳುತ್ತಿರುವುದು ಯಾಕೆ ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು. ಇದಕ್ಕೆಲ್ಲ ಒಂದೇ ಉತ್ತರ ಕಡಿಮೆ ವೆಚ್ಚ.

ಮಂಗಳನೆಡೆಗೆ ಪ್ರಯಾಣ ಬೆಳೆಸಿರುವ ಭಾರತೀಯ 'ಮಂಗಳ ಯಾನ' ಅತಿ ಕಡಿಮೆ ವೆಚ್ಚದ ಬಾಹ್ಯಾಕಾಶ ನೌಕೆ ಎಂದು ಹೆಸರು ಪಡೆದುಕೊಂಡಿತ್ತು. ಪ್ರತಿಯೊಬ್ಬ ಭಾರತೀಯ ನಾಗರಿಕರ ತಲೆಗೆ 4 ರೂಪಾಯಿ ವೆಚ್ಚವಾಗಿತ್ತು. ವಿದೇಶಗಳಿಗೆ ಭಾರತದ ಇಸ್ರೋ ಕಡಿಮೆ ವೆಚ್ಚದ ಸೇವಾ ಕೇಂದ್ರವಾಗಿ ಮಾರ್ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+