ಕೊರೊನಾ ವೈರಸ್ ಚೀನಾದ ಕೆಟ್ಟ ಉಡುಗೊರೆ; ಟ್ರಂಪ್

ನ್ಯೂಯಾರ್ಕ್, ಮೇ 28 : ಕೊರೊನಾ ವೈರಸ್ ವಿಚಾರದಲ್ಲಿ ಅಮೆರಿಕ ಮತ್ತೆ ಚೀನಾದ ಮೇಲೆ ಗೂಬೆ ಕೂರಿಸಿದೆ. "ಕೊರೊನಾ ವೈರಸ್ ಚೀನಾದ ಅತಿ ಕೆಟ್ಟ ಉಡುಗೊರೆ" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಇದುವರೆಗೂ 16 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನ ನಿಯಂತ್ರಣಕ್ಕೆ ದೇಶ ಹರಸಾಹಸ ಪಡುತ್ತಿದೆ.

ಇಂತಹ ಸಂದರ್ಭದಲ್ಲಿಯೇ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕೊರೊನಾ ಸೋಂಕಿನ ವಿಚಾರದಲ್ಲಿ ನಾವು ಅತಿ ಕೆಟ್ಟ ಹಂತಕ್ಕೆ ತಲುಪಿದ್ದೇವೆ. ಸಾವಿನ ಸಂಖ್ಯೆ 1 ಲಕ್ಷ ದಾಟಿದೆ" ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Trump

ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪ ಸೂಚಿಸಿರುವ ಡೊನಾಲ್ಡ್ ಟ್ರಂಪ್, "ದೇವರು ನಿಮ್ಮ ಜೊತೆ ಇದ್ದಾನೆ" ಎಂದು ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಮೊದಲಿನಿಂದಲೂ ಚೀನಾದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಟ್ರಂಪ್ ಸಹ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+