ಕೊರೊನಾಪೀಡಿತ ಅಮೆರಿಕನ್ನರನ್ನು ಮೆಕ್ಸಿಕೋ ಒಳಗೆ ಬಿಡದಂತೆ ಪ್ರತಿಭಟನೆ

ಮೆಕ್ಸಿಕೋ ದೇಶದಿಂದ ಯು.ಎಸ್.ನೊಳಗೆ ಯಾರೂ ನುಸುಳಬಾರದು ಎಂಬ ಕಾರಣಕ್ಕೆ ಗಡಿಯುದ್ದಕ್ಕೂ ಗೋಡೆ ಕಟ್ಟುವ ಮಾತನ್ನು ನೀಡಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್. ಇದು ಅವರು ಚುನಾವಣೆಗೆ ಸ್ಪರ್ಧಿಸಿದ್ದ ಅವಧಿಯಲ್ಲಿ. ಆದರೆ ಈಗ ಪರಿಸ್ಥಿತಿ ಹೇಗಿದೆ ಅಂದರೆ, ಕೊರೊನಾದಿಂದ ಕಂಗೆಟ್ಟಿರುವ ಯು.ಎಸ್. ಗಡಿ ದಾಟಿ ನರಪಿಳ್ಳೆಯೂ ಮೆಕ್ಸಿಕೋ ಪ್ರವೇಶಿಸಬಾರದು ಎಂದು ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆ ನಡೆಸುತ್ತಿರುವ ಮೆಕ್ಸಿಕನ್ನರು ಮಾಸ್ಕ್ ಹಾಕಿಕೊಂಡು, ಅಮೆರಿಕನ್ನರೇ "ಮನೆಯೊಳಗೇ ಇರಿ" ಎಂಬ ಘೋಷಣೆ ಕೂಗುತ್ತಿದ್ದಾರೆ. ಯು.ಎಸ್. ನ ರಾಜ್ಯವಾದ ಅರಿಜೋನಾದ ದಕ್ಷಿಣಕ್ಕೆ ಇರುವ ಸೊನೊರಾದ ನಿವಾಸಿಗಳು ಮೆಕ್ಸಿಕನ್ನರಿಗೆ ಮಾತು ನೀಡಿದ್ದಾರೆ. ಮೆಕ್ಸಿಕೋಗೆ ಸಾಗುವ ಹಾದಿಯನ್ನು ತಡೆ ಮಾಡುವುದಾಗಿ ತಿಳಿಸಿದ್ದಾರೆ.

ಬುಧವಾರದಂದು ಕೆಲ ಸಮಯ ಚೆಕ್ ಪಾಯಿಂಟ್ ಮುಚ್ಚಲಾಗಿತ್ತು. ನಿಮಗೆ ಗೊತ್ತಿರಲಿ, ಮೆಕ್ಸಿಕೋದಲ್ಲಿ 500ಕ್ಕೂ ಸ್ವಲ್ಪ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಿವೆ. ಆದರೆ ಯು.ಎಸ್.ನಲ್ಲಿ 65 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳಿವೆ. ಮೆಕ್ಸಿಕೋ- ಯು.ಎಸ್. ಮಧ್ಯದ ಗಡಿಯನ್ನು ಅಗತ್ಯ ವ್ಯವಹಾರಗಳಿಗೆ ಹೊರತುಪಡಿಸಿ, ಉಳಿದವಕ್ಕೆ ಮುಚ್ಚಲು ನಿರ್ಧರಿಸಲಾಗಿದೆ.

ಕೊರೊನಾ ಪರೀಕ್ಷೆ ಮಾಡುತ್ತಿಲ್ಲ

ಕೊರೊನಾ ಪರೀಕ್ಷೆ ಮಾಡುತ್ತಿಲ್ಲ

ಆದರೆ, ಅಧಿಕಾರಿಗಳು ಈ ನಿಯಮವನ್ನು ಸರಿಯಾಗಿ ಅನುಸರಿಸುತ್ತಿಲ್ಲ ಅಥವಾ ಪರೀಕ್ಷೆ ಮಾಡುತ್ತಿಲ್ಲ ಎಂದು ಮೆಕ್ಸಿಕೋದ ಪ್ರತಿಭಟನಾನಿರತರು ಆರೋಪಿಸುತ್ತಿದ್ದಾರೆ. ಸೊನೊರಾದಲ್ಲಿ ಇರುವ ವೈದ್ಯಕೀಯ ತಂಡವು ಗಡಿಯಲ್ಲಿ ತಡೆ ನಿರ್ಮಿಸಿದೆ. ಯಾರು ಯು.ಎಸ್.ನಿಂದ ಮೆಕ್ಸಿಕೋಗೆ ಗಡಿ ದಾಟುತ್ತಾರೋ ಅವರ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ. ವೈದ್ಯಕೀಯ ತಂಡದ ಸದಸ್ಯರೊಬ್ಬರು ಮಾತನಾಡಿ, ಕೊರೊನಾದ ಪರೀಕ್ಷೆಯನ್ನು ಸರ್ಕಾರ ಮಾಡುತ್ತಿಲ್ಲ. ಆದ್ದರಿಂದ ನಾವಿಲ್ಲಿ ನೊಗಲೆಸ್ ನಲ್ಲಿ ಇದ್ದೀವಿ. ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮಾನುಯೆಲ್ ಲೊಪೆಜ್ ಒಬ್ರೆಡರ್ ಅವರಿಗೆ ನಮ್ಮ ಕರೆಯನ್ನು ತಲುಪಿಸಲು ಈ ವೈದ್ಯಕೀಯ ಪರೀಕ್ಷೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಮೆಕ್ಸಿಕೋ ಹಾಗೂ ಅಮೆರಿಕ ಅಧ್ಯಕ್ಷರ ವಿರುದ್ಧ ಟೀಕೆ

ಮೆಕ್ಸಿಕೋ ಹಾಗೂ ಅಮೆರಿಕ ಅಧ್ಯಕ್ಷರ ವಿರುದ್ಧ ಟೀಕೆ

ಕೊರೊನಾಗೆ ಮೆಕ್ಸಿಕೋ ಅಧ್ಯಕ್ಷರು ಪ್ರತಿಕ್ರಿಯಿಸುತ್ತಿರುವ ರೀತಿಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದೇ ರೀತಿ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧವೂ ಟೀಕೆ ವ್ಯಕ್ತವಾಗುತ್ತಿದೆ. ಬುಧವಾರ ನಡೆದಿರುವ ಪ್ರತಿಭಟನೆಯು ಮೆಕ್ಸಿಕೋ ಅಧ್ಯಕ್ಷರಿಗೆ ಮೊದಲ ಎಚ್ಚರಿಕೆ ನೀಡಿದ್ದೇವೆ ಎಂದಿದ್ದಾರೆ ಪ್ರತಿಭಟನಾನಿರತರು.

ಗಡಿ ದಾಟುವುದಕ್ಕೆ ನಿರ್ಬಂಧ ವಿಧಿಸಿ

ಗಡಿ ದಾಟುವುದಕ್ಕೆ ನಿರ್ಬಂಧ ವಿಧಿಸಿ

ಯುಎಸ್ ಹಾಗೂ ಮೆಕ್ಸಿಕೋದ ಎಲ್ಲ ನಾಗರಿಕರಿಗೆ ಗಡಿ ದಾಟುವುದಕ್ಕೆ ನಿರ್ಬಂಧ ವಿಧಿಸಬೇಕು. ಪ್ರವಾಸ, ವೈದ್ಯಕೀಯ ಕಾರಣಗಳು, ಶಾಲೆ ಅಥವಾ ಕೆಲಸ ಇನ್ಯಾವುದೇ ಕಾರಣಕ್ಕೆ ಪ್ರತಿ ದಿನ ಯು.ಎಸ್. ಗೆ ತೆರಳುವವರಿಗೆ ಈ ನಿರ್ಬಂಧ ವಿಧಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ. ಅಮೆರಿಕದಿಂದ ಗಡೀಪಾರು ಮಾಡಿದ ಮೆಕ್ಸಿಕನ್ನರ ವೈದ್ಯಕೀಯ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಯು.ಎಸ್.ನಲ್ಲಿ ಸಾಮಾಜಿಕ, ಆರ್ಥಿಕ ಸಮಸ್ಯೆ

ಯು.ಎಸ್.ನಲ್ಲಿ ಸಾಮಾಜಿಕ, ಆರ್ಥಿಕ ಸಮಸ್ಯೆ

ಬುಧವಾರ ಮಧ್ಯಾಹ್ನ ಡಿ ಕಾನ್ಸಿನಿ ಚೆಕ್ ಪಾಯಿಂಟ್ ಮುಚ್ಚಿದ್ದ ನಂತರ ಆ ಚೆಕ್ ಪಾಯಿಂಟ್ ನಲ್ಲಿ ತಡೆಯಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಮೆಕ್ಸಿಕೋದಿಂದ ಯು.ಎಸ್.ಗೆ ಬರುವ ಜನರ ಸಂಖ್ಯೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡಿತಗೊಳಿಸಿದ್ದಾರೆ. ಯು.ಎಸ್. ನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ ತರಲು ಗಡಿ ದಾಟಿ ಬರುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಕೊರೊನಾ ಕಾರಣಕ್ಕೆ ಗಡಿ ಮುಚ್ಚಿದ್ದಾಗಿ ಟ್ರಂಪ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+