ಖಾಲಿ ಇರುವ ಅಪಾರ್ಟ್‌ಮೆಂಟ್‌ನ ಶೌಚಾಲಯದಲ್ಲಿ ಕೊರೊನಾ ವೈರಸ್

ಬೀಜಿಂಗ್, ಆಗಸ್ಟ್ 27 : ಹಲವು ತಿಂಗಳುಗಳಿಂದ ಖಾಲಿ ಇರುವ ಅಪಾರ್ಟ್‌ಮೆಂಟ್‌ನ ಶೌಚಾಲಯದಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ.

Recommended Video

      ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ Congress‌? | Oneindia Kannada

      ಚೀನಾ, ಗ್ವಾಂಗ್‌ಜೌನಲ್ಲಿ ರೋಗಕಾರಕಗಳು ಚರಂಡಿ ಪೈಪ್ ಮೂಲಕ ಶೌಚಾಲಯಕ್ಕೆ ಬರುತ್ತದೆ.ಕಳೆದ 17 ವರ್ಷಗಳ ಹಿಂದೆ ಹಾಂಗ್‌ಕಾಂಗ್‌ನಲ್ಲಿ ಸಾರ್ಸ್ ಬಂದಾಗಲೂ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

      ಸಾರ್ಸ್ ಕೋವ್ 2 ಫೆಬ್ರವರಿ ತಿಂಗಳಿನಲ್ಲಿ ಅಡುಗೆ ಮನೆಯ ಸಿಂಕ್‌ನಲ್ಲಿ ಪತ್ತೆಯಾಗಿತ್ತು. ಬಳಿಕ ಶಾವರ್ ಹ್ಯಾಂಡಲ್‌ನಲ್ಲಿ, ಖಾಲಿ ಇರುವ ಅಪಾರ್ಟ್‌ಮೆಂಟ್‌ಗಳಲ್ಲಿ ಪತ್ತೆಯಾಗಿತ್ತು. ಒಂದು ತಿಂಗಳಿನಲ್ಲಿ ಐದು ಮಂದಿಗೆ ಶೌಚಾಲಯದಿಂದಲೇ ಕೊರೊನಾ ಸೋಂಕು ಹರಿಡಿತ್ತು.

      ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾರ್ಸ್ ಕೋವ್ 2 ಮುಖ್ಯವಾಗಿ ಮೂಗು ಅಥವಾ ಬಾಯಿಂದ ಹೊರಬರುವ ಹನಿಗಳ ಮೂಲಕ ಹರಡುತ್ತದೆ. ಸಾಂಕ್ರಾಮಿಕ ರೋಗದ ಮೊದಲ ವಾರದಿಂದಲೇ ವಿಜ್ಞಾನಿಗಳು ಕೊವಿಡ್ 19 ರೋಗಿಗಳ ಮಲದಲ್ಲಿನ ಸಾಂಕ್ರಾಮಿಕ ಸಾರ್ಸ್ ಕೋವ್ 2 ವೈರಸ್ ಸಹ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

       ವಿಜ್ಞಾನಿಗಳು ಕಂಡುಕೊಂಡಿದ್ದೇನು?

      ವಿಜ್ಞಾನಿಗಳು ಕಂಡುಕೊಂಡಿದ್ದೇನು?

      ಶೌಚಾಲಯದ ಫ್ಲಶ್‌ನಿಂದ ತ್ಯಾಜ್ಯ ಕೊಳವೆಗಳ ಮೂಲಕ ವೈರಸ್ ಹರಡಬಹುದೇ ಎಂದು ನೋಡಲು ವಿಜ್ಞಾನಿಗಳು ಆನ್‌ ಸೈಟ್ ಟ್ರೇಸರ್ ಸಿಮ್ಯುಲೇಷನ್ ಪ್ರಯೋಗ ನಡೆಸಿದರು. ಸ್ನಾನಗೃಹಗಳಲ್ಲಿ ಏರೋಸಾಲ್ ಎಂದು ಕರೆಯಲ್ಪಡುವ ಕಣಗಳ ಬಗ್ಗೆ ಕಂಡುಕೊಂಡರು. ಫೆಬ್ರವರಿಯಿಂದ ಪ್ರತಿಯೊಂದು ಮಹಡಿಗಳಲ್ಲಿ ಎರಡು ಪ್ರಕರಣಗಳು ದೃಢಪಟ್ಟವು. ಸಾರ್ಸ್ ಕೋವ್ 2 ತುಂಬಿದ ಕಣಗಳು ಮಲದಿಂದ ಕೊಳಾಯಿಗಳ ಮೂಲಕ ಎಲ್ಲರ ಮನೆಗಳಿಗೆ ಹರಡಿತ್ತು.

       329 ಮಂದಿಗೆ ಚರಂಡಿ ಪೈಪ್‌ಲೈನ್ ಮೂಲಕ ಸೋಂಕು

      329 ಮಂದಿಗೆ ಚರಂಡಿ ಪೈಪ್‌ಲೈನ್ ಮೂಲಕ ಸೋಂಕು

      ಚರಂಡಿಯ ಪೈಪ್‌ಲೈನ್ ಮೂಲಕ 329 ಮಂದಿಗೆ ಸಾರ್ಸ್ ರೋಗ ಬಂದಿತ್ತು. 42 ಮಂದಿ ಸಾವನ್ನಪ್ಪಿದ್ದರು. ಇದೇ ರೀತಿ ಕೊರೊನಾ ವೈರಸ್ ಕೂಡ ಹರಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

       ವಿಮಾನಗಳಲ್ಲಿನ ಶೌಚಾಲಯದಿಂದಲೂ ಕೊರೊನಾ

      ವಿಮಾನಗಳಲ್ಲಿನ ಶೌಚಾಲಯದಿಂದಲೂ ಕೊರೊನಾ

      287 ವರ್ಷದ ಮಹಿಳೆಯೊಬ್ಬರಿಗೆ ವಿಮಾನದಲ್ಲಿ ಬಂದು ಒಂದು ವಾರಕ್ಕೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆ ಸಂದರ್ಭದಲ್ಲಿ ಆಕೆ ಎನ್‌95 ಮಾಸ್ಕ್‌ಧರಿಸಿದ್ದರು. ಆದರೆ ಶೌಚಾಲಯಕ್ಕೆ ಹೋಗುವ ಸಂದರ್ಭದಲ್ಲಿ ಮಾತ್ರ ಮಾಸ್ಕ್ ಇರಲಿಲ್ಲ. ಶೌಚಾಲಯವನ್ನು ಬೇರೆ ಪ್ರಯಾಣಿಕರು ಕೂಡ ಬಳಸಿದ್ದರು. ಅವರು ಕುಳಿತಿದ್ದ ಮೂರು ಸೀಟು ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇತ್ತು, ಆದರೆ ಯಾವುದೇ ಲಕ್ಷಣಗಳಿರಲಿಲ್ಲ.

       ಮಲದಿಂದಲೂ ವೈರಸ್ ಹರಡುವ ಸಾಧ್ಯತೆ

      ಮಲದಿಂದಲೂ ವೈರಸ್ ಹರಡುವ ಸಾಧ್ಯತೆ

      ಸಾರ್ಸ್ ರೋಗಿಯ ಸ್ನಾನಗೃಹದಿಂದ ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಮಲ ಮತ್ತು ಮೂತ್ರದಲ್ಲಿ ಅತಿ ಹೆಚ್ಚು ಸಾಂದ್ರತೆ ಯ ವೈರಸ್ ಅನ್ನು ಹೊರಹಾಕುತ್ತದೆ. ಶೌಚಾಲಯಗಳು ದೈನಂದಿನ ಅವಶ್ಯಕತೆಯಾಗಿದ್ದರೂ, ಆಸ್ಪತ್ರೆಗಳಲ್ಲಿ ಶುಚಿತ್ವವನ್ನು ಕಾಪಾಡದಿದ್ದರೆ ಫ್ಲಶಿಂಗ್ ಸಮಯದಲ್ಲಿ ಹರಡುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+