ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!

ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದೆ. 27 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, 191,000 ಕ್ಕೂ ಅಧಿಕ ಮಂದಿ ಡೆಡ್ಲಿ ಕೋವಿಡ್-19 ಗೆ ಬಲಿಯಾಗಿದ್ದಾರೆ.

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಬಹುತೇಕ ದೇಶಗಳು ಲಾಕ್ ಡೌನ್ ಆಗಿದ್ದು, ಕೋಟ್ಯಾಂತರ ಜನ ಆತಂಕದಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಕೊರೊನಾ ವೈರಸ್ ಅನ್ನು ಬಗ್ಗುಬಡಿಯಲು ಔಷಧಿ ಯಾವಾಗ ಬರುತ್ತೋ, ಲಸಿಕೆ ಯಾವಾಗ ಸಿಗುತ್ತೋ ಅಂತ ಜನರು ಕಾಯುತ್ತಿರುವಾಗಲೇ ಒಂದು ಬೇಸರದ ಸುದ್ದಿ ಹೊರಗೆ ಬಿದ್ದಿದೆ.

ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ Remdesivir ಡ್ರಗ್ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಭಾವಿಸಲಾಗಿತ್ತು. ಹೀಗಾಗಿ, Remdesivir ಮೇಲೆ ಹಲವು ವಿಜ್ಞಾನಿಗಳು ಭಾರಿ ಭರವಸೆ ಇಟ್ಟುಕೊಂಡಿದ್ದರು. ಆದ್ರೀಗ, ಅದೇ Remdesivir ಬಗ್ಗೆ ನಿರಾಸೆಯಾಗುವ ಸುದ್ದಿ ಬಹಿರಂಗವಾಗಿದೆ.

ಮೊದಲ ಹಂತದ ಕ್ಲಿನಿಯರ್ ಪ್ರಯೋಗದಲ್ಲಿ Remdesivir ಫೇಲ್ ಆಗಿದೆ ಎಂದು ತಿಳಿದುಬಂದಿದೆ.

Remdesivir ಯಶಸ್ವಿ ಆಗಿಲ್ಲ.!

Remdesivir ಯಶಸ್ವಿ ಆಗಿಲ್ಲ.!

ಚೀನಿಯರು ನಡೆಸಿರುವ ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಲ್ಲಿ Remdesivir ವಿಫಲಗೊಂಡಿದೆ. ಹಾಗಂತ ಸಾರುವ ಕರಡು ಪ್ರತಿಯೊಂದು ಅಚಾನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ತಾಣದಲ್ಲಿ ಪ್ರಕಟಗೊಂಡಿತ್ತು. (Remdesivir ಕುರಿತು ನಡೆದ ಪ್ರಯೋಗಗಳ ಕುರಿತಾದ ದಾಖಲೆಗಳನ್ನು ಸದ್ಯ ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ತಾಣದಿಂದ ತೆಗೆದು ಹಾಕಲಾಗಿದೆ)

ರೋಗಿಗಳ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ

ರೋಗಿಗಳ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ

ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ತಾಣದಲ್ಲಿ ಪ್ರಕಟಗೊಂಡಿದ್ದ ದಾಖಲೆಗಳ ಪ್ರಕಾರ, ಕೋವಿಡ್-19 ನಿಂದ ಬಳಲುತ್ತಿದ್ದ ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ Remdesivir ನಿಂದ ಸುಧಾರಣೆ ಕಂಡು ಬಂದಿಲ್ಲ. ಹಾಗೇ, ರಕ್ತದಲ್ಲಿ ವೈರಸ್ ಪ್ರಮಾಣವನ್ನೂ Remdesivir ಕಡಿಮೆ ಮಾಡಿಲ್ಲ. ಹೀಗಾಗಿ, ಕೋವಿಡ್-19 ಗೆ Remdesivir ಡ್ರಗ್ ನಿಂದ ಯಾವುದೇ ಪ್ರಯೋಜನವಿಲ್ಲ.

ಪ್ರಯೋಗದಲ್ಲಿ ನಡೆದಿದ್ದೇನು.?

ಪ್ರಯೋಗದಲ್ಲಿ ನಡೆದಿದ್ದೇನು.?

ಕ್ಲಿನಿಕಲ್ ಪ್ರಯೋಗದಲ್ಲಿ 237 ರೋಗಿಗಳ ಪೈಕಿ 158 ರೋಗಿಗಳಿಗೆ Remdesivir ಡ್ರಗ್ ನೀಡಲಾಗಿತ್ತು. ಉಳಿದ 79 ಮಂದಿಗೆ Placebo ಕೊಡಲಾಗಿತ್ತು. ಒಂದು ತಿಂಗಳಲ್ಲಿ Remdesivir ಡ್ರಗ್ ಪಡೆದವರಲ್ಲಿ 13.9% ಮಂದಿ ಮೃತಪಟ್ಟಿದ್ದರು. ಇನ್ನು Placebo ಪಡೆದವರ ಪೈಕಿ 12.8% ರಷ್ಟು ರೋಗಿಗಳು ಸಾವನ್ನಪ್ಪಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ತಾಣದಲ್ಲಿ ಅಚಾನಕ್ಕಾಗಿ ಪ್ರಕಟವಾದ Remdesivir ಕುರಿತಾದ ಪ್ರಯೋಗದ ಕರಡು ಪ್ರತಿಯಲ್ಲಿ ಉಲ್ಲೇಖಗೊಂಡಿತ್ತು.

ಕಂಪನಿ ಹೇಳುವುದೇ ಬೇರೆ

ಕಂಪನಿ ಹೇಳುವುದೇ ಬೇರೆ

ಕ್ಲಿನಿಕಲ್ ಮತ್ತು ವೈರಲಾಜಿಕಲ್ ಪ್ರಯೋಜನಗಳನ್ನು Remdesivir ಹೊಂದಿಲ್ಲ ಎಂಬುದು ಪ್ರಯೋಗದ ಮೂಲಕ ತಿಳಿದುಬಂದಿದೆ. ಆದ್ರೆ, Remdesivir ಔಷಧದ ಕಂಪನಿ ಜೀಲೆಡ್ ಸೈನ್ಸಸ್ ಹೇಳುವುದೇ ಬೇರೆ. ''WHO ಡಿಲೀಟ್ ಮಾಡಿರುವ ಪೋಸ್ಟ್ ನಲ್ಲಿ ಅಧ್ಯಯನದ ಸೂಕ್ತವಲ್ಲದ ಗುಣಲಕ್ಷಣಗಳನ್ನು ಹಾಕಲಾಗಿದೆ. ಪ್ರಯೋಗದ ಫಲಿತಾಂಶ ಇನ್ನೂ ಸ್ಪಷ್ಟವಾಗಿ ಕಂಡುಬಂದಿಲ್ಲ. ಆರಂಭದಲ್ಲೇ ಚಿಕಿತ್ಸೆ ಪಡೆದ ರೋಗಿಗಳು Remdesivir ನಿಂದ ಸಂಭಾವ್ಯ ಪ್ರಯೋಜನಗಳನ್ನು ಹೊಂದಿದ್ದಾರೆ'' ಎಂದು ಜೀಲೆಡ್ ಸೈನ್ಸಸ್ ಕಂಪನಿ ತಿಳಿಸಿದೆ.

ಬೇರೆ ಬೇರೆ ಪ್ರಯೋಗ ನಡೆಯುತ್ತಿದೆ

ಬೇರೆ ಬೇರೆ ಪ್ರಯೋಗ ನಡೆಯುತ್ತಿದೆ

ಕ್ಲಿನಿಕಲ್ ಪ್ರಯೋಗದಲ್ಲಿ ಒಂದು ಡ್ರಗ್ ಫೇಲ್ ಆದರೆ ಏನಂತೆ... ಜಗತ್ತಿನ ನಾನಾ ಮೂಲೆಗಳಲ್ಲಿ ಕೊರೊನಾ ವೈರಸ್ ಗಾಗಿ ಔ‍ಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ಹಲವು ವಿಜ್ಞಾನಿಗಳು ಬೇರೆ ಬೇರೆ ಪ್ರಯೋಗ ನಡೆಸುತ್ತಿದ್ದಾರೆ. ಒಂದಲ್ಲಾ ಒಂದು ಪ್ರಯೋಗ ಪಾಸ್ ಆದರೆ.. ಮನುಷ್ಯ ಕುಲಕ್ಕೆ ನೆಮ್ಮದಿ ಸಿಕ್ಕ ಹಾಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+