ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?

|
Google Oneindia Kannada News

ಬೀಜಿಂಗ್, ಆಗಸ್ಟ್ 2: ಜಗತ್ತಿಗೆ ಮೊದಲು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಪರಿಚಯಿಸಿದ ಚೀನಾದಲ್ಲಿ ಇದೀಗ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಡೆಲ್ಟಾ ರೂಪಾಂತರ ವೈರಸ್ ಆ ದೇಶದಲ್ಲಿ ಮಿತಿಮೀರಿ ಹರಡುತ್ತಿರುವುದು ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರ ವೈರಸ್ ಸೋಂಕು ಇದೀಗ ಚೀನಾದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ.

ಬೀಜಿಂಗ್ ಸೇರಿದಂತೆ 18 ಪ್ರದೇಶಗಳಲ್ಲಿ ಕೊರೊನಾವೈರಸ್ ಡೆಲ್ಟಾ ರೂಪಾಂತರ ತಳಿಯ ಹೊಸ ಪ್ರಕರಣಗಳು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿವೆ. ಕಳೆದ 10 ದಿನಗಳಲ್ಲಿ 300ಕ್ಕೂ ಹೆಚ್ಚು ಡೆಲ್ಟಾ ರೂಪಾಂತರ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಹೊಸ ರೂಪಾಂತರ ವೈರಸ್ ಹರಡುವಿಕೆ ನಿಯಂತ್ರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಚೀನಾದಲ್ಲಿ ಡೆಲ್ಟಾ ರೂಪಾಂತರಿ ಸ್ಫೋಟ, ಕಠಿಣ ನಿಯಮಗಳು ಜಾರಿಚೀನಾದಲ್ಲಿ ಡೆಲ್ಟಾ ರೂಪಾಂತರಿ ಸ್ಫೋಟ, ಕಠಿಣ ನಿಯಮಗಳು ಜಾರಿ

ಚೀನಾದ ಬೀಜಿಂಗ್, ಜಿಯಾಂಗ್ಸು, ಸಿಚುವಾನ್ ಸೇರಿದಂತೆ 27 ನಗರಗಳ 18 ಪ್ರದೇಶಗಳಲ್ಲಿ ಭಾನುವಾರ 300ಕ್ಕೂ ಹೆಚ್ಚು ಡೆಲ್ಟಾ ರೂಪಾಂತರ ಕೊರೊನಾವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಮಧ್ಯಮ ಮತ್ತು ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ಪ್ರದೇಶಗಳ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಈ ಪೈಕಿ 91 ಪ್ರದೇಶಗಳು ಮಧ್ಯಮ ಪ್ರಮಾಣದ ಅಪಾಯದಲ್ಲಿದ್ದು, ನಾಲ್ಕು ಪ್ರದೇಶಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ. ದೆಹಾಂಗ್, ಯುನ್ನಾನ್, ಜಿಯಾಂಗ್ಸುದ ನಂಜಿಂಗ್ ಮತ್ತು ಹೆನಾನ್ ಪ್ರದೇಶವೂ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Coronavirus Alert: Delta Variant Spread to Chinas 18 Provinces With Fresh Cases in Beijing

ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಭಾನುವಾರ ಎರಡು ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಲಕ್ಷಣಗಳು ಇಲ್ಲದ ಒಬ್ಬರಿಗೆ ಸೋಂಕು ತಗುಲಿರುವುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಈ ಮೂರು ಸೋಂಕಿತ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರು ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರವಾಸಿ ತಾಣದಿಂದ ವಾಪಸ್ಸಾಗಿದ್ದರು ಎಂದು ತಿಳಿದು ಬಂದಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಅಬ್ಬರಿಸಿದ ಡೆಲ್ಟಾ ವೈರಸ್ ಚೀನಾದಲ್ಲಿ ಹಾವಳಿ ಶುರು ಮಾಡಿದೆ. ಮೊದಲ ಬಾರಿ ಕೊವಿಡ್-19 ಸೋಂಕಿನಿಂದ ರಕ್ಷಿಸಿಕೊಂಡ ಚೀನಾ, ಇದೀಗ ಮತ್ತೊಮ್ಮೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಚೀನಾದಲ್ಲಿ ಕೊವಿಡ್-19 ಪರಿಸ್ಥಿತಿ ಮತ್ತು ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಶಿಸ್ತು ಕ್ರಮಗಳನ್ನು ಒಂದೊಂದಾಗಿ ಓದಿ.

ಚೀನಾದಲ್ಲಿ ಕೊರೊನಾವೈರಸ್ ಮತ್ತು ಕಟ್ಟುನಿಟ್ಟಿನ ಕ್ರಮಗಳು:

* ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾದ ಪ್ರದೇಶದಿಂದ ಯಾವುದೇ ಪ್ರಯಾಣಿಕರು, ವಾಹನಗಳು, ವಿಮಾನ ಮತ್ತು ರೈಲುಗಳು ರಾಜಧಾನಿ ಬೀಜಿಂಗ್ ಅನ್ನು ಪ್ರವೇಶಿಸುವಂತಿಲ್ಲ ಎಂದು ಭಾನುವಾರ ಮುನಿಸಿಪಲ್ ಗೌವರ್ನಮೆಂಟ್ ತಿಳಿಸಿದೆ.

* ಚೀನಾದ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರವು ನಂಜಿಂಗ್ ಪ್ರದೇಶದಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿತ ಪ್ರಕರಣದ ಮಾದರಿಯಲ್ಲೇ ಸೋಂಕು ಹರಡುವಿಕೆಯ ಸರಪಳಿ ಬೆಳೆಯುತ್ತಿದೆ ಎಂಬುದನ್ನು ಹೋಲಿಕೆ ಮಾಡಿ ನೋಡಿದೆ.

* ಕೊರೊನಾವೈರಸ್ ಸೋಂಕಿನ ಅಲೆಯು ಈ ಬಾರಿ ನಂಜಿಂಗ್ಸ್ ಲುಕೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯಬ್ಬರಿಗೆ ಮೊದಲು ಸೋಂಕು ಪತ್ತೆಯಾಗಿತ್ತು. ನಂತರದಲ್ಲಿ ಕೆಲವು ಸ್ಥಳೀಯರಿಗೆ ಮತ್ತು ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರದೇಶಕ್ಕೆ ಪ್ರಯಾಣಿಸಿದ ಹಲವರಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ.

* ಶನಿವಾರವೊಂದೇ ದಿನ ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರವಾಸಿ ತಾಣದಲ್ಲಿ 11,000ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಸೇರಿದ್ದರು. ಕೊವಿಡ್-19 ಸೋಂಕು ಪತ್ತೆಯಾಗಿರುವ ಹಿನ್ನೆಲೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ ಪ್ರತಿಯೊಬ್ಬ ಪ್ರವಾಸಿಗರು ಆ ಸ್ಥಳವನ್ನು ತೊರೆಯುವುದಕ್ಕೂ ಮೊದಲು ಕೊವಿಡ್-19 ಸೋಂಕು ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.

* ಝಾಂಗ್ ಝಿಯಾಜಿ ಪ್ರದೇಶದಲ್ಲಿ ಇತ್ತೀಚಿಗೆ ಸ್ಫೋಟಗೊಂಡ ಕೊರೊನಾವೈರಸ್ ಸೋಂಕಿನ ಬಗ್ಗೆ ಚೀನಾದ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಝೊಂಗ್ ನಾಂಶಾನ್ ಆತಂಕ ವ್ಯಕ್ತಪಡಿಸಿದ್ದಾರೆ. ದೊಡ್ಡ ನಗರ ಎನಿಸಿರುವ ನಾಂಜಿಂಗ್ ನಗರದಲ್ಲಿ ಕೊವಿಡ್-19 ನಿಯಂತ್ರಣವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ, ಆದರೆ ಝಾಂಗ್ ಝಿಯಾಜಿ ಪ್ರದೇಶದಿಂದ ಸಾಂಕ್ರಾಮಿಕ ಪಿಡುಗು ಬೇರೆ ಬೇರೆ ನಗರಗಳಿಗೆ ಮತ್ತು ಸಣ್ಣ ಸಣ್ಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ ಎಂದಿದ್ದಾರೆ.

* ದೇಶದಲ್ಲಿ ಪತ್ತೆಯಾದ ಹಲವು ಕೊರೊನಾವೈರಸ್ ಸೋಂಕಿನ ಪ್ರಕರಣಗಳಿಗೆ ಝಾಂಗ್ ಝಿಯಾಜಿಯ ಮೀಲಿ ಕ್ಸಿಯಾಂಗ್ಸಿ ಗ್ರ್ಯಾಂಡ್ ಥಿಯೇಟರ್ ನಂಟು ಇರುವುದು ಸ್ಪಷ್ಟವಾಗಿದೆ. ಈ ಥಿಯೇಟರ್ ನಲ್ಲಿ ನಡೆದ ಒಂದೇ ಒಂದು ಪ್ರದರ್ಶನದಲ್ಲಿ 2000ಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

* "ಒಂದೇ ಒಂದು ಪ್ರದರ್ಶನದಲ್ಲಿ 2000ಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ್ದಾರೆ ಎಂದರೆ ಅಲ್ಲಿ ಪರಸ್ಪರ ಸಾಮಾಜಿಕ ಅಂತರ ಕಳೆದು ಹೋಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿರುವವರು ಮತ್ತು ಅವರ ಕುಟುಂಬ ಸದಸ್ಯರನ್ನು ಪತ್ತೆ ಮಾಡಬೇಕಿದೆ", ಎಂದು ಚೀನಾದ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಝೊಂಗ್ ನಾಂಶಾನ್ ಸಲಹೆ ನೀಡಿದ್ದಾರೆ.

* ನಾಂಜಿಂಗ್ ಮೂರು ಸುತ್ತುಗಳಲ್ಲಿ ನಡೆಸಿದ ನ್ಯೂಕ್ಸಿಕ್ ಆಸಿಡ್ ಟೆಸ್ಟಿಂಗ್ ವೇಳೆ 204 ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಬಹುಶಃ ಈ ಎಲ್ಲ ಪ್ರಕರಣಗಳು ಲುಕಾವೋ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ನಂಟು ಹೊಂದಿವೆ. ರಷ್ಯಾದಿಂದ ಆಗಮಿಸಿದ ವಿಮಾನದಲ್ಲಿ ಈ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ ಎಂದು ನಾಂಜಿಂಗ್ ಪ್ರಾಧಿಕಾರ ಸ್ಪಷ್ಟಪಡಿಸಿದೆ.

* ಮುಂದಿನ 10 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಸತಿ ಸೇರಿದಂತೆ ಸಂಪೂರ್ಣವಾಗಿ ಸೋಂಕುರಹಿತಗೊಳಿಸಲಾಗುವುದು ಎಂದು ಬಂದ್ ಆಗಿರುವ ಲುಕಾವೋ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

* ನಾಂಜಿಂಗ್ ಮತ್ತು ಝಾಂಗ್ ಝಿಯಾಜಿ ಪ್ರದೇಶಗಳ ಹೊರತಾಗಿ ಇತರೆ ನಗರಗಳಲ್ಲೂ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

* ಚೀನಾದಲ್ಲಿ ಭಾನುವಾರದ ಅಂಕಿ-ಅಂಶಗಳ ಪ್ರಕಾರ, 93,005 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 1022 ಸಕ್ರಿಯ ಪ್ರಕರಣಗಳಿವೆ. ಈವರೆಗೂ 4636 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Coronavirus Alert: Delta Variant Spread to China's 18 Provinces With Fresh Cases in Beijing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X