ಕೊರೊನಾ ವೈರಸ್: ಚೀನಾದಲ್ಲಿ ಮೃತರ ಸಂಖ್ಯೆ 1,765ಕ್ಕೆ ಏರಿಕೆ
Recommended Video
ವುಹಾನ್, ಫೆಬ್ರವರಿ 17: ಚೀನಾದಲ್ಲಿ ಮಾರಣಾಂತಿಕ ಕೊರೊನಾ(ಕೊವಿಡ್19) ರೋಗದಿಂದ ಮೃತಪಟ್ಟವರ ಸಂಖ್ಯೆ 1,765ಕ್ಕೇರಿದೆ.
ಒಟ್ಟು 70 ಸಾವಿರ ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹ್ಯೂಬೆನಲ್ಲಿ ಇಂದು 100 ಮಂದಿ ಮೃತಪಟ್ಟಿದ್ದಾರೆ. ಡಿಸೆಂಬರ್‌ನಲ್ಲಿಯೇ ಈ ನಗರದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಬಳಿಕ ಅದು ಬೇರೆ ನಗರಗಳು ಸೇರಿದಂತೆ ಈಗ ಇಡೀ ವಿಶ್ವಕ್ಕೆ ಹರಡಿದೆ.
ಜಪಾನಿನ ಹಡಗಿನಲ್ಲಿರುವವ ಪೈಕಿ ಅಮೆರಿಕದ 24ಕ್ಕೂ ಹೆಚ್ಚು ಮಂದಿಗೆ ವೈರಸ್ ಹರಡಿದ್ದು, ಅಮರಿಕ ಸರ್ಕಾರ ಆತಂಕದಲ್ಲಿದೆ. 2002-03ರಲ್ಲಿ ಚೀನಾವನ್ನು ಆವರಿಸಿದ್ದ ಸಾರ್ಸ್ ರೋಗವು 774 ಜೀವಗಳನ್ನು ಬಲಿಪಡೆದಿತ್ತು.

ಆದರೆ ಈಗ ಇನ್ನಷ್ಟು ಮಾರಣಾಂತಿಕವಾಗಿದೆ. ವಿಶೇಷ ಆಸ್ಪತ್ರೆಗಳಲ್ಲಿ ರೋಬೊಟ್‌ಗಳ ಮೂಲಕ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹಾಗೆಯೇ ಬೀಜಿಂಗ್‌ಗೆ ವಿದೇಶಿ ತಜ್ಞರ ತಂಡವು ಭೇಟಿ ನೀಡಿದ್ದು, ರೋಗ ನಿಯಂತ್ರಣಕ್ಕೆ ಸಂಬಂಧಸಿದಂತೆ ಸರಣಿ ಸಭೆಗಳನ್ನು ನಡೆಸುತ್ತಿದೆ.
ಏತನ್ಮಧ್ಯೆ ಕೊರೊನಾ ವೈರಸ್‌ಗೆ ಸಂಬಂಧಿಸಿದ ಹೊಸ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ರೋಗ ನಿಯಂತ್ರಣವಾಗುತ್ತಿರುವ ಸಂಕೇತವಾಗುತ್ತಿದೆ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ.












Click it and Unblock the Notifications