ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Corona BF.7 ಸೋಂಕು ವ್ಯಾಪಿಸುತ್ತಿರುವ ಈ 8 ದೇಶಗಳಿಗೆ ತೆರಳದಂತೆ ಸೂಚನೆ, ಆ ದೇಶಗಳ ಬಗ್ಗೆ ತಿಳಿಯಿರಿ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಚೀನಾ, ಜಪಾನ್, ಅಮೆರಿಕೆ, ಜರ್ಮನಿ ಸೇರಿದಂತೆ ಸುಮಾರು ಹತ್ತು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ಹಠಾತ್ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ದೇಶಗಳು ಪ್ರಯಾಣ ನಿರ್ಬಂಧಗಳನ್ನು ವಿಧಿಸುವ ನಿರೀಕ್ಷೆಯಿದೆ.

ಕಳೆದ ವಾರವಷ್ಟೇ ಕಾಂಗ್ರೆಸ್ ನಾಯಕ ಮತ್ತು ಸಂಸದ ಮನೀಶ್ ತಿವಾರಿ ಅವರು ಚೀನಾದಿಂದ ಭಾರತಕ್ಕೆ ಬರುವ ವಿಮಾನಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಸರ್ಕಾರ ಸೂಚಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಚೀನಾದಲ್ಲಿ ಮಾತ್ರವಲ್ಲದೇ ಇತರ ದೇಶಗಳಲ್ಲೂ ಕೊರೊನಾ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಭಾರತವು ಹೆಚ್ಚು ಜಾಗರೂಕರಾಗಿರಬೇಕು ಎಂದು ಸಂಸರು ಪ್ರತಿಪಾದಿಸಿದ್ದರು.

ಚೀನಾದಲ್ಲಿ ಕೊರೊನಾ ಉಲ್ಬಣ: ಹೊಸ ಪ್ರಕರಣಗಳ ಮಾಹಿತಿ ಪ್ರಕಟಿಸುವುದನ್ನೇ ಕೈಬಿಟ್ಟ ಚೀನಾಚೀನಾದಲ್ಲಿ ಕೊರೊನಾ ಉಲ್ಬಣ: ಹೊಸ ಪ್ರಕರಣಗಳ ಮಾಹಿತಿ ಪ್ರಕಟಿಸುವುದನ್ನೇ ಕೈಬಿಟ್ಟ ಚೀನಾ

ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಹಲವು ದೇಶಗಳನ್ನು ಪಟ್ಟಿ ಮಾಡಲಾಗಿದೆ. ಈ ದೇಶಗಳಲ್ಲಿ ಕೊರೊನಾ ವ್ಯಾಪಿಸಿದೆ. ಆದಷ್ಟು ನೀವು ಈ ದೇಶಗಳಿಗೆ ಹೊಸ ವರ್ಷಾಚರಣೆಗೆ ತೆರಳುವವರಿದ್ದರೆ ಸದ್ಯಕ್ಕೆ ತಪ್ಪಿಸುವುದು ಉತ್ತಮ ಎಂದು ತಿಳಿಸಲಾಗಿದೆ.

ಜಪಾನ್: ಇಲ್ಲಿ ಸಹ ಸೋಂಕಿನ ಪ್ರಕರಣಗಳು ಏರುಗತಿಯಲ್ಲಿವೆ. ದಿನೇ ದಿನೇ ಏಕಾಎಕಿ ಕೋವಿಡ್ ಪರಿಸ್ಥಿತಿ ಹದಗೆಡುತ್ತಿದೆ. ಶನಿವಾರದಂದು 371 ಸಾವುಗಳು ದಾಖಲಾಗಿದ್ದು, ಬ್ರೆಜಿಲ್, ದಕ್ಷಿಣ ಕೊರಿಯಾದ ನಂತರ ಜಪಾನ್ ದೇಶದಲ್ಲಿ ಕೋವಿಡ್‌ನಿಂದ ಹೆಚ್ಚು ಜೀವ ಹಾನಿ ಸಂಭವಿಸಿದೆ. ಇಲ್ಲಿ ಸಹ ಕಠಿಣ ನಿಯಮ ಜಾರಿತರಲಾಗಿದೆ.

ರಜಾದಿನ ಮೋಜಿನಿಂದ ಸೋಂಕು ಏರಿಕೆ

ರಜಾದಿನ ಮೋಜಿನಿಂದ ಸೋಂಕು ಏರಿಕೆ

ಅಮೆರಿಕಾ: ಕೊರೊನಾ ಓಮ್ರಿಕ್ರಾನ್ ಸಬ್‌ವೇರಿಯಂಟ್ XBB ಸೋಂಕು ಈಶಾನ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೇ.50ಕ್ಕಿಂತ ಹೆಚ್ಚು ವ್ಯಾಪಿಸಿದೆ. ಇಲ್ಲಿನ ಜನರು ರಜಾದಿನಗಳಲ್ಲಿ ಅನೇಕ ಕಡೆಗಳಲ್ಲಿ ಸಂಚಾರ ಮಾಡಿದ್ದೆ ಕೋವಿಡ್ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಬೇರೆ ಕಡೆಗಳಿಗೆ ತೆರಳಿ ಬಂದ ಪರಿಣಾಮ ಸೋಂಕು ದಢೀರ್ ಹೆಚ್ಚಾಗಿದೆ.

ದಕ್ಷಿಣ ಕೊರಿಯಾ: ದೇಶವು 25,545 ಹೊಸ ಕೊರೊನಾ ಸೋಂಕು ಬಿಎಫ್ 7 ದೃಢಪಡಿಸಿದೆ. ಇದರಲ್ಲಿ ವಿದೇಶಗಳಿಂದ ಬಂದ ಪ್ರಯಾಣಿಕರೇ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಕೋರಿಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,684,600 ಕ್ಕೆ ತಲುಪಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿ (ಕೆಡಿಸಿಎ) ಮಾಹಿತಿ ನೀಡಿದ್ದಾಗಿ ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದಲ್ಲಿ ಬಿಎಫ್‌ 7 ಆರ್ಭಟ

ಚೀನಾದಲ್ಲಿ ಬಿಎಫ್‌ 7 ಆರ್ಭಟ

ಚೀನಾ: ಚೀನಾದಲ್ಲಿ ಕೊರೊನಾ ಬಿಎಫ್.7 ರೂಪಾಂತರವು ಚೀನಾದಲ್ಲಿ ದೈತ್ಯವಾಗಿ ಹರಡಿದೆ. ಒಂದೇ ದಿನಕ್ಕೆ ಇಲ್ಲಿ 37 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದು ವಿಶ್ವದಲ್ಲೇ ಮೊದಲ ಬಾರಿಗೆ ಪತ್ತೆಯಾದ ಅತೀ ಹೆಚ್ಚು ಪಾಸಿಟಿವ್ ಪ್ರಕಣಗಳಾಗಿವೆ. ಆದರೆ ಈ ಬಗ್ಗೆ ಚೀನಾ ಸರ್ಕಾರ ಸೂಕ್ತ ಅಂಕಿ ಸಂಖ್ಯೆಗಳ ವರದಿ ಪ್ರಕಟಿಸುತ್ತಿಲ್ಲ ಎನ್ನಲಾಗಿದೆ.

ಬ್ರೆಜಿಲ್: ಬ್ರೆಜಿಲ್ ಕೂಡ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ, ಬ್ರೆಜಿಲ್ ಕಳೆದ ತಿಂಗಳಲ್ಲಿ 9,45,568 ಪ್ರಕರಣಗಳು ಮತ್ತು 3,125 ಸಾವುಗಳನ್ನು ವರದಿ ಆಗಿದೆ.

ಆಸ್ಪತ್ರೆ ದಾಖಲಾತಿ ಶೇ.22ರಷ್ಟು ಅಧಿಕ

ಆಸ್ಪತ್ರೆ ದಾಖಲಾತಿ ಶೇ.22ರಷ್ಟು ಅಧಿಕ

ಫ್ರಾನ್ಸ್: ಫ್ರೆಂಚ್ ಪ್ರಧಾನಿ ಎಲಿಜ್‌ಬೆತ್ ಬೋರ್ನ್ ಕಳೆದ ತಿಂಗಳು ಕೊರೊನಾ ಸಾಂಕ್ರಾಮಿಕವು ಮತ್ತೆ ಪ್ರಾರಂಭವಾಗುತ್ತಿದ್ದು, ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಆಸ್ಪತ್ರೆಗಳಲ್ಲಿ ಸುಮಾರು 10 ಪ್ರತಿಶತದಷ್ಟು ಹೆಚ್ಚಳ, ನಿರ್ಣಾಯಕ ಆರೈಕೆಯಲ್ಲಿ ಆಸ್ಪತ್ರೆಗೆ ದಾಖಲಾತಿ ಶೇ.22 ರಷ್ಟು ಹೆಚ್ಚಳವಾಗಿದೆ. ಕೊರೊನಾ ದಿಂದ ಕಳೆದ ತಿಂಗಳು 400 ಸಾವುಗಳು ಸಂಭವಿಸಿವೆ.

ಜರ್ಮನಿ: ಕಳೆದ ಕೆಲವು ದಿನಗಳಿಂದ ಜರ್ಮನಿಯಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಸದ್ಯಕ್ಕೆ ಈ ದೇಶಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಜನರಿಗೆ ಸೂಚಿಸಲಾಗಿದೆ.

ಸಿಂಗಾಪುರ: ಕಳೆದ ಮೂರು ತಿಂಗಳಲ್ಲಿ 130 ಓಮಿಕ್ರಾನ್ ಉಪತಳಿ ವೈರಸ್‌ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ ಎಂದು ಚೀನಾ ಸಿಡಿಸಿ ವರದಿ ಮಾಡಿದೆ. ಈ ಉಪತಳಿಗಳ ಪೈಕಿ BQ.1 ಮತ್ತು XBB ಸ್ಟ್ರೈನ್‌ಗಳು ಹೆಚ್ಚು ವ್ಯಾಪಿಸಿವೆ ಎಂದು ಅಧ್ಯಯನವು ತಿಳಿಸಿದೆ.

ವಿದೇಶ ಪ್ರಯಾಣಿಕರಿಗೆ 'ಏರ್ ಸುವಿಧಾ' ಫಾರ್ಮ್ ಭರ್ತಿ ಕಡ್ಡಾಯ

ವಿದೇಶ ಪ್ರಯಾಣಿಕರಿಗೆ 'ಏರ್ ಸುವಿಧಾ' ಫಾರ್ಮ್ ಭರ್ತಿ ಕಡ್ಡಾಯ

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್‌ನಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊರೊನಾ ನಿಯಂತ್ರಣಕ್ಕಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಹೇಳಿದ್ದಾರೆ. ಈ ದೇಶಗಳ ಯಾವುದೇ ಪ್ರಯಾಣಿಕರು ರೋಗಲಕ್ಷಣ ಅಥವಾ ಕೊರೊನಾವೈರಸ್‌ಗೆ ಧನಾತ್ಮಕ ಪರೀಕ್ಷೆಯನ್ನು ಕಂಡು ಕೊಂಡರೆ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ಸ್ಥಿತಿಯನ್ನು ಘೋಷಿಸಲು 'ಏರ್ ಸುವಿಧಾ' ಫಾರ್ಮ್ ಅನ್ನು ಭರ್ತಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

ಸಾಂಕ್ರಾಮಿಕ ಪರಿಸ್ಥಿತಿಯ ದೃಷ್ಟಿಯಿಂದ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಬ್ಯಾಂಕಾಕ್ (ಥೈಲ್ಯಾಂಡ್) ಪ್ರಯಾಣಿಕರು ತಮ್ಮ ಆರ್‌ಟಿ-ಪಿಸಿಆರ್ ವರದಿಗಳನ್ನು ಮುಂಚಿತವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ (ಭಾರತಕ್ಕೆ ಪ್ರಯಾಣಿಸಲು). ಭಾರತಕ್ಕೆ ಬಂದ ನಂತರ, ಅವರು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗುತ್ತಾರೆ ಮತ್ತು ಅವರು ದೇಶಕ್ಕೆ ಬಂದ ನಂತರ ಧನಾತ್ಮಕ ಅಥವಾ ಜ್ವರ ಕಂಡುಬಂದರೆ ಅವರನ್ನು ಕ್ವಾರಂಟೈನ್ ಮಾಡಲು ನಾವು ಆದೇಶವನ್ನು ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.

English summary
Corona BF.7 Fear: 8 Countries You Should Avoid Visiting for New Year 2023, Covid RT PCR Test, Air Suvidha form fill mandatory in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X