ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ತೃಪ್ತಿಗೆ ರೋಬೋಟ್ ನೆಚ್ಚಿಕೊಳ್ಳುವ ಕಾಲ ದೂರವಿಲ್ಲ!

|
Google Oneindia Kannada News

ಲಂಡನ್, ಆಗಸ್ಟ್. 10: ಈಗೇನಿದ್ರೂ ರೋಬೋಟ್ ಕಾಲ್. ಅದೆಷ್ಟೋ ದೇಶಗಳಲ್ಲಿ ಮನೆ ಕೆಲಸಕ್ಕೆ ರೋಬೋಟ್ ಇಟ್ಟುಕೊಳ್ಳುವ ಸಂಪ್ರದಾಯವೂ ಬಂದು ಹೋಗಿದೆ. ಅಂತರಿಕ್ಷಕ್ಕೆ ಹಾರಿದ ದಾಖಲೆಗಳೂ ಇವೆ.

ರೋಬೋಟ್ ಗಳ ಮೇಲೆ ಲೆಕ್ಕವಿಲ್ಲದಷ್ಟೂ ಸಿನಿಮಾ ಹಾಲಿವುಡ್ ನಲ್ಲಿ ಬಂದು ಹೋಗಿವೆ. ಕನ್ನಡದಲ್ಲೂ ಅಂಥ ಒಂದೆರಡು ಪ್ರಯತ್ನಗಳಾಗಿದೆ. ಯಾಕಪ್ಪಾ ಇಷ್ಟೆಲ್ಲಾ ಪೀಠಿಕೆ ಅಂದ್ರೆ ಮುಂದಿದೆ ಅಸಲಿ ರಾಬೋಟ್ ಕತೆ....[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]

Coming Soon in 50 years: Coming soon: Artificial wives?

ಮಾನವನ ನೈಸರ್ಗಿಕ ಆಕಾಂಕ್ಷೆಗಳಲ್ಲಿ ಲೈಂಗಿಕ ತೃಪ್ತಿಯೂ ಒಂದು. ಇನ್ನು ಮುಂದೆ ರೋಬೋಟ್ ಸಂಗಾತಿಯಾಗಿಯೂ ಕಾಣಿಸಿಕೊಳ್ಳಲಿದೆ. ಸೆಕ್ಸ್ ಟಾಯ್ ಗಳ ಜಾಗದಲ್ಲಿ ರಾಬೋಟ್ ಗಳು ಕಾಣಿಸಿಕೊಳ್ಳಲಿವೆ.[ಲೈಂಗಿಕ ತೃಪ್ತಿ, ಜಾಗತಿಕ ಸಮೀಕ್ಷೆಯ ಫಲಿತಾಂಶ ಪ್ರಕಟ]

ಆದರೆ ಇದಕ್ಕೆಲ್ಲ ಸ್ಪಷ್ಟ ರೂಪ ಸಿಗಲು ಇನ್ನು 50 ವರ್ಷ ಕಾಯಬೇಕು. ಮನುಷ್ಯನ ಆಕೃತಿಯ ಸೆಕ್ಸ್ ಗೊಂಬೆಗಳು ಸದ್ಯ ಚಾಲ್ತಿಯಲ್ಲಿದ್ದು ಅದಕ್ಕು ಒಂದು ಹೆಜ್ಜೆ ಮುಂದೆ ಹೋಗಿರುವ ವಿಜ್ಞಾನಿಗಳು ಸಂಗಾತಿಯಂತೆ ಸಹಕರಿಸುವ ರೋಬೋಟ್ ತಯಾರಿಕೆಗೆ ರೂಪುರೇಷೆ ಹಾಕಿಕೊಂಡಿದ್ದಾರೆ.

ಸೆಕ್ಸ್ ಟೆಕ್ ಎಂಬ ತಂತ್ರಜ್ಞಾನದ ಅಡಿ ರೋಬೋಟ್ ಗಳು ತಯಾರಾಗಲಿದ್ದು ಇಂಗ್ಲೆಂಡ್ ನ ಸುದರ್ ಲೆಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೋಬೋಟ್ ಗಳನ್ನು ಸಿದ್ಧಮಾಡಲಿದ್ದಾರೆ. [ರೋಬೋಟ್‌ ಲೋಕಕ್ಕೆ ಒಂದು ಪಯಣ]

ಸಂಶೊಧನೆಯ ನೇತೃತ್ವವನ್ನು ಡಾ. ಹೆಲನ್ ಡ್ರಿಲ್ಕೋಲ್ ಎಂಬುವರು ವಹಿಸಿಕೊಂಡಿದ್ದು ಮಾನವ ಲೈಂಗಿಕ ತೃಪ್ತಿಗಾಗಿ ರೋಬೋಟ್ ಗಳನ್ನು ನೆಚ್ಚಿಕೊಳ್ಳುವ ಕಾಲ ದೂರವಿಲ್ಲ ಎಂದು ಹೇಳಿದ್ದಾರೆ.

English summary
Move over artificial limbs, eyes and skin, for artificial wives will soon be soon the horizon, at least that's what a scientist claims. According to the latest research conducted at the University of Sunderland, the way humans interact with robots will change drastically in the future and humans could soon be having sex with robots by 2070.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X