ವ್ಯಕ್ತಿಯ ಕಿವಿಯೊಳಗೆ ಜಿರಲೆಯ ಸಂಸಾರ: ಬೆಚ್ಚಿಬಿದ್ದ ವೈದ್ಯರು
ಬೀಜಿಂಗ್, ನವೆಂಬರ್ 7: ಸ್ವಚ್ಛತೆ ಕಾಪಾಡದ ಅಡುಗೆಮನೆಯಂತಹ ಸ್ಥಳಗಳಲ್ಲಿ ಜಿರಲೆಗಳು ನೆಲೆ ಕಂಡುಕೊಂಡು ಕುಟುಂಬ ಬೆಳೆಸುವುದು ಸಾಮಾನ್ಯ. ಆದರೆ ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬನ ಕಿವಿಯೊಳಗೇ ಜಿರಲೆ ಸಂಸಾರ ನಡೆಸಿದೆ. ಅದನ್ನು ಕಂಡು ವೈದ್ಯರೂ ಬೆಚ್ಚಿಬಿದ್ದಿದ್ದಾರೆ.
ಎಲ್ವಿ ಎಂಬ ಹೆಸರಿನ 24 ವರ್ಷದ ವ್ಯಕ್ತಿ ಬೆಳಿಗ್ಗೆ ಏಳುವಾಗ ಕಿವಿಯಲ್ಲಿ ವಿಪರೀತ ನೋವುಂಟಾಗುತ್ತಿತ್ತು. ಒಳಗೆ ತೀರಾ ಕಿರಿಕಿರಿ. ಏನೋ ಓಡಾಡುತ್ತಿರುವ, ಕೊರೆಯುತ್ತಿರುವ ಸದ್ದು. ಆ ನೋವನ್ನು ಸಹಿಸಿಕೊಳ್ಳಲಾಗದೆ ಆತ ಒದ್ದಾಡತೊಡಗಿದ. ಆತನ ಮನೆಯವರು ಕಿವಿಯೊಳಗೆ ಬೆಳಕು ಹಾಯಿಸಿ ನೋಡಿದಾಗ ಏನೋ ಕೀಟವೊಂದು ಒಳಗೆ ಹರಿದಾಡುತ್ತಿದೆ ಎಂದೆನಿಸಿತ್ತು. ಕೂಡಲೇ ವೈದ್ಯರ ಬಳಿ ತೆರಳಿದರು.
ಹುಯಿಯಾಂಗ್‌ನಲ್ಲಿನ ಸಾನ್ಹೆ ಆಸ್ಪತ್ರೆಯ ವೈದ್ಯರು ಆತನ ಕಿವಿ ತಪಾಸಣೆ ನಡೆಸಿದಾಗ ಕಂಡಿದ್ದು, ಒಳಗೆ ಸಂಸಾರ ನಡೆಸಿದ್ದ ಜಿರಲೆಯ ಕುಟುಂಬ. ಚಿಮಟ ಬಳಸಿ ಮರಿಗಳನ್ನು ಹೊರತೆಗೆದ ಬಳಿಕ ತಾಯಿ ಜಿರಲೆ ಕಣ್ಣಿಗೆ ಬಿತ್ತು. ಸಾಹಸಪಟ್ಟು ಅದನ್ನೂ ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಆತನ ಕಿವಿಯ ನಾಳಕ್ಕೆ ಸ್ವಲ್ಪ ಹಾನಿಯಾಗಿತ್ತು.

ಹತ್ತಕ್ಕೂ ಹೆಚ್ಚು ಮರಿಗಳು
'ಎಲ್ವಿ ಕಿವಿಯೊಳಗೆ ಅಸಾಧ್ಯ ನೋವಾಗುತ್ತಿದೆ ಎಂದು ಹೇಳಿದ್ದರು. ಒಳಗಿನಿಂದ ಕೆರೆದಂತೆ, ಓಡಾಡಿದಂತೆ ಭಾಸವಾಗುತ್ತಿತ್ತು. ಇದರಿಂದ ಸುಮ್ಮನೆ ಕುಳಿತುಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಪರಿಶೀಲಿಸಿದಾಗ ಒಳಗೆ ಹತ್ತಕ್ಕೂ ಹೆಚ್ಚು ಜಿರಲೆ ಮರಿಗಳು ಇರುವುದು ಕಾಣಿಸಿತು. ಅವು ಆಗಲೇ ಅಲ್ಲಿ ಅಡ್ಡಾಡುತ್ತಿದ್ದವು' ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞರು ತಿಳಿಸಿದ್ದಾರೆ.

ಅಭ್ಯಾಸದಿಂದಲೇ ಅಪಾಯ
ಎಲ್ವಿ ಅರೆಬರೆ ಆಹಾರ ತಿಂದು ತನ್ನ ಹಾಸಿಗೆ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಭ್ಯಾಸ ಇರಿಸಿಕೊಂಡಿದ್ದ. ಇದೇ ಆತನಿಗೆ ಎರವಾಗಿತ್ತು. ಆಹಾರ ತಿನ್ನಲು ಬಂದ ಜಿರಲೆ ಅಲ್ಲಿಯೇ ಮಲಗಿದ್ದ ಆತನ ಕಿವಿಯೊಳಗೆ ನುಗ್ಗಿ ಅದನ್ನೇ ತನ್ನ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿತ್ತು. ಅಲ್ಲಿಯೇ ಮೊಟ್ಟೆಯಿಟ್ಟು ಮರಿಯನ್ನೂ ಮಾಡಿತ್ತು. ಎಷ್ಟು ಸಮಯದಿಂದ ಅದು ಆತನ ಕಿವಿಯೊಳಗೆ ಇದ್ದಿರಬಹುದು ಎಂಬುದು ಗೊತ್ತಾಗಿಲ್ಲ.

ಮಿದುಳಿನೊಳಗೆ ಹುಳದ ಮೊಟ್ಟೆ
ಫ್ಲೋರಿಡಾದಲ್ಲಿ ಕಳೆದ ವರ್ಷ ಕ್ಯಾಟಿ ಹೋಲಿ ಎಂಬಾಕೆಯ ಕಿವಿಯೊಳಗೆ ಒಂಬತ್ತು ದಿನ ಜಿರಲೆ ವಾಸವಿತ್ತು. ಆಕೆಯ ಗಂಡ ಅದನ್ನು ಹೊರತೆಗೆಯಲು ಪ್ರಯತ್ನಿಸಿದಾಗ ಕಾಲುಗಳು ಮಾತ್ರ ತುಂಡಾಗಿ ಹೊರಬಂದಿದ್ದವು. ಕೊನೆಗೆ ವೈದ್ಯರು ಅದರ ತುಂಡಾದ ಉಳಿದ ಅಂಗಗಳನ್ನು ಹೊರತೆಗೆದಿದ್ದರು. ನವದೆಹಲಿಯಲ್ಲಿ ಎಂಟು ವರ್ಷದ ಬಾಲಕಿಯ ಮಿದುಳಿನ ಒಳಗೆ ಹುಳವೊಂದರ ನೂರಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿದ್ದವು. ಮಾರ್ಚ್‌ನಲ್ಲಿ ಇಂಥದ್ದೇ ಪ್ರಕರಣದಲ್ಲಿ 18 ವರ್ಷದ ತರುಣ ಮೃತಪಟ್ಟಿದ್ದ.

ಮನೆ ಸ್ವಚ್ಛವಾಗಿಟ್ಟುಕೊಳ್ಳಿ
ಮನೆಯನ್ನು ಶುದ್ಧವಾಗಿರಿಸಿಕೊಳ್ಳುವುದು ಜಿರಲೆಗಳು ಬರುವುದನ್ನು ಮತ್ತು ಹೆಚ್ಚುವುದನ್ನು ತಡೆಯಲು ಸಹಾಯಮಾಡುತ್ತದೆ. ಜಿರಲೆ, ಸೊಳ್ಳೆಯಂತಹ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಕಿಟಕಿಗಳಿಗೆ ಬಲೆ ಮತ್ತು ಪರದೆಗಳನ್ನು ಅಳವಡಿಸಬೇಕು. ಆಹಾರ ಪದಾರ್ಥಗಳನ್ನು ಚೆಲ್ಲಿದ್ದರೆ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಹೋದರೆ ಜಿರಲೆಗಳ ಕಾಟ ಹೆಚ್ಚುತ್ತದೆ. ಅವು ದೇಹದೊಳಗೂ ಪ್ರವೇಶಿಸುವ ಅಪಾಯವಿರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications