ಇಲ್ಲಿ ಪುರುಷ ಮಹಿಳೆಯರಿಗೆ ನಗ್ನ ಸಹ ಯೋಗದ ಭಾಗ್ಯ
ನ್ಯೂಯಾರ್ಕ್, ಜ.25: ನ್ಯೂಯಾರ್ಕ್ ಮಹಾನಗರದಲ್ಲಿ ನಗ್ನರಾಗಿ ಪುರುಷರಿಗೆ ಮಾತ್ರ ಯೋಗ ಹೇಳಿಕೊಡುವ ಯೋಗ ಕೇಂದ್ರಗಳು ಹೆಚ್ಚು ಜನಪ್ರಿಯವಾಗುತ್ತಿರುವುದನ್ನು ಮನಗಂಡ ಯೋಗ ಕೇಂದ್ರಗಳ ಮಾಲೀಕರುಗಳು ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಮಹಿಳೆಯರಿಗೂ ಈ ಭಾಗ್ಯವನ್ನು ಕಲ್ಪಿಸಲು ನಿರ್ಧರಿಸಿದ್ದಾರೆ.
Bold & Naked Yoga studio ಮಾಲೀಕರು ಈಗ ಪುರುಷರಿಗಾಗಿ, ಮಹಿಳೆಯರಿಗಾಗಿ ಮತ್ತು ಇಬ್ಬರಿಗೂ ಸಹ-ತರಬೇತಿ ನೀಡುವ ತರಗತಿಗಳನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಇಲ್ಲಿ ಯೋಗ ಮಾಡುವಾಗ ಮೈಮೇಲೆ ಒಂದು ನೂಲು ಸಹ ಇರುವುದಿಲ್ಲ ಎನ್ನುತ್ತಾರೆ ಈ ಮಾಲೀಕರು.

ನಗ್ನಾವಸ್ಥೆಯಲ್ಲಿದ್ದಾಗ ನಿಮ್ಮ ದೇಹದ ಬಗೆಗಿನ ನಕಾರಾತ್ಮಕ/ ಪ್ರಚೋದನಾತ್ಮಕ ಭಾವನೆಗಳು ದೂರವಾಗುತ್ತವೆ. ನಿಮ್ಮ ತನಕ್ಕೆ ಹೆಚ್ಚು ಹೊಂದಿಕೊಳ್ಳುತ್ತೀರಿ. ನಿಮಗೆ ನೀವು ಹೆಚ್ಚು ಸ್ವೀಕಾರಾರ್ಹವಾಗುತ್ತೀರಿ. ಇದು ನಿಮ್ಮ ಸುತ್ತಮುತ್ತಲ ಜಗತ್ತಿಗೂ ಸಹ್ಯವಾಗುತ್ತದೆ ಎಂದು Bold & Naked Yoga studio ಮಾಲೀಕರು ಹೇಳುತ್ತಾರೆ.
ನಗ್ನಾವಸ್ಥೆ ಅಂದರೆ ಅದು ಲೈಂಗಿಕತೆಯ ಅವತಾರ ಎಂದು ಬಹಳಷ್ಟು ಜನ ಅಂದುಕೊಳ್ಳುತ್ತಾರೆ. ಆದರೆ naked yoga classನಲ್ಲಿ ಅಂತಹ ಪ್ರಮೇಯ ಬಾರದು ಎಂದು studioದ ವೆಬ್ ಸೈಟಿನಲ್ಲಿ ಹೇಳಲಾಗಿದೆ.
ನಗ್ನಾವಸ್ಥೆ ಅಂದರೆ ನಿಮ್ಮನ್ನು ನೀವೇ ಅರಿಯುವುದು, ಸ್ವೀಕಾರಗೊಳಿಸುವುದು ಮತ್ತು ನಿಮ್ಮನ್ನು ನೀವು ಹೆಚ್ಚು ಹೆಚ್ಚು ಪ್ರೀತಿಸುವುದು ಎಂದರ್ಥ. ಯೋಗ ಶಿಕ್ಷಣದ ಒಂದು ಭಾಗವೆಂದರೆ ನಿಮ್ಮ ದೇಹವನ್ನು ಗೌರವಿಸುವುದು ಮತ್ತು ದೇಹದ ಜತೆ ತಾಳಮೇಳ ಸಾಧಿಸುವುದು ಎಂದರ್ಥ. ನಮ್ಮ ಕೇಂದ್ರದಲ್ಲಿ ತರಬೇತುದಾರರು ಮತ್ತು ಯೋಗಪಟುಗಳು ಒಟ್ಟೊಟ್ಟಿಗೆ ತರಬೇತಿಯಲ್ಲಿ ಲೀನವಾಗುತ್ತಾರೆ ಎನ್ನುತ್ತದೆ ಈ ವೆಬ್ ಸೈಟ್.
ಅಂತಿಮವಾಗಿ ಯಾವಾಗ ನಿಮ್ಮ ನಗ್ನ ದೇಹದ ಮೇಲೆ ನಿಮಗೆ ಹೆಚ್ಚು ಗೌರವ ಮತ್ತು ಆತ್ಮವಿಶ್ವಾಸ ಕುದುರುತ್ತದೋ ಆಗ ವಸ್ತ್ರಧಾರಿಯಾಗಿಯೂ ನಿಮ್ಮಲ್ಲಿ ಆತ್ಮವಿಶ್ವಾಸ ಇಮ್ಮಡಿಸುತ್ತದೆ ಎನ್ನುತ್ತಾರೆ studio ಮಾಲೀಕರು.












Click it and Unblock the Notifications