ವಿದ್ಯಾರ್ಥಿನಿಯರಿಗೆ ಲೈಂಗಿಕ ರೋಗ ಹಂಚಿದ ಶಿಕ್ಷಕ

ಶಾಲಾ ಶಿಕ್ಷಕಯೊಬ್ಬನುತನ್ನ 6 ವಿದ್ಯಾರ್ಥಿಯನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ತನಗೆ ಅಂಟಿದ್ದ ಲೈಂಗಿಕ ಸೋಂಕು(STD ಕಾಯಿಲೆ) ವಿದ್ಯಾರ್ಥಿನಿಯರಿಗೂ ಹರಡುವಂತೆ ಮಾಡಿದ್ದಾನೆ.
ಚೀನಾದ ಜಿಯಾಗ್ಸಿ ಪ್ರಾಂತ್ಯದ ಕೋರ್ಟ್ ಸೂಕ್ತ ಸಾಕ್ಷಿ ಆಧಾರಗಳನ್ನು ಪರಿಗಣಿಸಿ ಟಯೊ ಬಿಯೊಗೊಂಗ್ ಎಂಬ 62 ವರ್ಷದ ಶಿಕ್ಷಕನಿಗೆ 14 ವರ್ಷ ಜೈಲು ಶಿಕ್ಷೆ ನೀಡಿದೆ. ಸೆಪ್ಟೆಂಬರ್ 2012 ರಿಂದ ಮೇ 2013 ರ ಅವಧಿಯಲ್ಲಿ ಈಕೆ ತನ್ನ ಏಳು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಆತ್ಯಾಚಾರ ಎಸಗಿರುವುದು ದೃಢಪಟ್ಟಿದೆ. ಸಂತ್ರಸ್ತರಲ್ಲಿ 6 ವಿದ್ಯಾರ್ಥಿನಿಯರಿಗೆ ಲೈಂಗಿಕ ಸೋಂಕು ಹತ್ತಿದೆ.
ಎಳೆ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದ ನಂತರ ಸರ್ಕಾರ ಇತ್ತೀಚೆಗೆ ಎಚ್ಚೆತ್ತುಕೊಂಡಿತ್ತು. ವಿದ್ಯಾರ್ಥಿನಿಯರ ರಕ್ಷಣೆಗೆ ಅಭಿಯಾನ ಆರಂಭಿಸಲಾಗಿತ್ತು. ಸುಪ್ರೀಂಕೋರ್ಟ್ ಕೂಡಾ ಕೆಳಹಂತದ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೂಚಿಸಿತ್ತು.
ರೂಚಾಂಗ್ ನ ಫಾನ್ ಜೆನ್ ಟೌನ್ ಶಿಪ್ ನ ಶಾಂಗ್ಯೂನ್ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಪೋಷಕರು ಶಿಕ್ಷಕರ ಟೋ ವಿರುದ್ಧ ದೂರು ನೀಡಿದ ಮೇಲೆ ತನಿಖೆ, ವಿಚಾರಣೆ ನಡೆದು ಟೋ ತಪ್ಪಿತಸ್ಥ ಎಂದು ಸಾಬೀತಾಗಿದೆ.
ವಿದ್ಯಾರ್ಥಿನಿಯರ ಮೇಲೆ ಅಮಾನುಷವಾಗಿ ಲೈಂಗಿಕ, ಮಾನಸಿಕ, ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಟೋಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಚೀನಾದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಅನಾಥ ಮಕ್ಕಳ ಶಾಲೆ, ಬೋರ್ಡಿಂಗ್ ಶಾಲೆಗಳಲ್ಲಿ ಈ ರೀತಿ ಪ್ರಕರಣಗಳು ಕಂಡು ಬಂದಿವೆ.












Click it and Unblock the Notifications