ಮೌಂಟ್ ಎವರೆಸ್ಟ್ ಮರು ಅಳತೆಗೆ ಆಗಮಿಸಿದ ಚೀನಾ ತಂಡ
ಬೀಜಿಂಗ್, ಮೇ 28: ಮೌಂಟ್ ಎವರೆಸ್ಟ್ ಮರು ಅಳತೆ ಮಾಡಲು ಚೀನಾ ತಂಡ ಆಗಮಿಸಿದೆ.
Recommended Video
ಇದು ಜಗತ್ತಿನ ಅತ್ಯಂತ ಎತ್ತರದ ಶಿಖರವಾಗಿದೆ. ಚೀನಾದ ಅಳತೆ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8844.443 ಮೀಟರ್‌ನಷ್ಟಿದೆ. ನೇಪಾಳ ಈಗಾಗಲೇ ಮಾಡಿದ್ದ ಅಳತೆಗಿಂತ ನಾಲ್ಕು ಮೀಟರ್ ಕಡಿಮೆ ಇದೆ.
ಮೇ 1 ರಂದು ನೇಪಾಳ ಮಾಡಿದ ಸಮೀಕ್ಷೆಯಲ್ಲಿ ಸತ್ಯ ಇಲ್ಲ ಎಂದು ಚೀನಾ ಹೊಸ ಸಮೀಕ್ಷೆ ಕೈಗೊಂಡಿದೆ. 2015ರ ಭೂಕಂಪದ ಹಿನ್ನೆಲೆಯಲ್ಲಿ ಮೌಂಟ್ ಎವರೆಸ್ಟ್‌ನ್ನು ಮರು ಅಳತೆ ಮಾಡಲು ಮಾಡಿದ್ದ ಭಾರತದ ಪ್ರಸ್ತಾಪವನ್ನು ನೇಪಾಳ ತಿರಸ್ಕರಿಸಿತ್ತು.

2015ರಲ್ಲಿ ನೇಪಾಳವನ್ನು ಬುಡಮೇಲು ಮಾಡಿದ್ದ ಭೂಕಂಪದಿಂದ ಮೌಂಟ್ ಎವರೆಸ್ಟ್ ಶಿಖರದ ಎತ್ತರದ ಬಗ್ಗೆ ವೈಜ್ಞಾನಿಕ ಸಮುದಾಯದಲ್ಲಿ ಹಲವು ಸಂಶಯಗಳು ಮೂಡಿದ್ದವು.
2015ರ ಏಪ್ರಿಲ್‌ನಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಎಂಟು ಸಾವಿರ ಮಂದಿ ಸಾವನ್ನಪ್ಪಿದ್ದರು. ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು.
ಭಾರತದ 250 ವರ್ಷ ಹಳೆಯ ಸರ್ವೇಕ್ಷಣಾ ಸಂಸ್ಥೆ ಸರ್ವೆ ಆಫ್ ಇಂಡಿಯಾ ಭಾರತ ಮತ್ತು ನೇಪಾಳ ಜಂಟಿಯಾಗಿ ಮೌಂಟ್ ಎವರೆಸ್ಟ್ ಮರು ಅಳತೆ ಮಾಡಬೇಕೆಂದು ಹೇಳಿತ್ತು. ಆದರೆ ನೇಪಾಳ ಉತ್ತರ ನೀಡಿರಲಿಲ್ಲ.
1975 ಹಾಗೂ 2005ರಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಮರು ಅಳತೆ ಮಾಡಲಾಗಿತ್ತು. 8,848.13 ಮೀಟರ್ ಹಾಗೂ 8,844.43 ಮೀಟರ್ ಅಳತೆ ಇತ್ತು.












Click it and Unblock the Notifications