• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಕಿಂಗ್‌ಡೋದ ಎಲ್ಲಾ ನಿವಾಸಿಗಳಿಗೆ ಐದು ದಿನದೊಳಗೆ ಕೊರೊನಾ ಪರೀಕ್ಷೆ

|

ಬೀಜಿಂಗ್, ಅಕ್ಟೋಬರ್ 12: ಚೀನಾದ ಕಿಂಗ್‌ಡೋದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗಿರುವ ಕಾರಣ ಮುಂದಿನ ಐದು ದಿನಗಳಲ್ಲಿ ನಗರದ ಸಂಪೂರ್ಣ ನಿವಾಸಿಗಳಿಗೆ ಕೊರೊನಾ ಪರೀಕ್ಷೆ ನಡೆಸಲು ಮುಂದಾಗಿದೆ.

ಚೀನಾದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬಹುಬೇಗ ಸಾಕಷ್ಟು ದೇಶಗಳಿಗೆ ಹರಡಿತ್ತು. ಲಾಕ್‌ಡೌನ್ ನಿಂದಾಗಿ ಕಡಿಮೆಯಾಗಿದ್ದ ಸೋಂಕು, ಲಾಕ್‌ಡೌನ್ ತೆರವುಗೊಳಿಸಿದಾಗಿನಿಂದ ಮತ್ತೆ ಆರಂಭವಾಗಿವೆ.

ಅವಿವಾಹಿತ ಪುರುಷರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?

ಕಿಂಗ್‌ಡೋದಲ್ಲಿ ಭಾನುವಾರ ಆರು ಪ್ರಕರಣಗಳು ಪತ್ತೆಯಾಗಿದ್ದವು, ಹೀಗಾಗಿ ಪ್ರತಿಯೊಬ್ಬರಿಗೂ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ.ವಿಶ್ವದ ಇತರೆ ದೇಶಗಳಲ್ಲಿ ಸೋಂಕಿನ ಪರಿಣಾಮ ಇನ್ನೂ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಮೂರು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ತಪಾಸಣೆ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಎಷ್ಟು ಜನರಿಗೆ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಒಟ್ಟು 94 ಲಕ್ಷ ಜನಸಂಖ್ಯೆಯಿರುವ ಕಿಂಗ್‌ಡೋದಲ್ಲಿ ಭಾನುವಾರ ಆರು ಪ್ರಕರಣಗಳು ಪತ್ತೆಯಾಗಿದ್ದು, ಜನರನ್ನು ಆತಂಕ್ಕೀಡು ಮಾಡಿದೆ. ಆಹಾರ ಮಾರುಕಟ್ಟೆಗೆ ಸಂಬಂಧಿಸಿದಂತೆ ಪರೀಕ್ಷೆ ಮಾಡಿಸಿದಾಗ ಸುಮಾರು 20 ಮಿಲಿಯನ್‌ಗೂ ಅಧಿಕ ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

   ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada

   English summary
   China aims to test more than nine million residents of the port city of Qingdao within five days following a minor outbreak of the coronavirus, health officials said Monday, the first mass testing in months.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X