ಚೀನಾ ಜುಲೈನಲ್ಲಿಯೇ ಕೊರೊನಾ ಲಸಿಕೆ ಬಳಕೆ ಆರಂಭಿಸಿತ್ತು

ಬೀಜಿಂಗ್, ಆಗಸ್ಟ್ 24: ಚೀನಾದಲ್ಲಿ ಜುಲೈನಲ್ಲಿಯೇ ತುರ್ತು ಕೊರೊನಾ ಲಸಿಕೆಯನ್ನು ಬಳಕೆ ಮಾಡಲು ಆರಂಭಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

Recommended Video

      Suresh Raina ಪತ್ರ ಬರೆದ Modi... | Oneindia Kannada

      ದೇಶೀಯವಾಗಿ ಸಂಶೋಧಿಸುತ್ತಿರುವ ಕೆಲವು ಕೊರೊನಾ ಲಸಿಕೆಗಳನ್ನು ತುರ್ತು ಬಳಕೆ ಘೋಷಣೆಯಡಿ ನಾಗರಿಕರಿಗೆ ನೀಡುವುದಾಗಿ ಚೀನಾ ಹೇಳಿಕೆ ನೀಡಿತ್ತು.

      ಜುಲೈ 22ರಿಂದಲೇ ಕೊರೊನಾ ಲಸಿಕೆಯ ಬಳಕೆ ಆರಂಭಿಸಿತ್ತು. ಚೀನಾದ ಲಸಿಕೆ ನಿರ್ವಹಣಾ ಕಾನೂನನ್ನು ಆಧರಿಸಿದ ತುರ್ತು ಬಳಕೆಯ ಘೋಷಣೆಯಡಿ, ಸೀಮಿತ ಅವಧಿಯಲ್ಲಿ ಸೋಂಕಿಗೆ ತುತ್ತಾಗಿರುವ ಜನರು ಬಳಕೆ ಮಾಡಲು ಅನುಮತಿ ನೀಡಲಾಗಿದೆ.

      China Started Emergency Use Of COVID-19 Vaccine In July

      ಡಿಸೆಂಬರ್‌ನಲ್ಲಿ ಚೀನಾದ ಕೊರೊನಾ ಲಸಿಕೆ ತಯಾರಾಗಲಿದ್ದು, ಪ್ರತಿ ಲಸಿಕೆಗೆ 10 ಸಾವಿರ ರೂ ನೀಡಬೇಕಾಗುತ್ತದೆ. ಈ ತುರ್ತು ಲಸಿಕೆಯನ್ನು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ದೃಷ್ಟಿಯಿಂದ ನೀಡಲಾಗಿದೆ.

      ಕೆಲವು ಆಯ್ದ ದೇಶೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಗಳ ತುರ್ತು ಬಳಕೆಯನ್ನು ಚೀನಾ ಅಧಿಕೃತಗೊಳಿಸಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

      ಲಸಿಕೆ ನಿರ್ವಹಣೆಯ ಚೀನಾದ ಕಾನೂನಿನ ಪ್ರಕಾರ, ತೀವ್ರವಾದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಸಂಭವಿಸಿದಾಗ, ವೈದ್ಯಕೀಯ ಮತ್ತು ಸಾಂಕ್ರಾಮಿಕ ತಡೆಗಟ್ಟುವ ಸಿಬ್ಬಂದಿ, ಯೋಧರು ಹಾಗೂ ಸ್ಥಿರ ನಗರ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ಇತರ ಜನರನ್ನು ರಕ್ಷಿಸಲು ಕ್ಲಿನಿಕಲ್ ಪ್ರಯೋಗಗಳಲ್ಲಿನ ಲಸಿಕೆಗಳನ್ನು ಸೀಮಿತ ವ್ಯಾಪ್ತಿಯಲ್ಲಿ ಬಳಸಬಹುದು.

      ತುರ್ತು ಬಳಕೆಯನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆಯೆ ಮತ್ತು ಮೇಲ್ವಿಚಾರಣೆ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಮಿತಿ ಕೂಡ ರಚಿಸಲಾಗಿದ್ದು, ಪರಿಹಾರ ಯೋಜನೆಯೂ ಸೇರಿದಂತೆ ಹಲವಾರು ಪ್ಯಾಕೇಜ್‌ಗಳನ್ನೂ ಒಳಗೊಂಡ ತುರ್ತು ಬಳಕೆ ಘೋಷಣೆ ಮಾಡಲಾಗಿದೆ.

      ಈ ಕುರಿತು ಮಾಹಿತಿ ನೀಡಿರುವ ಚೀನಾದ ಕೊರೊನಾ ವೈರಸ್ ಅಭಿವೃದ್ಧಿ ಕಾರ್ಯಪಡೆ ಮುಖ್ಯಸ್ಥ ಜೆನ್ ಜಾಂಗ್‌ವೀ, ತುರ್ತು ಬಳಕೆ ಆದೇಶದನ್ವಯ ಕೇವಲ ಸೀಮಿತ ಸೋಂಕಿತರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+