ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

ಬೀಜಿಂಗ್, ಮೇ 11: ಮಾರಣಾಂತಿಕ ಕೊರೊನಾ ವೈರಸ್ ತವರೂರು ವುಹಾನ್ ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ವುಹಾನ್ ನಲ್ಲಿ ಕೊರೊನಾ ಆರ್ಭಟ ನಿಂತಿದೆ. ಅಲ್ಲಿ ಲಾಕ್ ಡೌನ್ ನಿಯಮಗಳು ಬಹುತೇಕ ಸಡಿಲಿಕೆಗೊಂಡಿದ್ದು, ಸಾರಿಗೆ ವ್ಯವಸ್ಥೆ ಆರಂಭಿಸಲಾಗಿದೆ.

ವುಹಾನ್ ನಲ್ಲಿನ ಶಾಲೆಗಳು ಕೂಡ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದವು. ಮೂರು ತಿಂಗಳಗಳ ಬಳಿಕ ಅಲ್ಲಿನ ವಿದ್ಯಾರ್ಥಿಗಳು ಬ್ಯಾಗ್ ತೊಟ್ಟು, ಕ್ಲಾಸ್ ರೂಮ್ ಗೆ ಹಾಜರ್ ಆದರು. ಅಲ್ಲಿಗೆ, ಕೋವಿಡ್-19 ಜನ್ಮಭೂಮಿ ವುಹಾನ್ ''ಕೊರೊನಾ ಮುಕ್ತ'' ಅಂತ ನಿಟ್ಟುಸಿರು ಬಿಡುವಾಗಲೇ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ಅದೇನಪ್ಪಾ ಅಂದ್ರೆ, ವುಹಾನ್ ನಲ್ಲಿ ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಲಾಕ್ ಡೌನ್ ಸಡಿಲಗೊಂಡ ಮೇಲೆ 'ಎರಡನೇ ಅಲೆ' ಆರಂಭವಾಗಿದ್ದು, ಕೆಲವು ಜನರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು

ವುಹಾನ್ ನಲ್ಲಿ ಐದು ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಎಲ್ಲಾ ಐದು ಕೇಸ್ ಗಳು ಒಂದೇ ರೆಸಿಡೆನ್ಷಿಯಲ್ ಕಾಂಪೌಂಡ್ ನಲ್ಲಿ ಕಂಡುಬಂದಿದೆ. ಹೊಸ ಸೋಂಕಿತರ ಪೈಕಿ ಯಾರಿಗೂ ರೋಗದ ಲಕ್ಷಣಗಳು ಕಾಣಿಸಿಲ್ಲ. ಆದರೆ, ಪರೀಕ್ಷೆಗೆ ಒಳಪಡಿಸಿದಾಗ, ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಇವರೆಲ್ಲ ಲೆಕ್ಕಕ್ಕಿಲ್ಲ.!

ಇವರೆಲ್ಲ ಲೆಕ್ಕಕ್ಕಿಲ್ಲ.!

ಹಾಗ್ನೋಡಿದ್ರೆ, ಚೀನಾದಲ್ಲಿ ರೋಗ ಲಕ್ಷಣ ಹೊಂದಿಲ್ಲದ (Asymptomatic) ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಅವರೆಲ್ಲರನ್ನೂ 'ಸೋಂಕಿತರು' ಎಂದು ಚೀನಾ ಸರ್ಕಾರ ಪರಿಗಣಿಸುತ್ತಿಲ್ಲ. ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ಎಂದು ಕಂಡುಬಂದವರನ್ನು ಮಾತ್ರ ಚೀನಾ ಸರ್ಕಾರ ಅಧಿಕೃತ ಪಟ್ಟಿಯಲ್ಲಿ ಸೇರಿಸುತ್ತಿದೆ.

ರೋಗ ಲಕ್ಷಣವಿಲ್ಲದ ಸೋಂಕಿತರ ಸಂಖ್ಯೆ ಲೆಕ್ಕಕ್ಕಿಲ್ಲ

ರೋಗ ಲಕ್ಷಣವಿಲ್ಲದ ಸೋಂಕಿತರ ಸಂಖ್ಯೆ ಲೆಕ್ಕಕ್ಕಿಲ್ಲ

ವುಹಾನ್ ನಲ್ಲಿ ನೂರಾರು ಸಂಖ್ಯೆ ರೋಗ ಲಕ್ಷಣವಿಲ್ಲದ ಸೋಂಕಿತರು ಇದ್ದರೂ, ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ. ಸದ್ಯದಲ್ಲೇ ಚೀನಾದಲ್ಲಿ ಚಿತ್ರಮಂದಿರ, ಮ್ಯೂಸಿಯಂ ಮತ್ತು ಇತರೆ ಮನರಂಜನಾ ತಾಣಗಳೂ ಕೂಡ ತೆರೆಯಲಿದೆ. ಶಾಂಘೈ ನಲ್ಲಿ ಈಗಾಗಲೇ ಡಿಸ್ಕೋಥೆಕ್ ಓಪನ್ ಆಗಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.

ಚೀನಾ ಸರ್ಕಾರ ಲೆಕ್ಕ

ಚೀನಾ ಸರ್ಕಾರ ಲೆಕ್ಕ

ಚೀನಾದ ತೋರಿಸಿರುವ ಲೆಕ್ಕದ ಪ್ರಕಾರ, ಇಲ್ಲಿಯವರೆಗೂ 82,918 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 4,633 ಮಂದಿ ಸಾವನಪ್ಪಿದ್ದಾರೆ. ಸದ್ಯ ಚೀನಾದಲ್ಲಿ 9 ಮಂದಿಯ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ 42,15,274 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ 284,672 ಜನ ಮೃತಪಟ್ಟಿದ್ದು, 15,06,231 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 47,066 ಜನರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+