ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ವೆಬ್ ತಾಣಗಳ ಕ್ಲೀನ್ ಮಾಡಿದ ಚೀನಾ

By Mahesh
|
Google Oneindia Kannada News

ಬೀಜಿಂಗ್,ಜೂ. 04: ಚೀನಾದಲ್ಲಿ ಈಗ ಆನ್'ಲೈನ್ ಸ್ವಚ್ಛತಾ ಆಂದೋಲನ ಆರಂಭವಾಗಿದೆ. ಅಂತರ್ಜಾಲದಲ್ಲಿ ಕಂಡು ಬರುವ ನಿಯಮಬಾಹಿರ ಅಶ್ಲೀಲ ವೆಬ್ ತಾಣಗಳನ್ನು ಒಂದೊಂದಾಗಿ ಮುಚ್ಚುವ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ಸರಿ ಸುಮಾರು 422ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿದೆ.

ಶ್ಲೀಲ ದೃಶ್ಯ, ಸಾಹಿತ್ಯ ಪ್ರಕಟಿಸುವ ಎಲ್ಲಾ ರೀತಿಯ ಅಂತರ್ಜಾಲ ತಾಣಗಳ ಹಾಗೂ ಪುಟಗಳ ಮೇಲೆ ಚೀನಾ ಸರ್ಕಾರ ಕಠಿಣ ಕಾರ್ಯಾಚರಣೆ ನಡೆಸಿ ಮುಟ್ಟುಗೋಲು ಹಾಕಿದೆ. ಆನ್ ಲೈನ್ ನಲ್ಲಿ ಬ್ಲೂಫಿಲಂಗಳನ್ನ, ಅಶ್ಲೀಲ ವಿಡಿಯೋಗಳನ್ನ ಪ್ರಸಾರ ಮಾಡುತ್ತಿದ್ದ 422 ವೆಬ್ ಸೈಟ್'ಗಳನ್ನ ಮುಚ್ಚಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

China cracks the whip, punishes 422 porn websites

Cleaning the Web 2014 ಎಂಬ ಹೆಸರಿನಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಾದ ವೀಚ್ಯಾಟ್, ವೇಬೋ, ಆನ್ ಲೈನ್ ಫೋರಮ್ ಗಳು, ಬ್ಲಾಗ್ ಗಳು ಹೀಗೆ ವಿವಿಧ ಶೇರಿಂಗ್ ತಾಣಗಳಲ್ಲಿ ಅಶ್ಲೀಲ ವಿಚಾರಗಳನ್ನ ಹರಡುತ್ತಿದ್ದ 4,800 ಅಕೌಂಟ್ ಗಳನ್ನ ಕಿತ್ತುಹಾಕಲಾಗಿದೆ. ಅಷ್ಟೇ ಅಲ್ಲ, 9 ಸಾವಿರ ಅಶ್ಲೀಲ ಜಾಹೀರಾತುಗಳು ಹಾಗೂ 3 ಲಕ್ಷ ಅಶ್ಲೀಲ ಬರಹಗಳನ್ನ ಆನ್ ಲೈನ್ ನಿಂದ ಡಿಲೀಟ್ ಮಾಡಲಾಗಿದೆ.

ಸುಮಾರು 9,000 ಜಾಹೀರಾತುಗಳು ಹಾಗೂ 300,000 ಲೇಖನಗಳನ್ನು ಆಕ್ಷೇಪಾರ್ಹ ಎಂದು ಡಿಲೀಟ್ ಮಾಡಲಾಗಿದೆ. ಕಳೆದ ಏಪ್ರಿಲ್ ನಿಂದ ನವೆಂಬರ್ ತನಕ ಈ ಅಭಿಯಾನ ನಡೆದಿದ್ದು, ಇನ್ನೂ ಮುಂದುವರೆಯುವ ಲಕ್ಷಣಗಳು ಕಂಡು ಬಂದಿವೆ. ಸರ್ಕಾರದ ಕ್ರಮದಿಂದ ತ್ವರಿತವಾಗಿ ದುಡ್ಡು ಗಳಿಕೆ ವಿಧಾನ ಕಂಡುಕೊಂಡಿದ್ದ ವೆಬ್ ಮಾಲೀಕರು ಸಹಜವಾಗಿ ಚಿಂತೆಗೀಡಾಗಿದ್ದಾರೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ, ಸ್ಫೋಟಕ, ವಿಷಕಾರಿ ರಾಸಾಯನಿಕ, ಎಲೆಕ್ಟ್ರಾನಿಕ್ ಸಾಧನಗಳು, ಉನ್ನತ ತಂತ್ರಜ್ಞಾನವುಳ್ಳ ಮೊಬೈಲ್ ಗಳಲ್ಲದೆ ಪ್ರಮುಖ ವ್ಯಕ್ತಿಗಳ ಮಾಹಿತಿಗಳು ಕೂಡಾ ಅತ್ಯಧಿಕ ಮೊತ್ತಕ್ಕೆ ಬಿಕರಿ ಮಾಡುವ ವೆಬ್ ತಾಣಗಳು, ಪೋರ್ನ್ ತಾಣಗಳು, ವೆಬ್ ಫೋರಮ್ ಗಳನ್ನು ಚೀನಾ ಕಾಲದಿಂದ ಕಾಲಕ್ಕೆ ಮುಚ್ಚುತ್ತಾ ಬರುತ್ತದೆ.

2012ರಲ್ಲಿ ಚೀನಾ ಐಟಿ ಸಚಿವಾಲಯದ ಆದೇಶದ ಮೇರೆಗೆ ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಸುಮಾರು 8,000 ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಿತ್ತು. ಇದಲ್ಲದೆ ರಾಜಕೀಯ ಸೆನ್ಸಾರ್ ಷಿಪ್ ಕೂಡಾ ಚೀನಾದಲ್ಲಿ ಜಾರಿಯಲ್ಲಿದ್ದು ಇತ್ತೀಚೆಗೆ ಕೆಲದಿನಗಳ ಮಟ್ಟಿಗೆ ಗೂಗಲ್ ಸರ್ಚ್ ಇಂಜಿನ್ ಗೆ ಪರದೆ ಏಳೆಯಲಾಗಿತ್ತು.(ಐಎಎನ್ಎಸ್)

English summary
China has punished 422 websites as part of a national crackdown on online pornography, the State Internet Information Office said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X