Trump Tariffs: ಗುರೂ ತಗ್ಗೋದೆ ಇಲ್ಲ... ಅಂತಾ ಡೊನಾಲ್ಡ್ ಟ್ರಂಪ್‌ಗೆ ಆವಾಜ್ ಹಾಕಿದ ಚೀನಾ!
ಚೀನಾ & ಅಮೆರಿಕ ಜಗಳ ಒಂದು ರೀತಿ ಜಿಟಿಜಿಟಿ ಮಳೆಯಂತೆ ಗಟ್ಟಿಯಾಗಿ ಹಿಡಿದು ಕೂತಿದೆ. ಜಗತ್ತಿನ ನಂ. 1 ಆರ್ಥಿಕತೆ ಹೊಂದಿರುವ ಅಮೆರಿಕ ಜೊತೆಗೆ ಜಗತ್ತಿನ ನಂ. 2 ಆರ್ಥಿಕತೆಯನ್ನು ಹೊಂದಿರುವ ದೇಶ ಚೀನಾ ಪೈಪೋಟಿಗೆ ಬಿದ್ದಿದೆ. ಇಬ್ಬರ ನಡುವೆ ಶುರುವಾಗಿರುವ ತಿಕ್ಕಾಟ ಇದೀಗ ದಿಕ್ಕುತಪ್ಪಿ ಹೋಗಿದೆ. ಒಂದು ಕಡೆ ಚೀನಾ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರಿ ದೊಡ್ಡ ಪ್ರಮಾಣದ ತೆರಿಗೆ ವಿಧಿಸಿದ್ದು, ಇದಕ್ಕೆ ರಿವೇಂಜ್ ಎನ್ನುವಂತೆ ಚೀನಾ ಕೂಡ ಅಮೆರಿಕ ರಫ್ತು ಮಾಡುವ ವಸ್ತುಗಳ ಮೇಲೆ ಇನ್ನಷ್ಟು ಹೆಚ್ಚಿನ ಟ್ಯಾಕ್ಸ್ ಹಾಕಲು ಮುಂದಾಗಿತ್ತು.
ಚೀನಾ ಹೀಗೆ ಅಮೆರಿಕ ವಿರುದ್ಧ ಕೈಗೊಂಡ ನಿರ್ಧಾರ ಕಿಚ್ಚು ಹೊತ್ತಿಸಿದ್ದು, ಡೊನಾಲ್ಡ್ ಟ್ರಂಪ್ ಅವರು ಮತ್ತೆ ವಾರ್ನಿಂಗ್ ಕೊಟ್ಟಿದ್ದಾರೆ. ಚೀನಾ ವಿರುದ್ಧ ಬರೋಬ್ಬರಿ ಶೇಕಡಾ 50 ರಷ್ಟು ತೆರಿಗೆ ಹಾಕುವ ಎಚ್ಚರಿಕೆ ಸಂದೇಶವನ್ನ ರವಾನಿಸಿದ್ದರು. ಈ ಮೂಲಕ ಪರೋಕ್ಷವಾಗಿ ಚೀನಾ ವಿರುದ್ಧ ತೆರಿಗೆ ಯುದ್ಧ ಸಾರಿದ್ದರು ಡೊನಾಲ್ಡ್ ಟ್ರಂಪ್ ಅವರು. ಇಂತಹ ಪರಿಸ್ಥಿತಿಯಲ್ಲೇ, ಚೀನಾ ಖಡಕ್ ಆಗಿ ತಿರುಗೇಟು ನೀಡಿ ಟ್ರಂಪ್ ವಿರುದ್ಧ ಆವಾಜ್ ಹಾಕಿದೆ. ಗುರೂ ತಗ್ಗೋದೆ ಇಲ್ಲ... ಅನ್ನೋ ಖಡಕ್ ಮೆಸೇಜ್ ರವಾನೆ ಮಾಡಿದೆ ಚೀನಾ!

ಟ್ರಂಪ್ ವಿರುದ್ಧ ನಿಂತ ಚೀನಾ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುವ & ಎಂತಹ ಖಡಕ್ ನಿರ್ಧಾರವನ್ನು ಕೂಡ ಸುಲಭವಾಗಿ ತೆಗೆದುಕೊಳ್ಳುವ ಶಕ್ತಿ ಇರುವ ಅಧ್ಯಕ್ಷ ಎಂಬ ಬಿರುದು ಪಡೆದಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ನಿಂತು, ಡೊನಾಲ್ಡ್ ಟ್ರಂಪ್ ವಿರುದ್ಧ ತೊಡೆತಟ್ಟಿ ನಿಲ್ಲುವ ಶಕ್ತಿ ಚೀನಾಗೆ ಇದೆ.
ಈ ಹಿಂದೆಯೂ ಕೂಡ ಹಲವು ವಿಚಾರದಲ್ಲಿ ಟ್ರಂಪ್‌ರ ವಿರುದ್ಧ ತೊಡೆತಟ್ಟಿ ನಿಂತಿದ್ದ ಚೀನಾ ಇದೀಗ ಮತ್ತೊಮ್ಮೆ ತೆರಿಗೆ ವಿಚಾರದಲ್ಲಿ ಕೂಡ ಇದೇ ಟ್ರಂಪ್‌ಗೆ ವಾರ್ನಿಂಗ್ ಕೊಟ್ಟಿದೆ. ಏನೇ ನಡೆದರೂ, ನೀವು ಏನೇ ಮಾಡಿದರೂ ನಾವು ತಗ್ಗೋದೆ ಇಲ್ಲ ಅಂತಿದೆ ಚೀನಾ. ಆದರೆ ಈ ರೀತಿಯಾಗಿ ಇಬ್ಬರೂ ಫೈಟಿಂಗ್ ಮಾಡುತ್ತಿರುವುದು ಈಗ ಜಾಗತಿಕ ಆರ್ಥಿಕ ವ್ಯವಸ್ಥೆಗೆ ದೊಡ್ಡ ಬೆದರಿಕೆ ತಂದೊಡ್ಡಿದೆ.












Click it and Unblock the Notifications