ಚೀನಾದಲ್ಲಿ ಶುರುವಾಯ್ತು ಭಯ.. ಮತ್ತೊಂದು ಕೊರೊನಾ ಅಲೆ ಫಿಕ್ಸ್!

ಬೀಜಿಂಗ್: ಜಗತ್ತಿಗೇ ಕೊರೊನಾ ವೈರಸ್ ಉಡುಗೊರೆಯಾಗಿ ನೀಡಿದ್ದ ಚೀನಾ ಈಗ ಮತ್ತೊಂದು ಕೊರೊನಾ ಅಲೆ ಬಲೆಯಲ್ಲಿ ಸಿಲುಕೋದು ಬಹುತೇಕ ಗ್ಯಾರಂಟಿ ಆಗಿದೆ. ಚೀನಾದಲ್ಲಿ ಕೊರೊನಾ ಸೋಂಕಿನ ಆರ್ಭಟ ತೀವ್ರವಾಗಿದ್ದು, ಇದೇ ಹೊತ್ತಲ್ಲಿ ಮತ್ತೊಮ್ಮೆ ಚೀನಾ ಸರ್ಕಾರ ಲಾಕ್‌ಡೌನ್ ಹೇರುತ್ತಾ? ಎಂಬ ಭಯ ಚೀನಿಯರಲ್ಲಿ ಶುರುವಾಗಿದ್ದು, ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

ಅದು 17 ನವೆಂಬರ್ 2019, ಯಾರಿಗೂ ತಿಳಿಯದ ವೈರಸ್ ಒಂದು ಚೀನಾದಲ್ಲಿ ಕಂಡುಬಂದಿತ್ತು. ಚೀನಾದ ವುಹಾನ್ ಜನರ ಮೇಲೆ ಮೊದಲು ದಾಳಿ ಮಾಡಿದ್ದ ಕೊರೊನಾ (Covid) ನಂತರ ಜಗತ್ತಿಗೇ ಹರಡಿತ್ತು. ವುಹಾನ್ ಪ್ರಾಂತ್ಯದಲ್ಲಿ ಸಂಶಯಾಸ್ಪದ ವೈರಸ್ ಕಂಡ ಕೂಡಲೇ ಚೀನಾ ಲಾಕ್‌ಡೌನ್ ಹೇರಿ, ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿತ್ತು. ಆದರೆ ಅದ್ಯಾವುದೂ ವರ್ಕ್ ಆಗಲಿಲ್ಲ. ನೋಡ ನೋಡುತ್ತಲೇ ಜಗತ್ತಿಗೇ ವ್ಯಾಪಿಸಿದ ಕೊರೊನಾ ಸೋಂಕು, ಈವರೆಗೂ 68 ಲಕ್ಷಕ್ಕೂ ಹೆಚ್ಚು ಜನರನ್ನ ಬಲಿಪಡೆದಿದೆ. ಇಷ್ಟಾದರೂ ಚೀನಾದಲ್ಲಿ ಆತಂಕ ದೂರವಾಗಿಲ್ಲ.

China may not lockdown this time

ಲಾಕ್ ಆಗುತ್ತಾ ಡ್ರ್ಯಾಗನ್ ಚೀನಾ?

ಹೌದು, ಈ ಭಯ ಶತಕೋಟಿ ಚೀನಿಯರನ್ನ ಕಾಡುತ್ತಿದೆ. ಏಕೆಂದರೆ ಚೀನಾದಲ್ಲಿ ದಿಢೀರ್ ಸೋಂಕು ಉಲ್ಬಣವಾಗಿದ್ದು, ಭಯದಲ್ಲೇ ದಿನದೂಡುವ ಸ್ಥಿತಿ ಬಂದಿದೆ. ಚೀನಾ ಕೊರೊನಾ ಸೋಂಕಿನ ದೊಡ್ಡ ಅಪಾಯ ಎದುರಿಸುತ್ತಿದೆ ಎಂದು ಇತ್ತೀಚೆಗೆ ಆರೋಗ್ಯ ತಜ್ಞರು ಹೇಳಿದ್ದರು. ಜೂನ್ ಕೊನೇ ವಾರಕ್ಕೆ ಚೀನಾದಲ್ಲಿ 65 ಮಿಲಿಯನ್ ಮಂದಿಗೆ ಸೋಂಕು ಹರಡುವ ಅಂದ್ರೆ 6.5 ಕೋಟಿ ಸೋಂಕಿತರು ಪತ್ತೆಯಾಗುವ ಬಗ್ಗೆ ಎಚ್ಚರಿಸಲಾಗಿತ್ತು. ಹೀಗಾಗಿ ಚೀನಾದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತಾ? ಎಂಬ ಚಿಂತೆ ಚೀನಿಯರನ್ನೇ ಕಾಡುತ್ತಿದೆ. ಆದರೆ ತಜ್ಞರು ಲಾಕ್‌ಡೌನ್ ಆಗಲ್ಲ ಅಂತಿದ್ದಾರೆ.

ಚೀನಾದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲ ಏಕೆ?

ಅಷ್ಟಕ್ಕೂ ಈ ಬಾರಿ ಎಂತಹದ್ದೇ ಸಮಸ್ಯೆ ಬಂದರೂ ಮತ್ತೊಮ್ಮೆ ಲಾಕ್‌ಡೌನ್ ಮಾಡಬಾರದು ಅಂತಾ ಚೀನಾ ನಿರ್ಧರಿಸಿದೆ. ಇದೇ ಕಾರಣಕ್ಕೆ ಲಾಕ್‌ಡೌನ್ ಮಾಡಲು ಚೀನಾದ ಕಮ್ಯುನಿಸ್ಟ್ ಸರ್ಕಾರ ಮುಂದಾಗಿಲ್ಲ. ಕಳೆದ ವರ್ಷ ಡಿಸೆಂಬರ್ ವೇಳೆಗೆ ಇದೇ ರೀತಿ ಕೊರೊನಾ ಕೇಸ್ ಹೆಚ್ಚಾದ ಸಂದರ್ಭದಲ್ಲಿ ಲಾಕ್‌ಡೌನ್‌ ಮಾಡಲು ಜಿನ್‌ಪಿಂಗ್ ಸರ್ಕಾರ ಮುಂದಾಗಿತ್ತು. ಆದರೆ ಜನರು ರೊಚ್ಚಿಗೆದ್ದ ನಂತರ ಆ ನಿರ್ಧಾರವನ್ನ ಕೈಬಿಡಲಾಗಿತ್ತು. ಈಗ ಕೂಡ ಜನರ ಆಕ್ರೋಶ ಭುಗಿಲೇಳುವ ಭಯಕ್ಕೆ ಲಾಕ್‌ಡೌನ್ ಮಾಡುವುದು ಬೇಡ ಎಂಬ ನಿರ್ಧಾರದಲ್ಲಿದೆ ಅಂತೆ ಚೀನಾ ಸರ್ಕಾರ.

China may not lockdown this time

ತುರ್ತು ಪರಿಸ್ಥಿತಿ ಮುಗಿದರೂ ಕಾಡುವ ಸೋಂಕು

'ವಿಶ್ವ ಆರೋಗ್ಯ ಸಂಸ್ಥೆ' ಇದೇ ತಿಂಗಳ ಆರಂಭದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯಗೊಳಿಸಿ ಘೋಷಣೆ ಹೊರಡಿಸಿತ್ತು. ಆದರೆ ಕೊರೊನಾ ವೈರಸ್ ಸಂಪೂರ್ಣವಾಗಿ ತೊಲಗಿಲ್ಲ ಎಂಬುದರ ಬಗ್ಗೆಯೂ ಎಚ್ಚರಿಕೆ ನೀಡಿತ್ತು. ಹೀಗಾಗಿ ಈಗಲೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೊರೊನಾ ವೈರಾಣು ಇನ್ನೂ ಹಲವು ವರ್ಷಗಳ ಕಾಲ ಮನುಷ್ಯರ ನಡುವೆ ಇರುವುದು ಪಕ್ಕಾ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕೆ ತಾಜಾ ಉದಾಹರಣೆ ಎಂದರೆ ಚೀನಾ ಪರಿಸ್ಥಿತಿ. ಕೆಲವೇ ತಿಂಗಳ ಅಂತರದಲ್ಲಿ ಎರಡು ಬಾರಿ ಕೊರೊನಾ ಸೋಂಕಿನ ಭೀಕರ ಅಲೆಗಳನ್ನ ಕಂಡಿದೆ ಚೀನಾ.

ವಿಶ್ವದ ದೊಡ್ಡಣ್ಣನ ಬಾಳು ಬೀದಿಗೆ ಬಿತ್ತು!

ಅಮೆರಿಕದ ಆಧುನಿಕ ಅಧ್ಯಾಯದಲ್ಲಿ ಕೊರೊನಾ ಬರೋದಕ್ಕೂ ಮೊದಲು ಒಂದು ಲೆಕ್ಕ. ಕೊರೊನಾ ನಂತರ ಮತ್ತೊಂದು ಲೆಕ್ಕ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಕೊರೊನಾ ವೈರಸ್ ಕೊಟ್ಟ ಪೆಟ್ಟು ಹಂಗಿತ್ತು. ಆರ್ಥಿಕವಾಗಿ & ಸಾಮಾಜಿಕವಾಗಿ ಇದೆಲ್ಲವನ್ನೂ ಮೀರಿ ಜೀವ ಉಳಿಸಿಕೊಂಡರೆ ಸಾಕಪ್ಪಾ ಅನ್ನುವಂತಹ ಪರಿಸ್ಥಿತಿ ಅಮೆರಿಕದಲ್ಲಿ ನಿರ್ಮಾಣ ಆಗಿತ್ತು. ಆದರೆ ಈಗ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದೆ, ಅಮೆರಿಕದಲ್ಲಿ ಕಡ್ಡಾಯ ಕೊರೊನಾ ಲಸಿಕೆ ನೀತಿ ಅಂತ್ಯವಾಗಿ, ಕೊರೊನಾ ತುರ್ತು ಪರಿಸ್ಥಿತಿ ಹಿಂಪಡೆಯಲಾಗಿದೆ. ಆದರೆ ಚೀನಾ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.

China may not lockdown this time

ಒಟ್ನಲ್ಲಿ ಮನುಷ್ಯನ ಬದುಕಿನಲ್ಲಿ ಬಹುದೊಡ್ಡ ಆಟ ಆಡಿದ ಕೊರೊನಾ ವೈರಸ್ ಈಗಲೂ ಜೀವಂತವಾಗಿದೆ. ವ್ಯಾಕ್ಸಿನ್, ಮಾಸ್ಕ್ ಹೀಗೆ ಏನೇನೋ ಮುನ್ನೆಚ್ಚರಿಕೆ ತೆಗೆದುಕೊಂಡರೂ ಉಪಯೋಗಕ್ಕೆ ಬರಲೇ ಇಲ್ಲ. ಅದರಲ್ಲೂ 3 ವರ್ಷ ಕಳೆದರೂ ಚೀನಾದಲ್ಲಿ ವೈರಸ್ ಹಿಡಿತಕ್ಕೆ ಸಿಗದೇ ಇರುವುದು ವಿಪರ್ಯಾಸ. ಹೀಗಾಗಿ ಕೋವಿಡ್ ವೈರಾಣು ನಿಯಂತ್ರಣಕ್ಕೆ ಚೀನಾ ಹಲವು ಕ್ರಮಗಳನ್ನ ಕೈಗೊಂಡಿದ್ದು, ಇದ್ಯಾವುದೂ ಕೆಲಸಕ್ಕೆ ಬರುತ್ತಿಲ್ಲ. ಆದರೆ ಈಗ ಲಾಕ್‌ಡೌನ್ ಮಾಡುವ ಪರಿಸ್ಥಿತಿಯಲ್ಲಿ ಚೀನಾ ಇಲ್ಲ, ಇದು ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+