ರಷ್ಯಾಗೆ ಯುದ್ಧೋಪಕರಣ ಒದಗಿಸಲಿರುವ ಚೀನಾ 'ವಿಶ್ವಾಸಾರ್ಹ': CIA ನಿರ್ದೇಶಕ
ಉಕ್ರೇನ್ ವಿರುದ್ಧದ ಮಾಸ್ಕೋದ ಯುದ್ಧವನ್ನು ಬೆಂಬಲಿಸಲು ಉದ್ದೇಶದಿಂದ ಚೀನಾ ದೇಶವು ರಷ್ಯಾ ದೇಶಕ್ಕೆ ಯುದ್ಧೋಪಕರಣ/ ಸಾಧನಗಳನ್ನು ಒದಗಿಸುವುದನ್ನು ಅಮೆರಿಕಾ (US) ವಿಶ್ವಾಸಾರ್ಹವಾದದ್ದು ಎಂದು ಬಣ್ಣಿಸಿದೆ.
ಬೆಂಗಳೂರು, ಫೆಬ್ರವರಿ 26: ಉಕ್ರೇನ್ ವಿರುದ್ಧದ ಮಾಸ್ಕೋದ ಯುದ್ಧವನ್ನು ಬೆಂಬಲಿಸಲು ಉದ್ದೇಶದಿಂದ ಚೀನಾ ದೇಶವು ರಷ್ಯಾ ದೇಶಕ್ಕೆ ಯುದ್ಧೋಪಕರಣ/ ಸಾಧನಗಳನ್ನು ಒದಗಿಸುವುದನ್ನು ಅಮೆರಿಕಾ (US) ವಿಶ್ವಾಸಾರ್ಹವಾದದ್ದು ಎಂದು ತಿಳಿಸಿದೆ.
ಈ ಕುರಿತು ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಅವರು, ಭಾನುವಾರ ನೀಡಿದ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ಎರಡು ದೇಶಗಳ ನಡುವೆ ಯುದ್ಧದ ಸಲಕರಣೆ ಬಗ್ಗೆ ಒಮ್ಮತ ಇರುವ ಬಗ್ಗೆ CBS "ಫೇಸ್ ದಿ ನೇಷನ್" ಹೋಸ್ಟ್ ಅವರು ಪ್ರಶ್ನೆಯೊಂದನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಅವರು, ಚೀನಾ ದೇಶದ ಅದ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮನಸ್ಸನ್ನು ಈ ನಿರ್ಧಾರ ಬದಲಾಯಿಸಬಹುದು ಎಂದು ವಿಲಿಯಂ ಅಭಿಪ್ರಾಯಪಟ್ಟರು.

ಚೀನಾದ ನಾಯಕತ್ವವು ಮಾರಣಾಂತಿಕ, ಅತ್ಯಂತ ಪ್ರಬಲ ಯುದ್ಧೋಪಕರಣ ಒದಗಿಸಲಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ರಷ್ಯಾ ದೇಶಕ್ಕೆ ಮಾರಣಾಂತಿಕ ಉಪಕರಣಗಳ ಒದಗಿಸುವುದರ ಬಗ್ಗೆ ಪುರಾವೆಗಳ ಬಗೆಗೆ ನಾವು (ಅಮೆರಿಕಾ) ಗಮನ ಹರಿಸುವುದಿಲ್ಲ. ಈ ಬಗ್ಗೆ ಎರಡು ದೇಶಗಳ ಅಧ್ಯಕ್ಷರಿಂದ ಸ್ಪಷ್ಟ ಉತ್ತರ ಬಂದಿಲ್ಲ ಎಂಬುದಾಗಿ ಅವರು ಸಂದರ್ಶನದಲ್ಲಿ ತಿಳಿಸಿದರು.
ಚೀನಾ ರಷ್ಯಾಗೆ ಯುದ್ಧ ಸಲಕರಣೆ ನೀಡಲು ಒಪ್ಪಿದರೆ ಅದನ್ನು ತಡೆಯಲು ಆಗದ. ಆದರೆ ಈ ನೀರ್ಣಯದ ನಂತರ ಒಂದಷ್ಟು ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಿನ ಸಂದರ್ಭದಲ್ಲಿ ನೋಡುವುದಾದರೆ ಇದು ಅಪಾಯಕಾರಿ ಎಂದು ಅವರು ತಿಳಿಸಿದರು.












Click it and Unblock the Notifications