ಗಡಿ ಸಂಘರ್ಷದ ನಡುವೆಯೂ ಭಾರತದಿಂದ ಚೀನಾಗೆ ಪಿವಿಸಿ ರಫ್ತು ಅಧಿಕ

ನವದೆಹಲಿ, ಜುಲೈ 30: ಒಂದೆಡೆ ಚೀನಾ ಹಾಗೂ ಭಾರತದ ನಡುವೆ ಗಡಿ ಸಂಘರ್ಷ ಏರ್ಪಟ್ಟಿದೆ. ಮತ್ತೊಂದೆಡೆ ಭಾರತ ಹಂತ ಹಂತವಾಗಿ ಚೀನಾದ ಅಪ್ಲಿಕೇಷನ್‌ಗಳನ್ನು ರದ್ದುಗೊಳಿಸುತ್ತಿದೆ.

ಆದರೆ ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಕಡಿಮೆ ಮಾಡುವ ಕರೆಗಳ ನಡುವೆಯೂ ಭಾರತದಿಂದ ಚೀನಾಗೆ ರಫ್ತಾಗುತ್ತಿದ್ದ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ)ಗಳ ಪ್ರಮಾಣ ದಾಖಲೆಯ ಏರಿಕೆ ಕಂಡಿದೆ.

ಕೋವಿಡ್-19 ಲಾಕ್ ಡೌನ್ ಅವಧಲ್ಲಿ ಪಿವಿಸಿ ರಫ್ತನ್ನು ಉತ್ತೇಜಿಸಿತ್ತು. ಆದರೆ ಜೂನ್ ತಿಂಗಳಲ್ಲಿ ಈಶಾನ್ಯ ಲಡಾಖ್ ನಲ್ಲಿ ಚೀನಾ ಭಾರತೀಯ ಯೋಧರ ಹತ್ಯೆ ಘಟನೆಯ ಬಳಿಕ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ-ವಹಿವಾಟು ಸಂಬಂಧ ಹದಗೆಟ್ಟಿತ್ತು.

INDIA-CHINA FLAG

ಆದಾಗ್ಯೂ ಮೇ ತಿಂಗಳಲ್ಲಿ ಚೀನಾಗೆ ರಫ್ತಾದ ಪಿವಿಸಿಗಿಂತ 5 ಪಟ್ಟು ಹೆಚ್ಚು ಪಿವಿಸಿ ಜೂನ್ ತಿಂಗಳಲ್ಲಿ ರಫ್ತಾಗಿದೆ ಎಂದು ಗ್ಲೋಬಲ್ ರಬ್ಬರ್ ಮಾರುಕಟ್ಟೆ ವರದಿ ಪ್ರಕಟಿಸಿದೆ.

ಇದು ಅತ್ಯಂತ ಅಪರೂಪದ ಬೆಳವಣಿಗೆ, ಲಾಕ್ ಡೌನ್ ಅವಧಿಯಲ್ಲಿ ಭಾರತದ ಪಿವಿಸಿ ಬೇಡಿಕೆ ಇಳಿದಿತ್ತು. ಪೂರೈಕೆದಾರರು ತಮ್ಮ ಸರಕುಗಳನ್ನು ಚೀನಾಗೆ ಕಳಿಸಬೇಕಾಯಿತು ಎಂದು ವರದಿ ಪ್ರಕಟಿಸಿದೆ.

ಭಾರತ ಸರ್ಕಾರ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸರಕುಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿ, ಚೀನಾ ಆಪ್ ಗಳಿಗೆ ನಿಷೇಧ ವಿಧಿಸಿದ್ದ ಸಂದರ್ಭದಲ್ಲೇ ಚೀನಾಗೆ ಭಾರತದ ಪಿವಿಸಿ ರಫ್ತು ಪ್ರಮಾಣ ಏರಿಕೆ ಕಂಡಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಚೀನಾವು ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಿತ್ತು. ಬಳಿಕ ಏಕಾಏಕಿ ಏರಿಕೆಯನ್ನು ದಾಖಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+