ಹುಳಹುಪ್ಪಟ ತಿನ್ನೋ ಚೀನೀಯರಿಗೆ ಈಗ ಬಾಧೆ ಶುರುವಾಗಿದೆ
ಬೀಜಿಂಗ್, ಅ.8: ರಾಜಾ ಮೌಳಿ ನಿರ್ದೇಶನದ 'ಈಗ' ಚಿತ್ರ ನೋಡಿದವರು 'ಅದೆಲ್ಲಾ ಸುಳ್ಳೇ ಸುಳ್ಳು. ಸದ್ಯ 'ಈಗ' ನಮಗೆ ಹಾಗೆಲ್ಲ ಕಾಟ ಕೊಡೋಲ್ಲ' ಎಂದೆಲ್ಲ ಸಮಾಧಾನಪಟ್ಟುಕೊಂಡಿದ್ದರು. ಆದರೆ ಈಗ ನೆರೆಯ ಚೀನಾದಲ್ಲಿ ನಿಜವಾದ 'ಈಗ' ಎಬ್ಬಿಸಿರುವ ಅಲ್ಲೋಲಕಲ್ಲೋಲ ನೋಡಿದರೆ ಬೆಚ್ಚಿಬೀಳುವುದು ಖಚಿತ.
ಏನಪ್ಪಾ ಅಂದರೆ ಅಕ್ಷರಶಃ ರಾಜಾ ಮೌಳಿಯ 'ಈಗ' ಮಾದರಿಯಲ್ಲೇ ಚೀನಾದಲ್ಲಿ ಮುಖ್ಯವಾಗಿ ನಾಲ್ಕು ಪ್ರಾಂತ್ಯಗಳಲ್ಲಿ ಭಯಾನಕ ನೊಣವೊಂದು ದಾಂಗುಡಿಯಿಟ್ಟಿದೆ. Giant Asian Hornets ಎಂಬ ಈ ಕಣಜ ನಮ್ಮಲ್ಲಿನ ಹೆಜ್ಜೇನು ಥರ ಕಾಣುತ್ತದೆ. ಚಿತ್ರದಲ್ಲಿ ಅದು ದುರುಗುಟ್ಟುತ್ತಿರುವುದನ್ನು ನೋಡಿದರೇನೇ ನಮಗೆ ಅದೂ-ಇದೂ ಆಗುತ್ತದೆ. ಅಂಥದ್ದರಲ್ಲಿ Giant Asian Hornetಗಳು ಒಂದೆರಡು ತಿಂಗಳಿಂದ ಚೀನೀಯರನ್ನು ಗೋಳುಹೊಯ್ದುಕೊಳ್ಳುತ್ತಿದ್ದು, ಈಗಾಗಲೇ 50ಕ್ಕೂ ಹೆಚ್ಚು ಮಂದಿಯನ್ನು ಸ್ವಾಹಾ ಅಂದಿದೆ.
ಹುಳ ಹುಪ್ಪಟಗಳನ್ನು ತಿಂದು ಬದುಕುವ ಚೀನೀಗಳಿಗೆ ಇದು ಯಾವ ಮಹಾ? 'ಈಗ' ಭಯ ಯಾತರದ್ದು ಅನ್ನಬೇಡಿ. ನಿಜಕ್ಕೂ ಇಡೀ ಚೀನಾ ಥರಗುಟ್ಟುತ್ತಿದೆ. ಅಷ್ಟೇ ಅಲ್ಲ ಅದು ನಮ್ಮಲ್ಲಿಗೂ ಬಂದರೆ ಗತಿ ಏನಪ್ಪಾ ಎಂಬ ಆತಂಕ ಭಾರತೀಯರಿಗೂ ಕಾಡುತ್ತಿದೆ. ಹಾಗಾಗುವುದು ಬೇಡ. ಚೀನಾ ಮಹಾಗೋಡೆ 'ಈಗ'ಗೆ ಅಲ್ಲಿಯೇ ತಡೆಗೋಡೆಯಾಗಲಿ ಎಂದು ಆಶಿಸುವವರಿದ್ದಾರೆ.
'ಈಗ' ಕಚ್ಚಿದರೆ/ ಕುಟುಕಿದರೆ ಬುಲೆಟ್ ರಂಧ್ರ ಮಾಡುವಂತೆ ದೇಹವನ್ನು ತೂತು ತೂತು ಮಾಡಿಬಿಡುತ್ತದೆ.

Giant Asian Hornet
ಹವಾಮಾನ ವೈಪರೀತ್ಯ ಮತ್ತು ಅರಣ್ಯನಾಶ Giant Asian Hornet 'ಈಗ' ಕಾಟಕ್ಕೆ ಹೇತುವಾಗಿದೆ. ಚೀನಾದಲ್ಲಿ ದಟ್ಟ ಅರಣ್ಯಗಳಿಗೇನೂ ಕೊರತೆಯಿಲ್ಲ. ಆದರೆ ನಾಶವಾಗುತ್ತಿರುವುದರಿಂದ 'ಈಗ' ಕಣಜಗಳು ಕಾಡುಬಿಟ್ಟು ನಾಡಿನತ್ತ ರೊಯ್ಯನೇ ಹಾರಿಬರುತ್ತಿವೆ. ಅದೂ ಮನುಷ್ಯರನ್ನೇ ಗುರಿಯಾಗಿಸಿಕೊಂಡಿದೆ.

Giant Asian Hornet ಹೊರಸೂಸುವ ವಿಷ
ಕೀಟಶಾಸ್ತ್ರಜ್ಞರು ಹೇಳುವಂತೆ Giant Asian Hornet ಒಮ್ಮೆ ಕುಟುಕಿದರೆ ಮುಗೀತು ಕಥೆ ಅಂತಲೇ! 'ಈಗ' ಕಣಜ ಹೊರಸೂಸುವ ವಿಷ ಸೀದಾ ಕೆಂಪು ರಕ್ತ ಕಣಗಳನ್ನು ನಾಶಪಡಿಸುತ್ತದೆ. ಮುಂದೆ ಲಿವರ್, ಕಿಡ್ನಿಯನ್ನು ನಿಷ್ಕ್ರಿಯಗೊಳಿಸುತ್ತದೆ. ಅಲ್ಲಿಂದ ಮುಂದಕ್ಕೆ ಹೃದಯಸ್ತಂಭನಕ್ಕೂ ಕಾರಣವಾಗುತ್ತದೆ.

ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಅಮೆರಿಕದಲ್ಲಿ
ಇದು ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಅಮೆರಿಕದಲ್ಲಿ ಎಲ್ಲೋ ದೂರತೀರದಲ್ಲಿ ನಿಗೂಢವಾಗಿ ಕಾಣಿಸಿಕೊಳ್ಳುತ್ತಿದ್ದವು. ಹೇಳಿಕೊಳ್ಳುವಷ್ಟು ಕಾಟ ಕೊಟ್ಟಿರಲಿಲ್ಲ. ಆದರೆ ಈಗ ಚೀನಾದಲ್ಲಿ ಅಕ್ಷರಶಃ ತಾಂಡವನೃತ್ಯದಲ್ಲಿ ತೊಡಗಿವೆ.

ಕಣಜಗಳ ಗೂಡುಗಳಿಗೆ ಬೆಂಕಿ ಹಚ್ಚಿ ನಾಶಪಡಿಸುವುದು
ಮನುಷ್ಯರನ್ನಷ್ಟೇ ಅಲ್ಲ. ಕುದುರೆಗಳೂ ಸೇರಿದಂತೆ ದೊಡ್ಡ ದೊಡ್ಡ ಪ್ರಾಣಿಗಳನ್ನೂ ಮಲಗಿಸಿಬಿಟ್ಟಿವೆ. 'ಈಗ' ಕಣಜಗಳ ಗೂಡುಗಳಿಗೆ ಬೆಂಕಿ ಹಚ್ಚಿ ನಾಶಪಡಿಸುವುದು ಮತ್ತು ಬಾಧಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ಅವರನ್ನು ಉಳಿಸಿಕೊಳ್ಳುವುದು ಇವೆರಡೇ ಚೀನೀಯರ ಮುಂದಿರುವ ಸವಾಲುಗಳು.

Giant Asian Hornet ಬೀಜಾಸುರರಂತೆ
ಆದರೆ ಒಂದು 'ಈಗ' ಕಣಜ ಒಂದು ಬಾರಿಗೆ ಸಾವಿರ ಮೊಟ್ಟೆಗಳನ್ನಿಟ್ಟು, ಬೀಜಾಸುರರಂತೆ ಮನುಷ್ಯ ಸಂತತಿಯನ್ನು ನಾಶ ಪಡಿಸುವಂತೆ ಜನ್ಮ ತಾಳುತ್ತಿವೆ. ಅಪ್ರಚೋದಿತವಾಗಿ ಮನುಷ್ಯರನ್ನು ಅಟ್ಟಾಡಿಸಿಕೊಂಡು ಕೊಒಲ್ಲುತ್ತಿವೆ. ಅಂತಹುದರಲ್ಲಿ ಇಡೀ ಗೂಡಿಗೆ ಬೆಂಕಿ ಹಚ್ಚಿ ಅವುಗಳನ್ನು ನಿರ್ನಾಮ ಮಾಡಲು ಹೊರಟರೆ ಅದು ಮತ್ತಷ್ಟು ಭೀಕರ ರೌದ್ರಾವತಾರ ತಾಳುತ್ತವೆ. ಅಲ್ಲಿನ ಜನಕ್ಕೆ ಏನು ಮಾಡೋಕ್ಕೂ ತೋಚದಾಗಿದೆ. (ಚಿತ್ರ ಕೃಪೆ:www.huffingtonpost.com
www.telegraph.co.uk)












Click it and Unblock the Notifications