ಅರುಣಾಚಲ ಪ್ರದೇಶ ಭಾರತದ ಭಾಗ ಎನ್ನುವ 30000 ಭೂಪಟ ನಾಶಮಾಡಿದ ಚೀನಾ
ಬೀಜಿಂಗ್, ಮಾರ್ಚ್ 26: ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ತೋರಿಸುವ ಸುಮಾರು 30,000 ಜಾಗತಿಕ ಭೂಪಟಗಳನ್ನು ಚೀನಾ ನಾಶಪಡಿಸಿದೆ ಎಂದು ವರದಿಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅರುಣಾಚಲ ಪ್ರದೇಶ ಮತ್ತು ತೈವಾನ್‌ಅನ್ನು ತನ್ನ ಪ್ರದೇಶದ ಭಾಗ ಎಂದು ಉಲ್ಲೇಖಿಸದ ಕಾರಣಕ್ಕೆ ವಿಶ್ವ ಭೂಪಟಗಳನ್ನು ಅದು ನಾಶಪಡಿಸಿದೆ. ಈ ಭೂಪಟಗಳು ಚೀನಾದಲ್ಲಿ ಮುದ್ರಣವಾಗಿದ್ದು, ಅವುಗಳನ್ನು ಕೆಲವು ದೇಶಗಳಿಗೆ ರಫ್ತು ಮಾಡುವ ಸಲುವಾಗಿ ತಯಾರಿಸಲಾಗಿತ್ತು ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಭಾರತದ ಅಂಗವಾಗಿರುವ ಅರುಣಾಚಲ ಪ್ರದೇಶದಲ್ಲಿ ಭಾರತದ ಚಟುವಟಿಕೆಗಳಿಗೆ ಚೀನಾ ಹಿಂದಿನಿಂದಲೂ ಅಡ್ಡಿಪಡಿಸಿಕೊಂಡು ಬಂದಿದೆ. ದೇಶದ ಪ್ರಮುಖ ಮುಖಂಡರು ಅಲ್ಲಿಗೆ ಭೇಟಿ ನೀಡಿದಾಗ ತಕರಾರು ತೆಗೆಯುತ್ತಿದೆ. ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗ ಎಂದು ಅದು ಪ್ರತಿಪಾದಿಸುತ್ತಿದೆ.

ತೈವಾನ್‌ಅನ್ನು ಪ್ರತ್ಯೇಕ ದೇಶ ಎಂದು ತೋರಿಸುವ ಮತ್ತು ಭಾರತ-ಚೀನಾ ಗಡಿಯನ್ನು ತಪ್ಪಾಗಿ ಬಿಂಬಿಸಿರುವ ಸುಮಾರು 30,000 ವಿಶ್ವ ಭೂಪಟಗಳನ್ನು ಕ್ವಿಂಗಾಡೊದ ಸುಂಕ ಅಧಿಕಾರಿಗಳು ನಾಶಪಡಿಸಿದ್ದಾರೆ.
ಭೂಪಟ ಮಾರುಕಟ್ಟೆಯಲ್ಲಿ ಚೀನಾ ಮಾಡಿರುವುದು ಸರಿಯಾಗಿದೆ ಮತ್ತು ಅಗತ್ಯವಾದುದ್ದಾಗಿದೆ. ಏಕೆಂದರೆ ದೇಶವೊಂದಕ್ಕೆ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗಳು ಬಹು ಮುಖ್ಯವಾದ ಸಂಗತಿಗಳು. ತೈವಾನ್ ಮತ್ತು ದಕ್ಷಿಣ ಟಿಬೆಟ್ ಎರಡೂ ಚೀನಾದ ಪ್ರದೇಶದ ಭಾಗಗಳು ಎಂದು ಚೀನಾ ವಿದೇಶಾಂಗ ವ್ಯವಹಾರಗಳ ವಿಶ್ವವಿದ್ಯಾಲಯದ ಪ್ರೊಫೆಸರ್ ಲಿಯು ವೆನ್‌ಜೊಂಗ್ ತಿಳಿಸಿದ್ದಾರೆ.












Click it and Unblock the Notifications