Donald Trump: ಅಮೆರಿಕ ಜೊತೆ ಯಾವುದೇ ಮಾತುಕತೆ ಇಲ್ಲ, ತೆರಿಗೆ ಹೇರಿಕೆ ಬಗ್ಗೆ ಚೀನಾ ಖಡಕ್ ರಿಯಾಕ್ಷನ್!
ಅಮೆರಿಕ & ಚೀನಾ ನಡುವೆ ಶುರುವಾಗಿರುವ ತೆರಿಗೆ ಮಹಾಯುದ್ಧ ನಿಲ್ಲುವ ಬಗ್ಗೆ ಯಾವುದೇ ರೀತಿಯ ಮುನ್ಸೂಚನೆ ಸಿಗುತ್ತಿಲ್ಲ. ಚೀನಾ ವಿರುದ್ಧ ಅಮೆರಿಕ ಭಾರಿ ದೊಡ್ಡ ಪ್ರಮಾಣದಲ್ಲಿ ಟ್ಯಾಕ್ಸ್ ಹಾಕಲು ಮುಂದಾದ ನಂತರ, ಭಾರಿ ದೊಡ್ಡ ತಿಕ್ಕಾಟ ಶುರುವಾಗಿತ್ತು. ಆರ್ಥಿಕವಾಗಿ ಕೂಡ ಅಮೆರಿಕ ಹಾಗೂ ಚೀನಾ ನಡುವೆ ಭಾರಿ ದೊಡ್ಡ ಫೈಟಿಂಗ್ ಆರಂಭ ಆಗಿದೆ. ಇದೇ ಸಮಯದಲ್ಲಿ ಮತ್ತೊಮ್ಮೆ ಚೀನಾ ದೇಶವು ಅಮೆರಿಕ ವಿರುದ್ಧ ಗುಡುಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೆಕ್ಕಾಚಾರ ಉಲ್ಟಾ ಆಗುತ್ತಿದ್ದು, ಅಮೆರಿಕದ ಆರ್ಥಿಕತೆ ಅಲ್ಲಾಡಿ ಹೋಗಿದೆ. ಟ್ರಂಪ್ ಅವರ ಹೊಸ ತೆರಿಗೆ ನೀತಿಯಿಂದಾಗಿ ಭಯವು ಎದುರಾಗಿದ್ದು, ಏನು ಮಾಡುವುದು ಅಂತ ಹೂಡಿಕೆದಾರರು ಯೋಚನೆ ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಚೀನಾ ಮುಂದೆ ಬಂದು ಅಮೆರಿಕ ಜೊತೆಗೆ ಮಾತುಕತೆ ನಡೆಸಬಹುದು ಎನ್ನಲಾಗಿತ್ತು. ಆದರೆ ಅದು ಉಲ್ಟಾ ಆಗಿದ್ದು, ಅಮೆರಿಕದ ಜೊತೆಗೆ ಯಾವುದೇ ರೀತಿಯ ತೆರಿಗೆ ಮಾತುಕತೆ ಇಲ್ಲ ಎಂದು ಚೀನಾ ಗುಡುಗಿದೆ.

ಅಮೆರಿಕಗೆ ಆವಾಜ್ ಹಾಕಿದ ಚೀನಾ!
ಟ್ರಂಪ್ ಘೋಷಣೆ ಮಾಡಿದ ಹೊಸ ತೆರಿಗೆ ನೀತಿಯ ವಿರುದ್ಧ ರೊಚ್ಚಿಗೆದ್ದಿರುವ ಚೀನಾ, ಸೇಡಿಗೆ ಸೇಡು ಎನ್ನುವಂತೆ ಅಮೆರಿಕ ರಫ್ತು ಮಾಡುವ ವಸ್ತುಗಳ ವಿರುದ್ಧ ಭರ್ಜರಿ 34 ಪರ್ಸೆಂಟ್ ತೆರಿಗೆ ಹಾಕಲು ಮುಂದಾಗಿತ್ತು. ಆ ನಂತರ ಮತ್ತೆ ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಚೀನಾದ ವಿರುದ್ಧ ಗರಿಷ್ಠ ಶೇಕಡಾ 145ರ ಅನುಪಾತದಲ್ಲಿ ತೆರಿಗೆ ಹೇರಿಕೆಗೆ ಮುಂದಾಗಿದ್ದರು. ಹೀಗೆಲ್ಲಾ ಜಗಳ ಜೋರಾಗಿರುವ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ಅವರಿಗೆ ಹೊಸ ತಲೆನೋವು ಶುರು ಆಗಿತ್ತು. ಇದೇ ಕಾರಣಕ್ಕೆ ಚೀನಾ & ಅಮೆರಿಕ ನಡುವೆ ಮಾತುಕತೆ ನಡೆಯಲಿದೆ ಎಂಬ ಭಾರಿ ನಿರೀಕ್ಷೆ ಕೂಡ ಮೂಡಿತ್ತು. ಆದರೆ ಎಲ್ಲಾ ಮತ್ತೆ ಛಿದ್ರ ಛಿದ್ರವಾಗಿ ಹೋಗಿದೆ.
ಸಾಲು ಸಾಲು ಸಮಸ್ಯೆಗಳ ಸುಳಿ!
ಚೀನಾದ ಅರ್ಥ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ನಾವು ಅಮೆರಿಕದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ. ಅಲ್ಲದೆ ಅಮೆರಿಕ ಹೇರಿಕೆ ಮಾಡಿದ ತೆರಿಗೆ ವಿಚಾರವಾಗಿ ಚೌಕಾಸಿ ಮಾಡೋದಿಲ್ಲ ಎಂದಿದೆ ಚೀನಾ. ಈ ಮೂಲಕ ಅಮೆರಿಕ ಬಗ್ಗೆ ಪರೋಕ್ಷವಾಗಿ ಚೀನಾ ಆಕ್ರೋಶ ಹೊರ ಹಾಕಿದೆ. ಇನ್ನೊಂದು ಕಡೆ ಜಾಗತಿಕ ಆರ್ಥಿಕತೆಯ ಬುಡ ಅಲುಗಾಡಲು ಶುರುವಾಗಿದ್ದು, ಮತ್ತೊಂದು ಆರ್ಥಿಕ ಹಿಂಜರಿತ ಸಮೀಪಿಸಿದೆ ಎಂಬ ಮಾತು ಕೇಳಿ ಬಂದಿದೆ. ಒಟ್ನಲ್ಲಿ ಅಮೆರಿಕ ಇದೀಗ ಚೀನಾ ದೇಶವನ್ನ ಎದುರು ಹಾಕಿಕೊಂಡ ಪರಿಣಾಮ ಸಮಸ್ಯೆ ಸುಳಿಗೆ ಸಿಲುಕಿದಂತೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇದೆ.












Click it and Unblock the Notifications