China DeepSeek: ದೊಡ್ಡಣ್ಣನಿಗೆ ಶಾಕ್ ಕೊಟ್ಟ ಡ್ರ್ಯಾಗನ್- ಚೀನಾ ಎಐ ಸೃಷ್ಟಿಗೆ ಅಮೇರಿಕ ಗಡಗಡ

ಚೀನಾದ ಹೊಸ ಎಐವೊಂದು ಇಡೀ ಜಗತ್ತಿಗೆ ಶಾಕ್ ಕೊಟ್ಟಿದೆ. ಚಾಟ್ ಜಿಪಿಟಿಗಿಂತ ಚೀನಾ ಬಲಿಷ್ಟವಾದ ಎಐ ಸೃಷ್ಟಿಸಿದೆ. ಚೀನಾದ ಡೀಪ್‌ಸೀಕ್ ಎನ್ನುವ ಈ ಚಾಟ್‌ಬಾಟ್ ಎಐ ಲೋಕದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಓಪನ್ ಎಐ ಗೂಗಲ್ ನಂತಹ ಅಮೆರಿಕಾದ ಕಂಪನಿಗಳು ವರ್ಷಾನು ವರ್ಷಗಟ್ಟಲೆ ಸಮಯ ತೆಗೆದುಕೊಂಡು ಕೋಟ್ಯಾಂತರ ರೂಪಾಯಿ ಹಣ ಸುರಿದು ಸೃಷ್ಟಿದ ಎಐ ಅನ್ನು ಚೀನಾ ಕಂಪನಿ ಕೇವಲ ಆರು ಮಿಲಿಯನ್ ಡಾಲರ್‌ನಲ್ಲಿ ಕೇವಲ ಒಂದುವರೆ ತಿಂಗಳಿನಲ್ಲಿ ಡೆವೆಲಪ್ ಮಾಡಿದೆ.

ಎಐ ಟೆಸ್ಟ್‌ನಲ್ಲಿ ಚಾಟ್ ಜಿಪಿಟಿ, ಲಾಮಾ ಎಲ್ಲವನ್ನು ಬಡಿದು ಬಿಸಾಕಿದೆ. ಈ ಏಟಿಗೆ ದಿಕ್ಕೆಟ್ಟಿರುವ ಓಪನ್ ಎಐ ತನ್ನ ಪ್ರೀಮಿಯಂ ಫ್ಯೂಚರ್‌ಗಳನ್ನು ಫ್ರೀ ಆಗಿ ಬಿಡಲು ಶುರು ಮಾಡಿದೆ. ಹಾಗಾದರೆ ಏನಿದು ಡೀಪ್‌ಸೀಕ್? ಚೀನಾ ಇಷ್ಟೊಂದು ಪವರ್‌ ಫುಲ್ ಎಐ ಸೃಷ್ಟಿಸಿದ್ದು ಹೇಗೆ? ಎಲ್ಲವನ್ನೂ ತಿಳಿಯೋಣ.

China DeepSeek China has created an AI more powerful than America s chatbot

ಎಐ ಆರ್ಟಿಫಿಶೀಯಲ್ ಇಂಟೆಲಿಜೆನ್ಸಿ ಭವಿಷ್ಯದ ಪವರ್‌ಗಳ ಮಹಾ ಶಕ್ತಿ. ಇದೇ ಕಾರಣಕ್ಕೆ ಅಮೆರಿಕಾ ಚೀನಾ ಕೈಗೆ ಈ ಶಕ್ತಿ ಹೋಗಬಾರದು ಅಂತ ತನ್ನ ಚಿಪ್‌ಗಳನ್ನು ಗುಬ್ಬಿ ಮರಿಗಳ ಹಾಗೆ ಬಚ್ಚಿಡುತ್ತಿತ್ತು. ಭಾರತಕ್ಕೂ ಇದನ್ನು ಕೊಡಲು ನಿರ್ಬಂಧವಿತ್ತು. ಆದರೆ ಈಗ ಡ್ರ್ಯಾಗನ್ ದೊಡ್ಡಣ್ಣನಿಗೆ ಭರ್ಜರಿ ಶಾಕ್ ಕೊಟ್ಟಿದೆ.

ಚೀನಾ ಇಷ್ಟೊಂದು ಪವರ್‌ ಫುಲ್ ಎಐ ಸೃಷ್ಟಿಸಿದ್ದು ಹೇಗೆ?

ಡೀಪ್‌ಸೀಕ್ ಅನ್ನೋ ಚೀನಿ ಕಂಪನಿ ವಿಶ್ವದ ಮೋಸ್ಟ್ ಪವರ್‌ಫುಲ್ ಎಐಯನ್ನು ಸೃಷ್ಟಿ ಮಾಡಿದೆ. ಜನವರಿ 20ರಂದು ಸೃಷ್ಟಿಯಾಗಿರುವ ಈ ಚಾಟ್‌ಬಾಟ್ ಒಂದೇ ವಾರದಲ್ಲಿ ಎಐ ಜಗತ್ತನ್ನೇ ದಿಗ್ಭ್ರಮೆಗೆ ದೂಡಿದೆ. ಅಮೆರಿಕಾದ ಚಾಟ್‌ ಜಿಪಿಟಿಗಿಂತ ಚೀನಾದ ಡೀಪ್‌ಸೀಕ್ ಫಾಸ್ಟ್ ಕೋಡಿಂಗ್, ಮ್ಯಾಥ್ಸ್‌ಲ್ಲಿ ಮೇಲುಗೈ ಸಾಧಿಸಿದೆ.

ಅಮೆರಿಕಾ ನಡೆಸುವ ಎಐಎಂಇ (American Invitational mathematics Examination) ವಿಶ್ವದ ಅತ್ಯಂತ ಕಠಿಣ ಮ್ಯಾಕ್ಸ್ ಪರೀಕ್ಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅಂಕಗಣಿತ, ಬೀಜಗಣಿತ, ಜಾಮಿಟ್ರಿ ಸೇರಿದಂತೆ ವಿಪರೀತ ಚಾಲೆಂಜಿಂಗ್ ಇರುವ ಈ ಪರೀಕ್ಷೆ ಸುಮಾರು ಮೂರು ಗಂಟೆಗಳವರೆಗೆ ಸಾಗುತ್ತದೆ. ಈ ಟೆಸ್ಟ್‌ನ ಎಲ್ಲಾ ಉತ್ತರಗಳು ಮೂರು ಮೂರು ಅಂಕಗಳಲ್ಲಿ ಇರುತ್ತವೆ. ಇದು ತುಂಬಾ ಕಠಿಣ ಪರೀಕ್ಷೆ ಆಗಿದೆ. ಇಂತಹ ಎಐಎಂಇ ಟೆಸ್ಟ್‌ನಲ್ಲಿ ಜಗತ್ತಿನ ಮೋಸ್ಟ್ ಪವರ್‌ಫುಲ್ ಎಐ ಎನಿಸಿಕೊಂಡಿದ್ದ ಅಮೆರಿಕಾದ ಚಾಟ್ ಜಿಪಿಟಿ ಹಿಂದೆ 79.2% ಕೋರ್ಸ್‌ ಮಾಡಿತ್ತು.

China DeepSeek China has created an AI more powerful than America s chatbot

ಆದರೆ ಚೀನಾದ ಡೀಪ್‌ಸೀಕ್ ಆ ಬೆಂಚ್‌ ಮಾರ್ಕ್‌ ಅನ್ನು ಮೀರಿಸಿ 79.8% ಕೋರ್ಸ್‌ ಮಾಡಿದೆ. ಅಂದರೆ ವಿಶ್ವದ ಮೋಸ್ಟ್ ಪವರ್‌ಫುಲ್ ಎಐಎಂಇಯನ್ನೇ ಬೀಟ್ ಮಾಡಿದೆ ಚೀನಾದ ಡೀಪ್‌ಸೀಕ್. ಡೀಪ್‌ಸೀಕ್ ಚಾಟ್‌ ಜಿಪಿಟಿಗಿಂತ ವೇಗವಾಗಿ ಉತ್ತರಿಸಿದೆ.

ಹೀಗೆ 57 ಟಾಪಿಕ್‌ಗಳನ್ನು ಬಹುಬೇಗ ಕವರ್‌ ಮಾಡುವ ಸಾಮಾನ್ಯಾ ಜ್ಞಾನ ಪರೀಕ್ಷೆಯಲ್ಲಿ 90% ಸ್ಕೋರ್ ಮಾಡಿದೆ ಡೀಪ್‌ಸೀಕ್. ಅಲ್ಲದೆ ಮ್ಯಾಥ್ಸ್, ಸಾಮಾನ್ಯ ಜ್ಞಾನ, ಸಾಫ್ಟವೇರ್ ಇಂಜಿನೀಯರ್ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಚಾಟ್ ಜಿಪಿಟಿ ಅನ್ನು ಮೀರಿಸಿ ವಿಶ್ವದ ಮೋಸ್ಟ್ ಪವರ್‌ಫುಲ್ ಎಐ ಎನಿಸಿಕೊಂಡಿದೆ ಚೀನಾದ ಡೀಪ್‌ಸೀಕ್.

ಆದರೆ ಅಮೆರಿಕಾದ ಎಐ ಬೆಚ್ಚಿ ಬಿದ್ದಿರುವುದು ಚೀನಾದ ಡೀಪ್‌ಸೀಕ್ ಸಾಮಾರ್ಥ್ಯ ನೋಡಿ ಅಲ್ಲ. ಡೀಪ್‌ಸೀಕ್‌ ಅನ್ನು ಡೆವೆಲಪ್ ಮಾಡಿದ ರೀತಿ ನೋಡಿ. ಅಮೆರಿಕಾದ ಕಂಪನಿಗಳು ವರ್ಷಾನುಗಟ್ಟಲೆ ಸಮಯ ತೆಗೆದುಕೊಂಡು, ಬಿಲಿಯನ್ ಗಟ್ಟಲೆ ಹಣ ಸುರಿದು ಸೃಷ್ಟಿ ಮಾಡಿದ ಮಾಡಲ್‌ ಅನ್ನು ಚೀನಾ ಕೇವಲ ಎರಡೇ ತಿಂಗಳಲ್ಲಿ ಸೃಷ್ಟಿ ಮಾಡಿದೆ.

China DeepSeek China has created an AI more powerful than America s chatbot

ಎರಡೇ ತಿಂಗಳಲ್ಲಿ ಡೀಪ್‌ಸೀಕ್ ಸೃಷ್ಟಿದ ಚೀನಾ

ಎಐ ಮಾಡೆಲ ಸೃಷ್ಟಿ ಮಾಡುವುದು ಅಂದರೆ ಅಷ್ಟು ಸುಲಭವಲ್ಲ. ನೂರಾರು ಕೋಟಿ ಹಣ ಬೇಕು. ಹಲವಾರು ವರ್ಷಗಳ ಪರಿಶ್ರಮ ಬೇಕು. ಓಪನ್ ಎಐ ಒಂದು ಚಾಟ್ ಜಿಪಿಟಿಯನ್ನು ಸೃಷ್ಟಿ ಮಾಡಲಿಕ್ಕೆ ಅಮೆರಿಕಾ ಸುಮಾರು ಎಂಟು ವರ್ಷ ತೆಗೆದುಕೊಂಡಿತ್ತು. ಪ್ರತೀ ವರ್ಷ ಐದೈದು ಬಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿತ್ತು. ಗೂಗಲ್ ಕೂಡ ತನ್ನ ಎಐ ಗಾಗಿ 2024ರಲ್ಲಿ 51 ಬಿಲಿಯನ್ ಡಾಲರ್ ಖರ್ಚು ಮಾಡಿದೆ ಅನ್ನೋ ಅಂದಾಜು ಇದೆ. ಮೈಕ್ರೋ ಸಾಫ್ಟ್‌ ಕೂಡ ಓಪನ್ ಎಐ ಮೇಲೆ 13 ಬಿಲಿಯನ್ ಡಾಲರ್ ಚೆಲ್ಲಿದೆ.

ಹೀಗಿರುವಾಗ ಡೀಪ್‌ಸೀಕ್ ಕೇವಲ 5.5 ಮಿಲಿಯನ್ ಡಾಲರ್‌ ನಲ್ಲಿ ಅತ್ಯಂತ ಬಲಿಸ್ಟ್ ಎಐ ಮಾಡೆಲ್ ಅನ್ನು ಡೆವೆಲಪ್ ಮಾಡಿದೆ. 5.5 ಮಿಲಿಯನ್ ಡಾಲರ್ ಅಮೆರಿಕಾ ಕಂಪನಿಗಳು ಖರ್ಚು ಮಾಡುತ್ತಿರುವುದರ ಒಂದು ಪರ್ಸೆಂಟ್ ಕೂಡ ಇಲ್ಲ. ಅಷ್ಟೊಂದು ಅಗ್ಗದ ದರದಲ್ಲಿ ಡೀಪ್‌ಸೀಕ್ ಅನ್ನು ಚೀನಾ ಡೆವೆಲಪ್ ಮಾಡಿದೆ. ಅದೂ ಕೂಡ ಕೇವಲ ಒಂದುವರೆ ತಿಂಗಳಿನಲ್ಲಿ. ಹೀಗಾಗಿ ಇಡೀ ಅಮೆರಿಕಾದ ಟೆಕ್ ಲೋಕಾ ಬೆಚ್ಚಿಬಿದ್ದಿದೆ. ಅದ್ರಲ್ಲೂ ಅಮೆರಿಕಾದ ಎಐ ನಿರ್ಬಂಧದ ನಡುವೆ ಚೀನಾ ಈ ರೀತಿ ಸಾಧನೆ ಮಾಡಿರುವುದು ಅಚ್ಚರಿ ಮೂಡಿಸಿದೆ.

ಚಿಪ್ ಕೊಡಲ್ಲ ಅಂದಿದ್ದ ಅಮೆರಿಕಾ

ಎಐ ರೇಸ್‌ನಲ್ಲಿ ಚೀನಾ ತಮಗಿಂತ ಮುಂದೆ ಹೋಗಬಾರದು ಅಂತ ಅಮೆರಿಕಾ ಡ್ರ್ಯಾಗನ್‌ ಮೇಲೆ ಸಾಕಷ್ಟು ನಿರ್ಬಂಧ ಹೇರಿತ್ತು. ಎಐ ಸೃಷ್ಟಿದ ಚಿಪ್‌ಗಳನ್ನು ಚೀನಾಗೆ ರಫ್ತು ಮಾಡುವುದನ್ನು ಅಮೆರಿಕಾ ಬ್ಯಾನ್ ಮಾಡಿತ್ತು. ಎಐ ಅಭಿವೃದ್ದಿಯ ಚಿಪ್‌ಗಳನ್ನು ತುಂಬಾನೇ ಮುಖ್ಯ. ಆದರೆ ಚೀನಾದ ಡೀಪ್‌ಸೀಕ್ ಕಂಪನಿ ಈ ನಿರ್ಬಂಧದ ಹೊರತಾಗಿ ಎಐ ಅನ್ನು ಡೆವೆಲಪ್‌ ಮಾಡಿದೆ. ಈ ಮೂಲಕ ಎಐ ಲೋಕದಲ್ಲಿ ಚೀನಾ ದೊಡ್ಡಣ್ಣನಿಗೆ ಭರ್ಜರಿ ಟಕ್ಕರ್ ಕೊಟ್ಟಿದೆ.

ಇದಕ್ಕೂ ಮೊದಲು ಚೀನಾವನ್ನು ಅಮೆರಿಕಾದ ತುಂಬಾ ಕಡಿಮೆ ಅಂದಾಜು ಮಾಡಿತ್ತು. ಎಐನಲ್ಲಿ ಚೀನಾ ಅಮೆರಿಕಾಕ್ಕಿಂತ ಎರಡರಿಂದ ಮೂರು ವರ್ಷ ಹಿಂದೆ ಇದೆ ಎಂದಿತ್ತು. ಆದರೆ ಚೀನಾ ಈ ಕ್ಷಿಪ್ರ ಕ್ರಾಂತಿ ಮೂಲಕ ತನ್ನ ಪವರ್‌ ಅನ್ನು ತೋರಿಸಿದೆ. ಎಷ್ಟರ ಮಟ್ಟಿಗೆ ಅಂದರೆ ಅಮೆರಿಕಾ ಖುದ್ದು ನಾವು ಕನಸು ಅನ್ನೋದನ್ನು ಚೀನಾ ಮಾಡಿ ತೋರಿಸುವ ಸಾಮಾರ್ಥ್ಯ ಹೊಂದಿದೆ ಎಂದಿದೆ.

ಆದರೂ ಕೂಡ ಚೀನಾ ಇಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ಡೀಪ್‌ಸೀಕ್ ಮೂಲದ ಬಗ್ಗೆ ಸಾಕಷ್ಟು ಅಸ್ಪಷ್ಟತೆ ಇದೆ. ಇತ್ತ ಅಮೆರಿಕಾದ ಕೆಲ ಮಾಧ್ಯಮಗಳು ಚೀನಾ ಅಮೆರಿಕಾದ ಚಾಟ್‌ ಜಿಪಿಟಿಯನ್ನು ಕಾಮಿ ಮಾಡಿದ ಎಂದು ದೂರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+