ಚೀನಾದಲ್ಲಿ ಮಕ್ಕಳಿಗೆ ಈ ಇಸ್ಲಾಮಿಕ್ ಹೆಸರುಗಳನ್ನಿಡುವಂತಿಲ್ಲ

ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಿರುವ ಚೀನಾ ಸರಕಾರ, ಕ್ಲಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಮೊಹಮ್ಮದ್, ಜಿಹಾದ್ ಮುಂತಾದ ಹೆಸರನ್ನು ನಾಮಕರಣ ಮಾಡಬಾರದೆಂದು ಆದೇಶ ಹೊರಡಿಸಿದೆ.

ಬೀಜಿಂಗ್, ಏಪ್ರಿಲ್ 25 : ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಿರುವ ಚೀನಾ ಸರಕಾರ, ಇದೀಗ ಮುಸ್ಲಿಮರೇ ಹೆಚ್ಚಿರುವ ಕ್ಸಿನ್ ಜಿಯಾಂಗ್‌ ಪ್ರಾಂತ್ಯದಲ್ಲಿ ಶಿಶುಗಳಿಗೆ ಇಸ್ಲಾಮಿಕ್ ನ ಕೆಲ ಹೆಸರುಗಳನ್ನಿಡುವುದಕ್ಕೆ ಚೀನಾ ಸರ್ಕಾರ ನಿಷೇಧ ಹೇರಿದೆ.

ಇಸ್ಲಾಮಿಕ್ ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ಹೇಳಿದೆ. ಇಮಾಮ್, ಹಾಜಿ, ಇಸ್ಲಾಂ, ಖುರಾನ್, ಸದ್ದಾಂ ಮತ್ತಿತರ ಹೆಸರುಗಳನ್ನಿಡುವುದಕ್ಕೆ 'ಅಲ್ಪಸಂಖ್ಯಾತರ ನಾಮಕರಣ ನಿಯಮ'ಗಳಲ್ಲಿ ನಿಷೇಧ ಹೇರಲಾಗಿದೆ ಎಂದು ಆರ್‌ ಎಫ್‌ಎ ವರದಿ ಮಾಡಿದೆ. [ಅಮೆರಿಕಾದಿಂದ ಯಾವುದೇ ಕ್ಷಣದಲ್ಲಿ ಯುದ್ದ ಘೋಷಣೆ: ಚೀನಾ ಎಚ್ಚರಿಕೆ]

China bans Muslim names for babies in Xinjiang

ದಿ ಗಾರ್ಡಿಯನ್ ಪತ್ರಿಕೆ ಮಾಡಿರುವ ವರದಿ ಪ್ರಕಾರ, ಈ ಆದೇಶವನ್ನು ಉಲ್ಲಂಘಿಸಿದವರಿಗೆ ಸರಕಾರದಿಂದ ಯಾವುದೇ ರೀತಿಯ ಸೌಲಭ್ಯ ಸಿಗುವುದಿಲ್ಲ.

ಜೊತೆಗೆ ಯಾವುದೇ ರೀತಿಯ ನೊಂದಾಣಿ ಸರ್ಟಿಫಿಕೇಟುಗಳು, ಸರಕಾರದಿಂದ ಮಂಜೂರಾಗುವ ಸಾಲಗಳು, ವಿದ್ಯಾರ್ಥಿವೇತನ ಮುಂತಾದವು ಸಿಗುವುದಿಲ್ಲ.

ಈ ಮಧ್ಯೆ, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡದಂತೆ ಉಯ್ಘರ್ ಮುಸ್ಲಿಮರಿಗೆ ಸೂಚಿಸಲಾಗಿದೆ. ಅಸಹಜವಾಗಿ ಗಡ್ಡ ಬಿಡುವುದು, ಬುರ್ಖಾ ತೊಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದನ್ನು ಇತ್ತೀಚೆಗೆ ಚೀನಾ ನಿಷೇಧಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+