ಚೀನಾ ಆ್ಯಪ್‌ಗಳ ನಿಷೇಧ : ಭಾರತದ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ ಚೀನಾ
ಬೀಜಿಂಗ್, ಜೂನ್ 30: ಗಡಿ ಸಂಘರ್ಷದ ಬಳಿಕ ಭಾರತ-ಚೀನಾ ಪರಸ್ಪರ ಬುಸುಗುಡುತ್ತಿರುವ ಸರ್ಪಗಳಂತೆ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿವೆ. ಇದರ ನಡುವೆ ಚೀನಾ ವಿರುದ್ಧ ಭುಗಿಲೆದ್ದಿರುವ ಆಕ್ರೋಶಕ್ಕೆ ಮೊದಲ ಹೆಜ್ಜೆಯಂತೆ ಭಾರತದಲ್ಲಿ 59 ಚೀನಾ ಆ್ಯಪ್‌ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.
Recommended Video
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಚೀನಾದ ವಸ್ತುಗಳ ಮೇಲೂ ನಿಷೇಧ ಹೇರುವಂತೆ ಒತ್ತಾಯ ಕೇಳಿಬಂದಿದೆ. ಇದರ ನಡುವೆ ಚೀನಾ ಆ್ಯಪ್‌ಗಳ ನಿಷೇಧದ ಕುರಿತಾಗಿ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತದ ನಿರ್ಧಾರವು ತೀವ್ರ ಕಳವಳಕಾರಿ ಎಂದು ಹೇಳಿದೆ.
ಚೀನಾ ಆ್ಯಪ್ ನಿಷೇಧದ ಕುರಿತು ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ''ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು-ನಿಬಂಧನೆಗಳನ್ನು ಪಾಲಿಸುವಂತೆ ಚೀನೀ ಸರ್ಕಾರ ಯಾವಾಗಲೂ ಚೀನಿ ಕಂಪನಿಗಳಿಗೆ ಸೂಚನೆಯನ್ನು ನೀಡಿರುತ್ತೇವೆ ಎಂದು ನಾವು ಒತ್ತಿ ಹೇಳಲು ಬಯಸುತ್ತೇವೆ. ಚೀನಾದವರು ಸೇರಿದಂತೆ ಅಂತರರಾಷ್ಟ್ರೀಯ ಹೂಡಿಕೆದಾರರು ಸ್ಥಳೀಯ ಕಾನೂನುಗಳನ್ನು ಅಗೌರಿಸುವ ಪ್ರಶ್ನೆಯೇ ಇಲ್ಲ'' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ.

ಇದೇ ರೀತಿಯಲ್ಲಿ ಭಾರತವೂ ಕೂಡ ಅಂತರಾಷ್ಟ್ರೀಯ ಕಾನೂನುಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಹೊಂದಿರುತ್ತದೆ. ಈಗ ತೆಗೆದುಕೊಂಡಿರುವ ನಿರ್ಧಾರವನ್ನು ಭಾರತ ಮರುಪರಿಶೀಲಿಸಲಿದೆ ಎಂದು ಲಿಜಿಯಾನ್ ಭರವಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications