Donald Trump: ಯುರೋಪ್ ಒಕ್ಕೂಟವನ್ನೇ ಟ್ರಂಪ್ ವಿರುದ್ಧ ಎತ್ತಿ ಕಟ್ಟಲು ಚೀನಾ ಪ್ಲಾನ್?
ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ಕೆಲಸ ಸ್ವತಃ ಅಮೆರಿಕದ ಬುಡ ಅಲುಗಾಡಿಸಿದ್ದು, ಸ್ನೇಹಿತರೇ ಶತ್ರುಗಳಾಗಿ ಬದಲಾಗುತ್ತಿದ್ದಾರೆ. ಇಷ್ಟುದಿನ ಅಮೆರಿಕದ ಜೊತೆಗೆ ಉತ್ತಮವಾದ ಬಾಂಧವ್ಯ ಹೊಂದಿದ್ದ ದೇಶಗಳು ಕೂಡ ಇದೀಗ ದೂರ ಆಗುತ್ತಿದ್ದು, ಡೊನಾಲ್ಡ್ ಟ್ರಂಪ್ ಈಗ ಹೇರಿಕೆ ಮಾಡಿರುವ ಹೆಚ್ಚಿನ ತೆರಿಗೆ ವಿರುದ್ಧ ಯುರೋಪ್ ಕೂಡ ಗರಂ ಆಗಿದೆ. ಚೀನಾ ಕೂಡ ಈ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಇದ್ದು, ಇಂತಹ ಸಮಯವನ್ನೇ ಬಳಸಿಕೊಂಡು ಯುರೋಪ್ ಒಕ್ಕೂಟವನ್ನೇ ಟ್ರಂಪ್ ವಿರುದ್ಧ ಎತ್ತಿ ಕಟ್ಟಲು ಚೀನಾ ಪ್ಲಾನ್ ಮಾಡಿದಂತಿದೆ.
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದೆ. ಡೊನಾಲ್ಡ್ ಟ್ರಂಪ್ ಅವರು ಒಂದಾದ ನಂತರ ಒಂದು ಸಮಸ್ಯೆ ಮಾಡಿಕೊಂಡು ಅಮೆರಿಕದ ಆರ್ಥಿಕತೆಯನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಅಲ್ಲದೆ ಹಲವು ದೇಶಗಳ ವಿರೋಧ ಕಟ್ಟಿಕೊಂಡು ಬದುಕುವುದೇ ಅಮೆರಿಕಗೆ ಕಷ್ಟವಾಗುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಮತ್ತೆ ಬಹುದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್. ಇದು ಯುರೋಪ್‌ಗೂ ಹಾನಿ ಮಾಡುತ್ತಿರುವ ಆರೋಪ ಇದ್ದು, ದಿಢೀರ್ ಯುರೋಪ್ ಒಕ್ಕೂಟ ಯಾವ ನಿರ್ಧಾರ ಕೈಗೊಂಡಿದೆ ಗೊತ್ತಾ?

ಚೀನಾ & ಯುರೋಪ್ ಒಗ್ಗಟ್ಟು ಪ್ರದರ್ಶನ?
ಯುರೋಪ್ ಒಕ್ಕೂಟದ ದೇಶಗಳು ಮೊದಲಿನಿಂದ ಕೂಡ ಚೀನಾ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದು, ಸಾಕಷ್ಟು ದೊಡ್ಡ ಮೊತ್ತದ ವ್ಯಾಪಾರ & ವಹಿವಾಟು ಕೂಡ ನಡೆಯುತ್ತಿದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ದಿಢೀರ್ ಹೆಚ್ಚಿನ ತೆರಿಗೆ ಹಾಕಲು ಮುಂದೆ ಬಂದಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಭವಿಷ್ಯದಲ್ಲಿ ಆರ್ಥಿಕವಾಗಿ ಯುರೋಪ್ ದಿವಾಳಿಯೇ ಆಗುವ ಭಯ ಕಾಡುತ್ತಿದೆ.
ಇದೇ ಕಾರಣಕ್ಕೆ ಯುರೋಪ್ ದೇಶಗಳು ಇದೀಗ ಕ್ರಮಕ್ಕಾಗಿ ಆಗ್ರಹ ಮಾಡುತ್ತಿದ್ದು, ಅವರಿಗೆ ಸಾಥ್ ನೀಡಲು ಚೀನಾ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ & ಯುರೋಪ್ ಒಕ್ಕೂಟದ ನಡುವೆ ಮಹತ್ವದ ವ್ಯಾಪಾರ ಒಪ್ಪಂದ ನಡೆಯುವ ನಿರೀಕ್ಷೆಯೂ ಇದೆ. ಈಗಾಗಲೇ ಸ್ಪ್ಯಾನಿಷ್ ಅಧ್ಯಕ್ಷ ಪೆಟ್ರೊ ಸ್ಯಾಂಚೆಜ್, ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಭಾರತದ ಜೊತೆಯಲ್ಲೂ ಮಹತ್ವದ ಒಪ್ಪಂದ?
ಹೌದು, ಇದೀಗ ಅಮೆರಿಕ ಕೈಕೊಟ್ಟ ಕಾರಣಕ್ಕೆ ಯುರೋಪ್ ದೇಶಗಳು ಭರ್ಜರಿ ವ್ಯಾಪಾರ ಮಾಡಲು ಬೇರೆ ಬೇರೆ ದೇಶಗಳ ಜೊತೆಗೆ ಕೈಜೋಡಿಸುತ್ತಿವೆ. ಅದರಲ್ಲಿ ಪ್ರಮುಖವಾಗಿ ನಮ್ಮ ಭಾರತ ಕೂಡ ಇರಲಿದೆ ಎಂಬುದೇ ಪ್ರಮುಖ ವಿಚಾರ. ಡೊನಾಲ್ಡ್ ಟ್ರಂಪ್ ಕೈಕೊಟ್ಟಿರುವ ಕಾರಣಕ್ಕೆ ಹೀಗೆಲ್ಲಾ ಜಗತ್ತಿನ ವಿವಿಧ ದೇಶಗಳನ್ನು ಒಗ್ಗೂಡಿಸಿ ವ್ಯವಹಾರ ಮಾಡಲು ಸಿದ್ಧತೆ ನಡೆಸಿದೆ ಯುರೋಪ್ ಒಕ್ಕೂಟ. ಸುಮಾರು 2 ಟ್ರಿಲಿಯನ್ ಯುರೋ ಮೊತ್ತದ ಈ ವಹಿವಾಟು ಭವಿಷ್ಯದ ದೃಷ್ಟಿಯಿಂದ ಕೂಡ ಗಮನ ಸೆಳೆದಿದೆ. ಚೀನಾ, ಭಾರತ ಕೂಡ ಯುರೋಪ್‌ನ ಜೊತೆಗೆ ಈ ವಿಚಾರದಲ್ಲಿ ಕೈಜೋಡಿಸಲು ಮುಂದಾಗಿವೆ.












Click it and Unblock the Notifications