Trump Tariffs: ತೆರಿಗೆ ಮಹಾಯುದ್ಧಕ್ಕೆ ಅಂತ್ಯ ಹಾಡಲು ಮುಂದಾದ ಚೀನಾ & ಅಮೆರಿಕ!

ಅಮೆರಿಕ & ಚೀನಾ ತೆರಿಗೆ ತಿಕ್ಕಾಟಕ್ಕೆ ಬ್ರೇಕ್ ಹಾಕಲು ಮುಂದಾದಂತೆ ಕಾಣುತ್ತಿದೆ. ಹಲವು ದಿನಗಳಿಂದ ಜಾಗತಿಕ ಆರ್ಥಿಕ ವ್ಯವಸ್ಥೆ ಅಲ್ಲಾಡಿ ಹೋಗುವಂತೆ ಮಾಡಿರುವ ತೆರಿಗೆ ಯುದ್ಧ ಕೊನೆಯಾಗಲಿ ಎಂಬ ಒತ್ತಾಯ ಕೇಳಿ ಬರುತ್ತಲೇ ಇತ್ತು. ಅಮೆರಿಕ & ಚೀನಾ ತೆರಿಗೆ ಕುರಿತು ಫೈಟಿಂಗ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಕೂಡ ಅಲ್ಲಾಡಿ ಹೋಗಿತ್ತು. ಈ ಕಾರಣಕ್ಕೆ ಅಮೆರಿಕ & ಚೀನಾ ನಡುವಿನ ತೆರಿಗೆ ಫೈಟಿಂಗ್‌ಗೆ ಅಂತ್ಯ ಹಾಡಲು ಇದೀಗ ನೂತನ ಮಾರ್ಗ ಹುಡುಕಿದೆ ಜಗತ್ತಿನ ದೊಡ್ಡಣ್ಣ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವು ದೇಶಗಳ ವಿರುದ್ಧ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆ ಮಾಡಲು ಮುಂದಾಗಿದ್ದರು. ಅಲ್ಲದೇ ಈ ವಿಚಾರ ದೊಡ್ಡ ಪೆಟ್ಟು ಕೊಡುವ ಜೊತೆಯಲ್ಲೇ, ಅಮೆರಿಕದಲ್ಲಿ ಆರ್ಥಿಕವಾಗಿ ಭಾರಿ ನಷ್ಟಕ್ಕೆ ಕೂಡ ಮುನ್ನುಡಿ ಬರೆದಿತ್ತು. ಇದೇ ಕಾರಣಕ್ಕೆ ಚೀನಾ & ಅಮೆರಿಕ ನಡುವಿನ ತೆರಿಗೆ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳು ಕೂಡ ಆರಂಭ ಆಗಿದ್ದವು. ಆದರೆ ಚೀನಾ ಕೂಡ ಆರಂಭದಲ್ಲಿ ಅಮೆರಿಕ ವಿರುದ್ಧ ಹೋರಾಡಲು ಮುಂದಾಗಿದ್ದು ಗೊಂದಲ ಹೆಚ್ಚು ಮಾಡಿತ್ತು.

China and America Set to Discuss Ending Tariffs Conflict Soon

ತೆರಿಗೆ ಯುದ್ಧಕ್ಕೆ ಯಾವಾಗ ಬ್ರೇಕ್?

ಅಮೆರಿಕದ ಅಧ್ಯಕ್ಷರಾಗಿ 2016ರ ಸಮಯದಲ್ಲಿ ಮೊದಲ ಬಾರಿಗೆ ಆಯ್ಕೆ ಆಗಿದ್ದ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಮೊದಲ ಬಾರಿಗೆ ತೆರಿಗೆ ಯುದ್ಧಕ್ಕೆ ಮುಂದಾಗಿದ್ದರು. ಈ ರೀತಿ ತಿಕ್ಕಾಟ ನಿಂತ ನಂತರ, ಮತ್ತೆ ಇದೀಗ 2024ರ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದ ನಂತರ ಟ್ಯಾಕ್ಸ್ ವಾರ್ ಜೋರು ಮಾಡಿದ್ದಾರೆ.

ಟ್ರಂಪ್‌ ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಮರಳಿದ ನಂತರ ಚೀನಾದ ವಿರುದ್ಧ ಗರಿಷ್ಠ ಶೇಕಡಾ 145 ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಆದೇಶ ನೀಡಿದ್ದರು. ಹೀಗಾಗಿ, ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಟ್ಯಾಕ್ಸ್ ವಾರ್ ಮಾಡಲು ಮುಂದಾಗಿತ್ತು. ಆದರೆ ಈಗ ಇಬ್ಬರೂ ತಣ್ಣಗಾಗಿದ್ದು, ಮಾತುಕತೆ ಮೂಲಕ ತಿಕ್ಕಾಟ ಕೊನೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ಚೀನಾ & ಅಮೆರಿಕ ನಡುವೆ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+