ಟಿಕ್‌ಟಾಕ್ ಮಾಲೀಕತ್ವ ಬದಲಾವಣೆ ಕುರಿತು ಅಮೆರಿಕ ಬೆದರಿಸುತ್ತಿದೆ: ಚೀನಾ ಆರೋಪ
ವಾಷಿಂಗ್ಟನ್, ಆಗಸ್ಟ್ 04: ಟಿಕ್‌ಟಾಕ್ ಮಾಲೀಕತ್ವ ಬದಲಾವಣೆ ಕುರಿತು ಅಮೆರಿಕ ಬೆದರಿಸುತ್ತಿದೆ ಎಂದು ಚೀನಾ ಹೇಳಿಕೆ ನೀಡಿದೆ.
Recommended Video
ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್ ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ ಚೀನಾ ಈ ಆರೋಪ ಮಾಡಿದೆ.
ಇದು ಮಾರುಕಟ್ಟೆ ಆರ್ಥಿಕತೆಯ ತತ್ವಗಳ(ವಿಶ್ವ ವಾಣಿಜ್ಯ ಸಂಸ್ಥೆಯ) ಮುಕ್ತತೆ, ಪಾರದರ್ಶಕತೆ ಮತ್ತು ತಾರತಮ್ಯರಹಿತ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್'ಗೆ ಸೆಪ್ಟೆಂಬರ್ 15ರವರೆಗೂ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾಲೀಕತ್ವ ಬದಲಾಗದಿದ್ದರೆ ಆ್ಯಪ್ ನ್ನು ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ ಎಂದು ಹೇಳಿದ್ದರು.
ಆ್ಯಪ್ ನ್ನು ಮೈಕ್ರೋಸಾಫ್ಟ್ ಅಥವಾ ಇತರೆ ಯಾವುದೇ ಸಂಸ್ಥೆ ಖರೀದಿ ಮಾಡಬಹುದು ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಈ ಮೂಲಕ ಅಮೆರಿಕ ಹೆದರಿಸುತ್ತಿದೆ ಎಂದು ಹೇಳಿದೆ.
ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಭಾರತದಲ್ಲಿ ಟಿಕ್‌ಟಾಕ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರಿತ್ತು. ಬಳಿಕ ಇದೀಗ ಅಮೆರಿಕವೂ ಅಪ್ಲಿಕೇಷನ್ ನಿಷೇಧಕ್ಕೆ ಮುಂದಾಗಿದೆ. ಅದಕ್ಕೂ ಮುನ್ನ ಹಲವು ಷರತ್ತುಗಳನ್ನು ವಿಧಿಸಿದೆ.












Click it and Unblock the Notifications