ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಚೆನ್ಯಾ ಗಣರಾಜ್ಯದ ಅಧ್ಯಕ್ಷನಿಗೆ ಕೊರೊನಾ, ಮಾಸ್ಕೋದಲ್ಲಿ ಪ್ರತ್ಯಕ್ಷ!

|
Google Oneindia Kannada News

ಮಾಸ್ಕೋ, ಮೇ 21: ರಷ್ಯಾ ಸುಪರ್ದಿಯಲ್ಲಿರುವ, ಚೆಚೆನ್ಯಾ ಗಣರಾಜ್ಯದ (Chechnya) ಮುಖ್ಯಸ್ಥ ರಂಜಾನ್ ಕದಿರೊವ್ ಅವರಿಗೆ ಮಾರಕ ಕೋವಿಡ್ -19 ಸೋಂಕು ತಗುಲಿದೆ ಎಂದು ಆರ್‌ಟಿ ನ್ಯೂಸ್ ವರದಿ ಮಾಡಿದೆ.

ಕೊರೊನಾ ಶಂಕೆಯ ಮೇಲೆ ಅವರನ್ನು ಖಾಸಗಿ ಜೆಟ್ ಮೂಲಕ ರಷ್ಯಾದ ಮಾಸ್ಕೋದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ವಲಯಗಳಲ್ಲಿನ ಮೂಲವನ್ನು ಉಲ್ಲೇಖಿಸಿ ಮಾಸ್ಕೋ ಸುದ್ದಿ ಸಂಸ್ಥೆ ಇಂಟರ್ಫ್ಯಾಕ್ಸ್ ಗುರುವಾರ ಸುದ್ದಿ ಮಾಡಿದೆ ಎಂದು ಆರ್ಟಿ ನ್ಯೂಸ್ ಹೇಳಿದೆ.

ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್ ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್

ಖಾಸಗಿ ಜೆಟ್ ಮೂಲಕ ರಷ್ಯಾದ ರಾಜಧಾನಿಗೆ ಅವರನ್ನು ಸ್ಥಳಾಂತರಿಸುವ ಸುದ್ದಿಗಳನ್ನು ಚೆಚೆನ್ ಗಣರಾಜ್ಯದ ಅಧಿಕಾರಿಗಳು ಅಲ್ಲಗಳೆದಿದ್ದರು. ಆದರೆ, ಈಗ ಮಾಸ್ಕೋದಲ್ಲಿ ಕದಿರೊವ್ ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಮೇಲ್ವಿಚಾರಣೆಯಲ್ಲಿ ಇದ್ದಾರೆ ಎಂದು ವರದಿ ಹೇಳಿದೆ.

Chechnya President Ramzan Kadyrov Tested Covid19 Positive

ಚೆಚೆನ್ಯಾ ಎಂಬ ಪುಟ್ಟ ರಾಷ್ಟ್ರದ ಅಧ್ಯಕ್ಷರಾಗಿದ್ದಾರೆ ರಂಜಾನ್ ಕದಿರೊವ್. ರಷ್ಯಾ ಸೇನೆ ಚೇಚನ್ಯಾದ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಾ ಬಂದಿದ್ದರೂ 15 ಲಕ್ಷ ಜನಸಂಖ್ಯೆ ಹೊಂದಿರುವ ಮುಸ್ಲಿಂ ಬಾಹುಳ್ಯದ ಈ ಪುಟ್ಟ ರಾಷ್ಟ್ರ ರಷ್ಯಾದ ಮುಂದೆ ಅಸ್ತಿತ್ವಕ್ಕಾಗಿ ನಿರಂತರ ಹೋರಾಡುತ್ತಲೆ ಬಂದಿದೆ.

English summary
Chechnya President Ramzan Kadyrov Tested Covid19 Positive, now he is hospitalised in Moscow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X